“ಜೆಡಿಎಸ್ ಜನತಾ ಪ್ರಣಾಳಿಕೆ ಜನರದ್ದೇ ಆಳ್ವಿಕೆ”

News, Regional, Top News No Comments on “ಜೆಡಿಎಸ್ ಜನತಾ ಪ್ರಣಾಳಿಕೆ ಜನರದ್ದೇ ಆಳ್ವಿಕೆ” 44

ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ಬಳಿಕ ಇದೀಗ ಜೆಡಿಎಸ್ ಕೂಡ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಸೋಮವಾರ ಬೆಳಗ್ಗೆ ನಗರದಲ್ಲಿರುವ ಜೆಡಿಎಸ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು, ‘ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ’ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.ಇನ್ನು ಜೆಡಿಎಸ್ ನ ಪ್ರಣಾಳಿಕೆಯನ್ನು ನಿವೃತ್ತ ಐಎಎಸ್ ಅಧಿಕಾರಿ ಸುಬ್ರಮಣ್ಯ ನೇತೃತ್ವದಲ್ಲಿ ಸಿದ್ಧಪಡಿಸಲಾಗಿದ್ದು, ಈಗಾಗಲೇ ಪಕ್ಷವು ಘೋಷಣೆ ಮಾಡಿರುವಂತೆ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರಾಜ್ಯದ ರೈತರ ಎಲ್ಲಾ ರೀತಿಯ ಸಾಲ ಮನ್ನಾ ತೀರ್ಮಾನವು ಪ್ರಣಾಳಿಕೆಯ ಪ್ರಮುಖ ಅಂಶವಾಗಿದೆ. ಅಂತೆಯೇ ಕುಮಾರಸ್ವಾಮಿ ಅವರು ವಿವಿಧ ಕ್ಷೇತ್ರಗಳ ಜನರೊಂದಿಗೆ ನಡೆಸಿರುವ ಸಂವಾದಗಳಲ್ಲಿ ಪಡೆದ ಮಾಹಿತಿಗಳನ್ನು ಸಹ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.

ಪ್ರಣಾಳಿಕೆಯಲ್ಲಿನ ಅಂಶಗಳು 

ಆರೋಗ್ಯ ಸೇವೆ ನೀಡಲು ನೆಟ್​ವರ್ಕ್​
ಜೆನರಿಕ್ ಔಷಧಿಗಳು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಲಭ್ಯ.ಉಚಿತವಾಗಿ ಜೆನರಿಕ್ ಔಷಧಿಗಳು ಲಭ್ಯ ವ್ಯವಸ್ಥೆ

ಮನೆ ಬಾಗಿಲಿಗೆ ಜೆನರಿಕ್ ಔಷಧಿಗಳು ಸಿಗುವ ವ್ಯವಸ್ಥೆ
ಗರ್ಭಿಣಿಯರಿಗೆ 36 ಸಾವಿರ ರೂಪಾಯಿ ನೆರವು.
ಹೆರಿಗೆ ಪೂರ್ವದಲ್ಲಿ ಮೂರು ತಿಂಗಳು
ಹೆರಿಗೆ ನಂತರ 3 ತಿಂಗಳ ಕಾಲ 6000 ರೂ ಸಹಾಯಧನ
ಹೊಸ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ
ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿಯಲ್ಲಿ ಆಸ್ಪತ್ರೆ
ಮಾರಕರೋಗಗಳ ಸಂದರ್ಭದಲ್ಲಿ ಮಧ್ಯಸ್ಥಿಕೆ
ವಾರ್ಷಿಕ 2 ಲಕ್ಷಕ್ಕಿಂತ ಕಡಿಮೆ ಆದಾಯವಿರುವವರಿಗೆ ಸಹಾಯಧನ ಆರೋಗ್ಯ ಸಹಾಯಧನ ವ್ಯವಸ್ಥೆ

ಕರ್ನಾಟಕ ರಾಜ್ಯ ಆರೋಗ್ಯ ಸಹಾಯನಿಧಿ ವ್ಯವಸ್ಥೆ
ಎಲ್ಲ ಜಿಲ್ಲೆಗಳಲ್ಲಿ ಪ್ಯಾರಾಮೆಡಿಕಲ್ ಕಾಲೇಜು ಪ್ರಾರಂಭ
ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಹೊಸ ಬ್ಯಾಂಡ್
20 ಸಾವಿರ ಕೌಶಲ್ಯಯುತ ಸಹಾಯಕರ ಹೊಸ ಬ್ರಾಂಡ್

