ಅರ್ಜುನ್ ಕಪೂರ್ ಕಂಡು ಮುಖ ತಿರುಗಿಸಿಕೊಂಡ ಸಲ್ಮಾನ್ ಖಾನ್

BREAKING NEWS, Entertainment No Comments on ಅರ್ಜುನ್ ಕಪೂರ್ ಕಂಡು ಮುಖ ತಿರುಗಿಸಿಕೊಂಡ ಸಲ್ಮಾನ್ ಖಾನ್ 24

ಮುಂಬೈ: ಬಾಲಿವುಡ್ ನಟಿ ಸೋನಮ್ ಕಪೂರ್ ಮೇ 8ರಂದು ತನ್ನ ಗೆಳೆಯ ಆನಂದ್ ಅಹುಜಾ ಜೊತೆ ಬಾಂದ್ರಾದ ತನ್ನ ಆಂಟಿಯ ಬಂಗಲೆಯಲ್ಲಿ ಮದುವೆಯಾಗಿದ್ದರು.

ಮಂಗಳವಾರ ಬೆಳಗ್ಗೆ ಮದುವೆಯಾದ ನಂತರ ಸಂಜೆ ಲೀಲಾ ಹೋಟೆಲಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಜರುಗಿತ್ತು. ಆರತಕ್ಷತೆಯಲ್ಲಿ ಕತ್ರಿನಾ ಕೈಫ್, ಐಶ್ವರ್ಯ ರೈ ಬಚ್ಚನ್, ಅಲಿಯಾ ಭಟ್, ಜಾಕ್ವೇಲಿನ್ ಫರ್ನಾಂಡಿಸ್ ಹಲವು ಮಂದಿ ಪಾಲ್ಗೊಂಡಿದ್ದರು.

ಸೋನಮ್ ಆರತಕ್ಷತೆಯಲ್ಲಿ ಸಲ್ಮಾನ್ ಖಾನ್ ಕೂಡ ಭಾಗಿಯಾಗಿದ್ದರು. ಇದೇ ವೇಳೆ ಅರ್ಜುನ್ ಕಪೂರ್ ನಿಂತಿದ್ದನ್ನು ಕಂಡರೂ ನೋಡದೇ ಮಾತನಾಡಿಸದೇ ಸಲ್ಮಾನ್ ಮುಖ ತಿರುಗಿಸಿಕೊಂಡಿದ್ದಾರೆ.

ನಡೆದಿದ್ದೇನು?: ಮಂಗಳವಾರ ಸಂಜೆ ಮುಂಬೈನ ಲೀಲಾ ಹೋಟೆಲಿನಲ್ಲಿ ಸೋನಮ್ ಕಪೂರ್ ಹಾಗೂ ಆನಂದ್ ಅಹುಜಾ ಆರತಕ್ಷತೆ ನಡೆಯಿತು. ಈ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಕೂಡ ಆಗಮಿಸಿದ್ದರು. ಸಲ್ಮಾನ್ ಖಾನ್ ಆಗಮಿಸುವಾಗ ಜಾಹ್ನವಿ ಕಪೂರ್, ಖುಷಿ ಕಪೂರ್ ಹಾಗೂ ಅನ್ಷುಲಾ ಕಪೂರ್ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಇನ್ನೂ ಕತ್ರಿನಾ ಕೈಫ್ ಕೂಡ ಸ್ವಲ್ಪ ದೂರದಲ್ಲೇ ನಿಂತಿದ್ದರು. ಆರತಕ್ಷತೆಗೆ ಬಂದ ತಕ್ಷಣ ಸಲ್ಮಾನ್ ಕತ್ರಿನಾ ಅವರನ್ನು ಅಪ್ಪಿಕೊಂಡರು. ಆದರೆ ಅಲ್ಲೇ ನಿಂತಿದ್ದ ಅರ್ಜುನ್ ಕಪೂರ್ ರನ್ನು ಭಾಯಿಜಾನ್ ತಿರುಗಿ ಸಹ ನೋಡಿಲ್ಲ. ಇಷ್ಟೆಲ್ಲಾ ಆದ್ಮೇಲೆ ಅರ್ಜುನ್, ಸಲ್ಮಾನ್ ಖಾನ್ ಅವರನ್ನು ಮಾತನಾಡಿಸುವ ಧರ್ಯ ಮಾಡಲಿಲ್ಲ. ನಂತರ ಅಲ್ಲಿಂದ ಹೊರಟು ಹೋದರು.

ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಹಾಗೂ ಅವರ ಪತ್ನಿ ಮಲೈಕಾ ಅರೋರ ವಿಚ್ಚೇದನ ಪಡೆದು ಒಂದು ವರ್ಷ ಆಗಿದೆ. ಅರ್ಜುನ್ ಕಪೂರ್ ರಿಂದ ಅರ್ಬಾಜ್ ಖಾನ್ ಸಂಸಾರ ಹಾಳಾಯಿತು. ಈ ಕಾರಣಕ್ಕಾಗಿ ಸಲ್ಮಾನ್ ಖಾನ್‍ಗೆ ಅರ್ಜುನ್ ಕಪೂರ್ ಮೇಲೆ ಕೋಪ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಅರ್ಬಾಜ್ ಖಾನ್ ಹಾಗೂ ಮಲೈಕಾ ಮದುವೆಯಾಗಿ 18 ವರ್ಷಗಳು ಆಗಿದ್ದು, ಕಳೆದ ವರ್ಷ ವಿಚ್ಛೇದನೆ ಕೂಡ ಪಡೆದರು. ಈ ದಂಪತಿಯ ವಿಚ್ಛೇದನಕ್ಕೆ ನಟ ಅರ್ಜುನ್ ಕಪೂರ್ ಜೊತೆ ಮಲೈಕಾಗಿದ್ದ ಆತ್ಮೀಯ ಸಂಬಂಧ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು.

Related Articles

Leave a comment

Back to Top

© 2015 - 2017. All Rights Reserved.