ಇಂಡೋ-ಪಾಕ್ ವಾರ್ ಫೀಕ್ಸ್

International, National, News, Sports No Comments on ಇಂಡೋ-ಪಾಕ್ ವಾರ್ ಫೀಕ್ಸ್ 43

ಇಗ್ಲೆಂಡ್‍ : ಮುಂದಿನ ವರ್ಷ ನಡೆಯಲಿರುವ ಸೀಮಿತ ಓವರ್‍ಗಳ ವೇಳಾಪಟ್ಟಿ ಪ್ರಕಟಗೊಂಡಿದ್ದು ಎರಡು ಬಾರಿ ವಿಶ್ವಚಾಂಪಿಯನ್ಸ್ ಆಗಿರುವ ಭಾರತ ಜೂನ್ 16 ರಂದು ಸಾಂಪ್ರಾದಾಯಿಕ ವೈರಿ ಪಾಕಿಸ್ತಾನವನ್ನು ಎದುರಿಸಲಿದೆ. ಮೇ 30 ರಂದು ಆರಂಭಗೊಳ್ಳುವ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಓಲ್ಡ್‍ಟ್ರಫರ್ಡ್ ಹಾಗೂ ಎಡ್ಜ್‍ಬಸ್ಟನ್‍ನಲ್ಲಿ ಜುಲೈ 9 ಹಾಗೂ 11 ರಂದು ಸೆಮಫೈನಲ್ ನಡೆಯಲಿದ್ದು , ಕ್ರಿಕೆಟ್ ಲೋಕದ ಸ್ವರ್ಗವೆಂದೇ ಬಿಂಬಿಸಿಕೊಂಡಿರುವ ಲಾಡ್ರ್ಸ್‍ನಲ್ಲಿ ಅಂತಿಮ ಕದನ ನಡೆಯಲಿದೆ. ಸುಮಾರು 46 ದಿನಗಳ ಕಾಲ ನಡೆಯಲಿರುವ ವಿಶ್ವಕಪ್‍ನಲ್ಲಿ 45 ಲೀಗ್ ಪಂದ್ಯಗಳು ಜರುಗಲಿದೆ.

ಭಾರತ ಸೆಣಸಲಿರುವ ಪಂದ್ಯಗಳು:
ಜೂನ್ 5 ರಂದು ದಕ್ಷಿಣ ಆಫ್ರಿಕಾ, ಜೂನ್ 9 ರಂದು ಆಸ್ಟ್ರೇಲಿಯಾ, ಜೂನ್ 13 ರಂದು ನ್ಯೂಜಿಲೆಂಡ್, ಜೂನ್ 16ಕ್ಕೆ ಪಾಕಿಸ್ತಾನ, ಜೂನ್ 22 ರಂದು ಆಫ್ಘಾನಿಸ್ಥಾನ, ಜೂನ್ 30 ರಂದು ಅತಿಥೇಯ ಇಂಗ್ಲೆಂಡ್ ತಂಡದ ಸವಾಲನ್ನು ಎದುರಿಸಲಿದೆ.

Related Articles

Leave a comment

Back to Top

© 2015 - 2017. All Rights Reserved.