ಫೇಸ್‌ಬುಕ್ ಇದ್ದರೆ ವಯಸ್ಸಾದವರಿಗೆ ಒಂಟಿತನ ಕಾಡಲ್ಲವಂತೆ!!

BREAKING NEWS, Featured, Technology No Comments on ಫೇಸ್‌ಬುಕ್ ಇದ್ದರೆ ವಯಸ್ಸಾದವರಿಗೆ ಒಂಟಿತನ ಕಾಡಲ್ಲವಂತೆ!! 59

ಅದೇನು ಯಾವಾಗಲೂ ಮೊಬೈಲ್ ಹಿಡಿದು ಫೇಸ್‌ಬುಕ್‌ನಲ್ಲಿಯೇ ಮುಳುಗಿರುತ್ತೀಯ ಎಂದು ಯುವಜನತರಯನ್ನು ದೂಷಿಸುವ ಅಜ್ಜ-ಅಜ್ಜಿಯಂದಿರಿಗೆ ಫೇಸ್‌ಬುಕ್‌ನಿಂದ ಭಾರೀ ಲಾಭವಿದೆಯಂತೆ.

ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಬಳಸುವುದರಿಂದ ವೃದ್ಧರಿಗೆ ಒಂಟಿ ಕಾಡುವುದು ಕಡಿಮೆಯಾಗುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಹೌದು, ಈಗಿನ ಯುವಕ ಯುವತಿಯರಿಗೆ ಫೇಸ್‌ಬುಕ್ ಬಿಟ್ಟು ಒಂದು ಕ್ಷಣವೂ ಇರಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಎದುರಾಗಿರುವಾಗ, ವಯಸ್ಸಾದವರ ಒಂಟಿತನವನ್ನು ಕಡಿಮೆ ಮಾಡುವುದರಲ್ಲಿ ಸಾಮಾಜಿಕ ಜಾಲತಾಣಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ದಿ ಜರ್ನಲ್ ನ್ಯೂ ಮೀಡಿಯಾ ಹಾಗೂ ಸೊಸೈಟಿ ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ತಿಳಿದುಬಂದಿದೆ.

ಫೇಸ್‌ಬುಕ್ ನಂತಹ ಸಾಮಾಜಿಕ ಜಾಲತಾಣಗಳು ಒಂಟಿತನ ನೀಗಿಸುವಲ್ಲಿ ಸಹಕಾರಿಯಾಗುತ್ತವೆ. ಪ್ರಮುಖವಾಗಿ ವೃದ್ಧರಲ್ಲಿ ಒಂಟಿತನ ನೀಗಿಸುವುದಕ್ಕೆ ಇಂತಹ ಸಾಮಾಜಿಕ ಜಾಲತಾಣಗಳು ಸಹಕಾರಿಯಾಗುತ್ತವೆ ಎಂದು ಧ್ಯಯನ ವರದಿಯಲ್ಲಿ ಅಮೆರಿಕದ ಪೆನ್ಸಲ್ವೇನಿಯಾ ವಿಶ್ವವಿದ್ಯಾನಿಲಯದ ಫ್ರೊಫೆಸರ್ ಆಗಿರುವ ಎಸ್ ಶ್ಯಾಮ್ ಸುಂದರ್ ಅವರು ಹೇಳಿದ್ದಾರೆ.

ಅಧ್ಯಯನದ ಮೇಳೆ 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ 200 ಜನರಿಗೆ ಒಂದು ವರ್ಷ ಫೇಸ್ ಬುಕ್ ಅನ್ನು ಬಳಕೆ ಮಾಡುವಂತೆ ಸೂಚಿಸಲಾಗಿತ್ತು. ಈ ಅವಧಿಯಲ್ಲಿ ವೃದ್ಧರು ಬಳಸಿದ್ದ ಫೇಸ್ ಬುಕ್ ಟೂಲ್ ಗಳು ಹಾಗೂ ಅದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿ ಈ ವರದಿಯನ್ನು ತಯಾರಿಸಲಾಗಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಬಹುತೇಕ ವೃದ್ಧರು ತಾವು ಹೇಳಬೇಕೆಂದಿರುವುದನ್ನು ಫೇಸ್‌ಬುಕ್ ಮೂಲಕ ಹಂಚಿಕೊಳ್ಳುತ್ತಿದ್ದರು. ಅದಕ್ಕೆ ಬರುತ್ತಿದ್ದ ಪ್ರತಿಕ್ರಿಯೆಗಳು ವೃದ್ಧರಲ್ಲಿ ಸಾಮಾಜಿಕ ಸಂವಹನದ ಭಾವವನ್ನು ಮೂಡಿಸುತ್ತಿದ್ದವು. ಇದು ವೃದ್ಧರಿಗೆ ಒಂಟಿ ಕಾಡುವುದು ಕಡಿಮೆಯಾಗುತ್ತದೆ ಎಂದು ಅಧ್ಯಯನ ವರದಿಯಲ್ಲಿ ಹೇಳಿದೆ.

Related Articles

Leave a comment

Back to Top

© 2015 - 2017. All Rights Reserved.