ಬೆಂಗ್ಳೂರಿನ ಐಸ್ ಕ್ರೀಂ ಗೆ ರಾಹುಲ್ ಗಾಂಧಿ ಫಿದಾ!

BREAKING NEWS, News, Regional No Comments on ಬೆಂಗ್ಳೂರಿನ ಐಸ್ ಕ್ರೀಂ ಗೆ ರಾಹುಲ್ ಗಾಂಧಿ ಫಿದಾ! 9

ಬೆಂಗಳೂರು: ಚುನಾವಣಾ ದಿನ ಹತ್ತಿರವಾಗುತ್ತಿದ್ದಂತೆಯೇ ರಾಜ್ಯಕ್ಕೆ ಆಗಮಿಸಿ ಪ್ರಚಾರ ಮಾಡುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಗರದಲ್ಲಿರೋ ದೊರೆಯುವ ಐಸ್ ಕ್ರೀಂ ಗೆ ಫಿದಾ ಆಗಿದ್ದಾರೆ.

ಚುನಾವಣಾ ಪ್ರಚಾರಕ್ಕೆ ನಗರಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಅವರು, ಶಿವಾನಂದ ಸರ್ಕಲ್ ನಲ್ಲಿರುವ ರಿಚಿ ರಿಚ್ ಗೆ ಭೇಟಿ ನೀಡಿ, ಅಲ್ಲಿ ಐಸ್ ಕ್ರೀಂ ಸವಿದಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಮತ್ತೊಮ್ಮೆ ಬರುವುದಾಗಿ ತಿಳಿಸಿದ್ದಾರೆ.

ಟ್ವೀಟ್ ನಲ್ಲೇನಿದೆ?: `ನನ್ನ ಇಷ್ಟು ದಿನದ ಚುನಾವಣಾ ಪ್ರಚಾರದ ಕೊನೆಯ ದಿನವನ್ನು ಕಳೆಯಲು ಬೆಂಗಳೂರಿನಲ್ಲಿರುವ ಐಸ್ ಕ್ರೀಂ ಪಾರ್ಲರ್ ಒಂದು ಒಳ್ಳೆಯ ಜಾಗವಾಗಿತ್ತು. ಇಲ್ಲಿ ದೊರೆಯುವ ಐಸ್ ಕ್ರೀಂ ತುಂಬಾನೇ ಟೇಸ್ಟಿಯಾಗಿದೆ. ಅಲ್ಲದೇ ಇಲ್ಲಿನ ಸಿಬ್ಬಂದಿ ಕೂಡ ಸ್ನೇಹ ಮನೋಭಾವದಿಂದ ಕೂಡಿದ್ದಾರೆ. ಈ ಪಾರ್ಲರ್ ನ ಮಾಲಕನನ್ನು ಮತ್ತು ಕೆಲ ಗ್ರಾಹಕರನ್ನು ಭೇಟಿ ಮಾಡಿ ಮಾಡಿದ್ದು, ಖುಷಿ ನೀಡಿದೆ. ಆದಷ್ಟು ಬೇಗ ಮತ್ತೆ ಇದೇ ಪಾರ್ಲರ್ ಗೆ ಭೇಟಿ ನೀಡುತ್ತೇನೆ ಅಂತ ಬರೆದುಕೊಂಡಿದ್ದಾರೆ.

.

View image on TwitterView image on TwitterView image on TwitterView image on Twitter

Related Articles

Leave a comment

Back to Top

© 2015 - 2017. All Rights Reserved.