ಪುರಾತತ್ವ ಇಲಾಖೆಗೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್

National, News No Comments on ಪುರಾತತ್ವ ಇಲಾಖೆಗೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್ 14

ದೆಹಲಿ: ಐತಿಹಾಸಿಕ ತಾಜ್ ಮಹಲ್ ನ ಸಂರಕ್ಷಣೆ, ಸುರಕ್ಷತೆಗೆ ತಕ್ಕ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಬಾರತೀಯ ಪುರಾತತ್ವ ಇಲಾಖೆಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ತಾಜ್ ಮಹಲ್ ಗೆ ಕೀಟಗಳಿಂದ ಹಾನಿಯಾಗುತ್ತಿದೆ, ಇದರ ಸುರಕ್ಷತೆಗಾಗಿ ಎಎಸ್ಐ ಸೇರಿದಂತೆ ಇತರೆ ಸಂಸ್ಥೆಗಳು ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಿದೆ ಎನ್ನುವುದನ್ನು ತಿಳಿಸಲು ನ್ಯಾಯಾಲಯ ಸೂಚನೆ ನಿಡಿದೆ.
“ಎಎಸ್ಐ ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸಿದ್ದೇ ಆಗಿದ್ದರೆ ಈ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಇಷ್ತಾಗಿಯೂ ಎಎಸ್ಐ ತನ್ನನ್ನು ತಾನು ಸಮರ್ಥಿಸಿಕೊಳ್ಳುವುದು ಕಂಡು ಅಚ್ಚರಿಯಾಗುತ್ತದೆ. ಇಂತಹಾ ಎಎಸ್ಐ ಅಗತ್ಯವಾಗಿದೆಯೆ ಎನ್ನುವದನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕಿದೆ” ನ್ಯಾಯಮೂರ್ತಿಗಳಾದ ಎಂಬಿ ಲೋಕುರ್, ದೀಪಕ್ ಗುಪ್ತಾ ಅವರಿದ್ದ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಏತನ್ಮದ್ಯೆ ಕೇಂದ್ರದಿಂದ ನೇಮಕವಾಗಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಎನ್ಎಸ್ ನಾಡಕರ್ಣಿ ಪರಿಸರ ಮತ್ತು ಅರಣ್ಯ ಸಚಿವಾಲಯ ತಾಜ್ ಮಹಲ್ ನ ಸುರಕ್ಶ್ಃಅತೆ ಹಾಗೂ ಸಂರಕ್ಷಣೆ ಸಂಬಂಧ ತನಿಖೆ ನಡೆಸಲು ಅಂತರರಾಷ್ಟ್ರೀಯ ತಜ್ಞರನ್ನು ನೇಮಿಸುವ ಸುಪ್ರೀಂ ಕೋರ್ಟ್ ನ ಸಲಹೆಯನ್ನು ಪರಿಗಣಿಸುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತಾಜ್ ಮಹಲ್ ಪರಿಸರದಲ್ಲಿ ಹರಿಯುತ್ತಿದ್ದ ಯಮುನಾ ನದಿ ನೀರನ್ನು ಸ್ಥಗಿತಗೊಳಿಸಿದ್ದೇ ಕೀಟಗಳು ಉತ್ಪತ್ತಿಯಾಗಿ ಸಮಸ್ಯೆ ಉಂಟಾಗಲು ಕಾರಣ ಎಂದು ಎಎಸ್ಐ ಕೌನ್ಸಿಲ್ ಹೇಳಿದೆ.
ತಾಜ್ ಮಹಲ್ ಹಾಗೂ ತಾಜ್ ತ್ರಪೆಜಿಯಮ್ ವಲಯದಲ್ಲಿನ ಪರಿಸರ ರಕ್ಷನೆ ಸಂಬಂಧ ಉತ್ತರ ಪ್ರದೇಶ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕರಡು ಪ್ರತಿ ನೀಡುವಂತೆ ಸುಪ್ರೀಂ ಕೋರ್ಟ್ ಈ ವರ್ಷದ ಮಾರ್ಚ್ ನಲ್ಲಿ ಕೇಳಿತ್ತು.
ಮೊಘಲ್ ಚಕ್ರವರ್ತಿ ಷಹ ಜಹಾನ್ 1631 ರಲ್ಲಿ ತನ್ನ ಹೆಂಡತಿ ಮುಮ್ತಾಜ್ ಮಹಲ್ ನೆನಪಿಗಾಗಿ ನಿರ್ಮಿಸಿದ ಸ್ಮಾರಕದ ರಕ್ಷಣೆಗೆ ಸರ್ಕಾರಗಳು ತೆಗೆದುಕೊಂಡ ಉಪಕ್ರಮದ ಕುರಿತ ಮೇಲ್ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿದೆ.

Related Articles

Leave a comment

Back to Top

© 2015 - 2017. All Rights Reserved.