ಕಲ್ಪತರ ನಾಡಿನಲ್ಲಿ ‘ನಮೋ’ ಅಬ್ಬರ

BREAKING NEWS, Kannada News, National, News, Regional No Comments on ಕಲ್ಪತರ ನಾಡಿನಲ್ಲಿ ‘ನಮೋ’ ಅಬ್ಬರ 46

ತುಮಕೂರು :ಇಂದು ಪ್ರಧಾನಿ ನರೇಂದ್ರ ಮೋದಿ ತುಮಕೂರಿನಲ್ಲಿ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.

ಮೋದಿ ಭಾಷಣದ ಪ್ರಮುಖ ಅಂಶಗಳು

ಕಲ್ಪತರ ನಾಡು.. ಸಿದ್ದಗಂಗಾ ಮಠ ಬರೀ ರಾಜ್ಯದಲ್ಲಿ ಅಷ್ಟೇ ಅಲ್ಲಾ ಇಡೀ ದೇಶಕ್ಕೆ ಮಹನೀಯರನ್ನ ಕೊಡುಗೆ ನೀಡಿದೆ.

ತ್ರಿವಿಧ ದಾಸೋಹಿಗಳ ನಾಡಲ್ಲಿ ಹಲವು ಅಭಿವೃದ್ಧಿಗೆ ಸಿದ್ದಗಂಗಾ ಮಠ ಕಾರಣವಾಗಿದೆ ಅಂತಾ ಸಿದ್ದಗಂಗಾ ಮಠದ ಗುಣಗಾನ ಮಾಡಿದ್ರು. ಇನ್ನು ಇದೇ ವೇಳೆ ಗುಬ್ಬು ವೀರಣ್ಣ, ವಿಜ್ಞಾನಿ ರಾಜಾರಾಮಣ್ಣ, ಅಮರ ಶಿಲ್ಪಿ ಜಕಣಾಚಾರಿಯ ಕೊಡುಗೆ ಅಪಾರ ಅಂತಾ ಸ್ಮರಿಸಿದ್ರು.

ಕಳೆದ ಲೋಕಸಭಾ ಚುನಾವಣೆ ವೇಳೆ ದೇವೇಗೌಡರು ಬಿಜೆಪಿ ಏನಾದ್ರೂ ಗೆಲುವು ಸಾಧಿಸಿ,ಮೋದಿ ಪ್ರಧಾನಿಯಾದ್ರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ್ರು. ಆದ್ರೆ ನಾನು ದೇವೇಗೌಡರ ಭೇಟಿ ಮಾಡಿ, ನೀವು ದೇಶದ ಹಿರಿಯ ರಾಜಕಾರಣಿಗಳು ನಿಮ್ಮ ಕೊಡುಗೆ ದೇಶಕ್ಕೆ ಬೇಕಾಗಿದೆ. ನೀವು ನೂರು ವರ್ಷ ಬಾಳಬೇಕು ಅಂತಾ ಹೇಳಿದ್ದೆ. ಸರ್ವೆಗಳು ಹಾಗೂ ಸಮೀಕ್ಷೆಗಳು ಜೆಡಿಎಸ್​​​ 3ನೇ ಸ್ಥಾನ ಗಳಿಸೋದು ಗ್ಯಾರಂಟಿ. ಬಿಬಿಎಂಪಿಯಲ್ಲಿ ಕಾಂಗ್ರೆಸ್​​ ಹಾಗೂ ಜೆಡಿಎಸ್​ ಒಳಒಪ್ಪಂದ ಮಾಡಿಕೊಂಡು ಆಡಳಿತ ನಡೆಸ್ತಿವೆ ಅಂತಾ ವಾಗ್ದಾಳಿ ನಡೆಸಿವೆ.

ಇನ್ನು ಇದೇ ವೇಳೆ ನೀರಾವರಿ ಬಗ್ಗೆ ಮಾತನಾಡಿದ ಮೋದಿ, ಹೇಮಾವತಿ ನದಿ ನೀರು ಎಲ್ಲರಿಗೂ ತಲುಪ್ತಿದೆಯಾ..? ಎತ್ತಿನಹೊಳೆ ಯೋಜನೆ ತಡವಾಗೋದಕ್ಕೆ ಕಾರಣವೇನು ಅಂದ್ರು. ಮುಂದಿನ ದಿನಗಳಲ್ಲಿ ವಾಜಪೇಯಿಯವ್ರ ಕನಸಿನ ಕೂಸಾದ ನದಿ ಜೋಡಣೆ ಕಾರ್ಯವನ್ನ ನಾವು ತ್ವರಿತವಾಗಿ ಕೈಗೊಳ್ತೇವೆ ಅಂದ್ರು..ಹೇಮಾವತಿ-ನೇತ್ರಾವತಿ ನದಿ ಜೋಡಣೆಯಿಂದ 8 ಜಿಲ್ಲೆಗಳಿಗೆ ಅನುಕೂಲವಾಗಲಿದೆ ಅಂದ್ರು..

Related Articles

Leave a comment

Back to Top

© 2015 - 2017. All Rights Reserved.