ನನ್ನ ಬೆಳಸಿದ್ದು ರಾಮಕೃಷ್ಣ ಹೆಗಡೆ – ಸಿಎಂ ಸಿದ್ದು

Kannada News, National, News No Comments on ನನ್ನ ಬೆಳಸಿದ್ದು ರಾಮಕೃಷ್ಣ ಹೆಗಡೆ – ಸಿಎಂ ಸಿದ್ದು 26

ಬೆಂಗಳೂರು : ನನ್ನನ್ನು ಗುರುತಿಸಿ ಬೆಳೆಸಿದ್ದು ರಾಮಕೃಷ್ಣ ಹೆಗಡೆ, ದೇವೇಗೌಡರು ನನ್ನನ್ನು ಬೆಳೆಸಿದ್ದೇನೆ ಎನ್ನುತ್ತಾರೆ.ನನ್ನನ್ನು ಗುರುತಿಸಿ ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ಮಾಡಿದ್ದು ರಾಮಕೃಷ್ಣ ಹೆಗಡೆಯವರು ಎಂದು ಸಿಎಂ ಸಿದ್ದರಾಮಯ್ಯ ದೇವೇಗೌಡರಿಗೆ ಟಾಂಗ್ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಕೃಷ್ಣ ಹೆಗಡೆಯವರೇ ನನ್ನನ್ನು ಮಂತ್ರಿಯನ್ನಾಗಿ ಮಾಡಿದ್ದು, ನಾನು ಜೆ.ಹೆಚ್. ಪಟೇಲ್, ಬೊಮ್ಮಾಯಿ, ಹೆಗಡೆ, ಪ್ರಕಾಶ್, ಸಿಂಧ್ಯಾ, ಪಕ್ಷ ಕಟ್ಟಲಿಲ್ಲವೇ? ಎಂದು ದೇವೇಗೌಡರನ್ನು ಪ್ರಶ್ನಿಸಿದ್ದಾರೆ.

ನಮ್ಮೆಲ್ಲರ ಪರಿಶ್ರಮದ ಫಲವಾಗಿ 1994 ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂತು. ದೇವೇಗೌಡರು ಒಬ್ಬ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಿಎಂ, ಪಿಎಂ ಆಗಿದ್ದವರು. ಆದರೆ ಅವರು ನನ್ನನ್ನು ಬೆಳೆಸಿದ್ದೇನೆ ಎಂದು ಎನ್ನುವುದು ಸರಿಯಲ್ಲ ಎಂದರು.

Related Articles

Leave a comment

Back to Top

© 2015 - 2017. All Rights Reserved.