ಅಳುವ ಗಂಡಸನ್ನು ನಗುವ ಹೆಂಗಸನ್ನು ನಂಬಬಾರದು: ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ವ್ಯಂಗ್ಯ

BREAKING NEWS, News, Regional, Top News No Comments on ಅಳುವ ಗಂಡಸನ್ನು ನಗುವ ಹೆಂಗಸನ್ನು ನಂಬಬಾರದು: ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ವ್ಯಂಗ್ಯ 10

ರಾಮನಗರ: ಅಳುವ ಗಂಡಸನ್ನ, ನಗುವ ಹೆಂಗಸನ್ನ ನಂಬಬಾರದು ಕಣ್ರೀ. ಗಂಡಸಾದವನು ಎಂತಹ ಸಂದರ್ಭದಲ್ಲೂ ಧೈರ್ಯ, ಶಕ್ತಿ ತುಂಬಿ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಪರೋಕ್ಷವಾಗಿ ಎಚ್.ಡಿ ಕುಮಾರಸ್ವಾಮಿ ಹಾಗೂ ಎಚ್.ಡಿ ದೇವೇಗೌಡ ವಿರುದ್ಧ ಎಚ್.ಸಿ ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

ರಾಮನಗರ ತಾಲೂಕಿನ ಬಿಡದಿಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಸೇರ್ಪಡೆಯಾದ ಬಳಿಕ, ಒಳ್ಳೆಯ ಎಂಎಲ್‍ಎ ನನ್ನು ಕರ್ಕೊಂಡ್ ಹೋಗ್ಬಿಟ್ರಿ ಅಂತಾ ಜೆಡಿಎಸ್‍ನವರು ಹೇಳಿದ್ರೆ, ಅಲ್ಲಿನ ಕೆಲವರು ಹಲ್ಲು ಹಲ್ಲು ಕಡಿದುಕೊಂಡು ಕೂತವರೇ ಎಂದು ತಿಳಿಸಿದ್ರು.

ಜೆಡಿಎಸ್‍ನಲ್ಲಿ ಟಿಕೆಟ್ ಗೊಂದಲದ ಬಗ್ಗೆ ಮಾತನಾಡಿದ ಅವರು, ಇದು ರಾಜಕಾರಣ ಏನ್ರೀ? ಇಂತಹ ರಾಜಕಾರಣದ ಅವಶ್ಯಕತೆ ಇದೆಯೇನ್ರೀ. ಶಿಡ್ಲಘಟ್ಟದಲ್ಲಿ ಟಿಕೆಟ್ ತಗೊಂಡು ನಿಂತಿರುವವರ ಮನೆ ಹಾಳಾಗೋದಿಲ್ವೆನ್ರೀ. ದೇವನಹಳ್ಳಿಯಲ್ಲಿ ಒಬ್ಬನಿಗೆ ಬಿ ಫಾರಂ ಕೊಡ್ತಾರೆ, ಇನ್ನೊಬ್ಬನಿಗೆ ಸಿ ಫಾರಂ ಕೊಡ್ತಾರೆ. ಅವರ ಕುಟುಂಬದವರು ಸೂಸೈಡ್ ಮಾಡ್ಕೊಬೇಕೇನ್ರೀ? ಇವರನ್ನ ನಂಬಿಕೊಂಡು ಸಾಯಂಕಾಲ ಬರ್ತಾರೆ ನಿಮ್ಮ ಮುಂದೆ ಕಣ್ಣೀರು ಹಾಕ್ತಾರೆ ನೋಡಿ ಎಂದು ವ್ಯಂಗ್ಯವಾಡಿದ್ರು.

Related Articles

Leave a comment

Back to Top

© 2015 - 2017. All Rights Reserved.