ರುಸ್ತಂ ಚಿತ್ರದಲ್ಲಿ ಅಕ್ಷಯ್ ಧರಿಸಿದ್ದ ಬಟ್ಟೆ ಈಗ ವಿವಾದದ ಕೇಂದ್ರ ಬಿಂದು

News No Comments on ರುಸ್ತಂ ಚಿತ್ರದಲ್ಲಿ ಅಕ್ಷಯ್ ಧರಿಸಿದ್ದ ಬಟ್ಟೆ ಈಗ ವಿವಾದದ ಕೇಂದ್ರ ಬಿಂದು 18

ಮುಂಬಯಿ: ಬಾಲಿವುಡ್ ನ ರುಸ್ತುಂ ಸಿನಿಮಾದಲ್ಲಿ ನಟ ಅಕ್ಷಯ್ ಕುಮಾರ್ ಧರಿಸಿದ್ದ ನೌಕದಳ ಅಧಿಕಾರಿಯ ಕಾಸ್ಟ್ಬೂಂ ಅನ್ನು ಹರಾಜು ಹಾಕುವುದಾಗಿ ಹೇಳಿದ್ದ ಟ್ವಿಂಕಲ್ ಖನ್ನ ಇದಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.
1959ರ ನಾನಾವತಿ ಕೊಲೆ ಪ್ರಕರಣ ಸಂಬಂಧಿಸಿದ ಕಥಾವಸ್ತುವಾಗಿರಿಸಿಕೊಂಡು 2016 ರಲ್ಲಿ ತೆರೆಗೆ ಬಂದ ರುಸ್ತುಂ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ಧರಿಸಿದ್ದ ಸಮವಸ್ತ್ರವನ್ನು ಹರಾಜು ಹಾಕಿ, ಅದರಿಂದ ಬಂದ ಹಣವನ್ನು ಪ್ರಾಣಿಗಳ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಬಳಸಿಕೊಳ್ಳುವುದಾಗಿ ಟ್ವಿಂಕಲ್ ಖನ್ನಾ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಲೆಫ್ಟಿನೆಂಟ್ ಅಹ್ಲಾವಟ್ ವಸ್ತ್ರ ಹರಾಜು ಮಾಡುವುದು ಫನ್ನಿಬೋನ್ಸ್ ಜೋಕ್ ಗಳಂತೆ ಕೆಟ್ಟ ರೋಗ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.


ನಾನು ಇನ್ ಸ್ಟಾಗ್ರಾಂ ನಲ್ಲಿಲ್ಲ ಹಾಗಾಗಿ ಫೇಸ್ ಬುಕ್ ನಲ್ಲಿ ಉತ್ತರಿಸುತ್ತಿದ್ದೇನೆ, ರುಸ್ತುಂ ಸಿನಿಮಾದಲ್ಲಿ ನಿಮ್ಮ ಪತಿ ಧರಿಸಿರುವ ಡ್ರೆಸ್ ಅನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು ನಿಮ್ಮ ಎನ್ ಜಿಓ ಗೆ ಬಳಸಿಕೊಳ್ಳುವುದು ನಿಮ್ಮ ಫನ್ನಿ ಬೋನ್ಸ್ ಜೋಕ್ಸ್ ನ ರೋಗದಂತೆ.
ನಿಮ್ಮ ಪತಿ ರುಸ್ತುಂ ನಲ್ಲಿ ಧರಿಸಿರುವುದು ಬಟ್ಟೆಯ ತುಂಡು, ಅದು ನೌಕಾದಳದ ಸಮವಸ್ತ್ರವಲ್ಲ, ಜೊತೆಗೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಪತ್ನಿಯರು ಅವರ ಪತಿಯ ಸಮವಸ್ತ್ರಗಳನ್ನು ಹರಾಜು ಮಾಡುವುದಿಲ್ಲ,
ಸಿನಿಮಾದಲ್ಲಿ ಕಲಾವಿದರಿಗೆ ಬಟ್ಟೆಗಳನ್ನು ನಿರ್ಮಾಪಕರು ನೀಡುತ್ತಾರೆ. ಆದರೆ ಸಮವಸ್ತ್ರವನ್ನು ನಮಗೆ ರಾಷ್ಟ್ರಪತಿ ಅವರ ಕಚೇರಿಯಿಂದ ನೀಡಲಾಗುತ್ತದೆ. ಅದರಲ್ಲಿ ಯೋಧರ ಬೆವರು, ರಕ್ತ ಹಾಗೂ ಕಷ್ಟ ಬೆರೆತಿರುತ್ತದೆ. ಅದಕ್ಕೆ ತ್ರಿವರ್ಣ ದ್ವಜದ ಗೌರವ ನೀಡಲಾಗುತ್ತದೆ. ಸಮವಸ್ತ್ರದ ಹೆಸರಿನಲ್ಲಿ ಬಟ್ಟೆಯ ತುಂಡನ್ನು ಹರಾಜು ಹಾಕಲು ಯತ್ನಿಸಿದರೇ ನಾನು ನಿಮ್ಮನ್ನು ನ್ಯಾಯಾಲಯಕ್ಕೆ ಕರೆತಂದು ನಿಲ್ಲಿಸುತ್ತೇನೆ ಎಂದು ಪೋಸ್ಟ್ ಹಾಕಿದ್ದಾರೆ.
ಇನ್ನೂ ಅಹ್ಲಾವಟ್ ಅವರ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಟ್ವಿಂಕಲ್ ಖನ್ನಾ ಸಿನಿಮಾದಲ್ಲಿ ಧರಿಸಿದ ಬಟ್ಟೆಯನ್ನು ಹರಾಜು ಹಾಕಿ ಅದರಿಂದ ಬರುವ ಹಣವನ್ನು ಚಾರಿಟೆಬಲ್ ಟ್ರಸ್ಟ್ ಗೆ ಬಳಸಿಕೊಳ್ಳುವವರಿಗೆ ಬೆದರಿಕೆ ಹಾಕುವವರ ಹಕ್ಕುಗಳನ್ನು ನಾವು ಗೌರವಿಸಬೇಕೆ, ಇಂಥಹ ಹಿಂಸಾತ್ಮಕ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ, ನಾನು ಕೂಡ ಕಾನೂನು ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.