ಬಯಲು ಸೀಮೆಗೆ 60 ಟಿಎಂಸಿ ನೀರು ವ್ಯವಸ್ಥೆ
ನೀರಾವರಿ ಕ್ಷೇತ್ರಕ್ಕೆ 1 ಲಕ್ಷದ 50 ಸಾವಿರ ಕೋಟಿ ರೂ ಹೂಡಿಕೆ
ಕಾವೇರಿ ಜನವಿವಾದದಲ್ಲಿ ಆದ ಅನ್ಯಾಯ ತಡೆಯುವ ಭರವಸೆ
ಕಾವೇರಿ ಜಲಾನಯನ ಪ್ರದೇಶಕ್ಕೆ ಹೆಚ್ಚಿನ ನೀರು
ಹೆಚ್ಚುವರಿಯಾಗಿ 15 ಟಿಎಂಸಿ ನೀರು ಬಳಸಿಕೊಳ್ಳುವ ಯೋಜನೆ
ಕಾಲುವೆಗಳ ಮೇಲ್ದರ್ಜೆ, ವಿವಿ ಕೆನಾಲ್ ಆಧುನೀಕರಣ,
ಅಣೆಕಟ್ಟುಗಳ ಆಧುನೀಕರಣ, ಕೆರೆಗಳ ಪುನರುಜ್ಜೀವನ
ಕಣ್ವ ಎಲ್​ಐಎಸ್​​ ಅನ್ನು ಪೂರ್ಣಗೊಳಿಸುವುದು​
ಅಮರ್ಜಾ, ಮುಳ್ಳಮುರಿ ಕೆಳದಂಡೆ, ದಿಡೋದ್ಗಂಗಾ ಯೋಜನೆಗಳ ಪೂರ್ಣ
ಅಧಿಕಾರಕ್ಕೆ ಬಂದ 4 ತಿಂಗಳ ಒಳಗೆ ಯೋಜನೆ ಪೂರ್ಣ

ಕೋಲಾರ-ಚಿಕ್ಕಬಳ್ಳಾಪುರಕ್ಕೆ 60 ಟಿಎಂಸಿ ನೀರಿನ ಯೋಜನೆ
ಅರಸೀಕೆರೆ, ತಿಪಟೂರು, ಚಿಕ್ಕಬಳ್ಳಾಪುರ,
ಕೋಲಾರ ಜಿಲ್ಲೆಗೆ 60 ಟಿಎಂಸಿ ಕುಡಿಯುವ ನೀರು
ಪಶ್ಚಿಮ ಘಟ್ಟಗಳಿಂದ 60 ಟಿಎಂಸಿ ನೀರು ತರುವ ಪ್ರಯತ್ನ

ನೀರಾವರಿ ಯೋಜನೆಯಿಂದ ತೊಂದರೆಗೊಳಗಾದವರಿಗೆ ಪುನರ್ವಸತಿ
ಭೂಮಿ ಕಳೆದುಕೊಂಡವರಿಗೆ ಆಜೀವ ಪರಿಹಾರ
ಭೂಮಿ ಕಳೆದುಕೊಂಡವರ ಜೀವನ ಮಟ್ಟ ಸುಧಾರಣೆಗೆ ಆದ್ಯತೆ
ಎಲ್ಲ ಯೋಜನಾ ಸಂತ್ರಸ್ತರಿಗೂ ಆಜೀವನ ಪಿಂಚಣಿ,
ಉಚಿತ ಆರೋಗ್ಯ ವಿಮೆ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು,
ಉದ್ಯೋಗ, ವಸತಿಗೆ ನೆರವು ನೀಡಲಾಗುವುದು
ನೀರಾವರಿ ಯೋಜನೆಗಳಿಗೆ ಹಣಕಾಸಿ ನೆರವು
ಮುಂದಿನ 5 ವರ್ಷಗಳ್ಳಿ ಒಂದು ಲಕ್ಷ ಕೋಟಿ ಮೀಸಲು

ಕಲಬುರಗಿಯಲ್ಲಿ ಸೌರಶಕ್ತಿ ಕೈಗಾರಿಕೆಯ ಅಭಿವೃದ್ಧಿ
ಈ ಯೋಜನೆಗಾಗಿ ಸರ್ಕಾರದಿಂದ 2000 ಕೋಟಿ,
ಖಾಸಗಿಯಾಗಿ 3000 ಕೋಟಿ ಹೂಡಿಕೆ
5 ವರ್ಷಗಳಲ್ಲಿ 2 ಲಕ್ಷ ಕುಟುಂಬಗಳಿಗೆ ಉದ್ಯೋಗದ ಭರವಸೆ

Related Articles

Leave a comment

Back to Top

© 2015 - 2017. All Rights Reserved.