ತೃತೀಯ ರಂಗ ರಚನೆಗೆ ರಾಜ್ಯವೇ ಅಡಿಗಲ್ಲು..!

National, News, Regional, Top News No Comments on ತೃತೀಯ ರಂಗ ರಚನೆಗೆ ರಾಜ್ಯವೇ ಅಡಿಗಲ್ಲು..! 32

ಬೆಂಗಳೂರು : ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರವೇನೋ ರಚನೆಯಾಗುತ್ತಿದೆ. ಆದರೆ ಈ ಮೈತ್ರಿ ಸರ್ಕಾರ ಮತ್ತೆ ದೇಶದಲ್ಲಿ ತೃತೀಯ ರಂಗದ ರಚನೆಗೆ ಅಡಿಗಲ್ಲಾಗಿದೆ.

ಎಚ್ ಡಿ ಕುಮಾರಸ್ವಾಮಿ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವುದು ತೃತೀಯ ರಂಗ ಮತ್ತೊಮ್ಮೆ ರಚನೆಯಾಗಲು ಸಹಾಯವಾಗಿದೆ.

ಈಗಾಗಲೇ ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತಿರುವುದಕ್ಕೆ ವಿವಿಧ ರಾಜ್ಯಗಳ ಪ್ರಾದೇಶಿಕಪಕ್ಷಗಳ ಮುಖಂಡರು ಸಂತಸ ವ್ಯಕ್ತಪಡಿಸಿರುವುದು ಮತ್ತೊಮ್ಮೆ ತೃತೀಯ ರಂಗ ದೇಶದಲ್ಲಿ ರಚನೆಯಾಗುವುದಕ್ಕೆ ನಾಂದಿ ಹಾಡಿದೆ.

ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಬಿಎಸ್ಪಿ ನಾಯಕಿ ಮಾಯವತಿ, ಉತ್ತರಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ , ಸೇರಿ 13ಪ್ರಾದೇಶಿಕ ಪಕ್ಷಗಳ ನಾಯಕರು ತೃತೀಯರಂಗ ರಚನೆಗೆ ಮತ್ತೆ ಆಸಕ್ತಿ ತೋರಿದ್ದಾರೆ. ಬುಧಾವರ ನಡೆಯುವ ಹೆಚ್ ಡಿ ಕುಮಾರಸ್ವಾಮಿ ಅವರ ಪ್ರಮಾಣವಚನಕ್ಕೆ ಈ ಎಲ್ಲಾ ಪ್ರಾದೇಶಿಕ ಪಕ್ಷಗಳ ನಾಯಕರು ಆಗಮಿಸುವ ನೀರಿಕ್ಷೆಯೂ ಇದೆ.

ಇನ್ನೂ ಈ ಹಿಂದೆ 1994ರಲ್ಲಿ ದೇಶದಲ್ಲಿ ಪ್ರಾದೇಶಿಕ ಪಕ್ಷಗಳೆಲ್ಲಾ ಸೇರಿ ತೃತೀಯ ರಂಗದ ರಚನೆಗೆ ಕಾರಣವಾಗಿದ್ದವು, ಈಗ ಮತ್ತೆ ಅದೇಗಾಳಿ ಬೀಸುತ್ತಿರುವುದು ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ಬಿಜೆಪಿಯನ್ನ ಎದುರಿಸುವುದಕ್ಕೆ ಆಗಿದೆ.

Related Articles

Leave a comment

Back to Top

© 2015 - 2017. All Rights Reserved.