ಮೈತ್ರಿ ಸರ್ಕಾರದ ಸಂಪುಟ ಕಸರತ್ತು ಮಕ್ತಾಯ..

Kannada News, News, Regional, Top News No Comments on ಮೈತ್ರಿ ಸರ್ಕಾರದ ಸಂಪುಟ ಕಸರತ್ತು ಮಕ್ತಾಯ.. 22

ಬೆಂಗಳೂರು: ಕಾಂಗ್ರೆಸ್‌‌-ಜೆಡಿಎಸ್‌‌ ಸಮ್ಮಿಶ್ರ ಸರ್ಕಾರದ ಸಂಪುಟದ ರಚನೆ ಕಸರತ್ತು ಭಾಗಶಃ ಪೂರ್ಣಗೊಂಡಿದೆ. ಕಾಂಗ್ರೆಸ್‌‌ನ ಜಿ. ಪರಮೇಶ್ವರ್‌ ಉಪ ಮುಖ್ಯಮಂತ್ರಿ ಹಾಗೂ ರಮೇಶ್‌‌ ಕುಮಾರ್‌ ಅವರನ್ನು ಸ್ಪೀಕರ್‌ ಆಗಿ ಆಯ್ಕೆ ಮಾಡಲಾಗಿದೆ. ಒಟ್ಟು 34 ಸಚಿವರನ್ನು ಸರ್ಕಾರ ಒಳಗೊಂಡಿರುತ್ತಿದೆ.

ಇಂದು ಸಂಜೆ ಸಂಪುಟದ ರಚನೆ ಸಂಬಂಧ ಕಾಂಗ್ರೆಸ್‌-ಜೆಡಿಎಸ್‌‌ ಮುಖಂಡರು ಮಹತ್ವದ ಸಭೆ ನಡೆಸಿದರು. ಸರ್ಕಾರ ಒಟ್ಟು 34 ಸಚಿವ ಸ್ಥಾನಗಳನ್ನು ಒಳಗೊಂಡಿರುತ್ತಿದೆ. ಇದರಲ್ಲಿ ಕಾಂಗ್ರೆಸ್‌‌ಗೆ ಡಿಸಿಎಂ ಸೇರಿದಂತೆ 22 ಸ್ಥಾನಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಇತ್ತ, ಜೆಡಿಎಸ್‌ಗೆ ಮುಖ್ಯಮಂತ್ರಿ ಪಟ್ಟ ಸೇರಿದಂತೆ ಒಟ್ಟು 12 ಸಚಿವ ಸ್ಥಾನಗಳನ್ನು ಬಿಟ್ಟು ಕೊಡಲು ನಿರ್ಧಾರಕ್ಕೆ ಬರಲಾಗಿದೆ.

ಡಾ.ಜಿ. ಪರಮೇಶ್ವರ್‌ ಉಪ ಮುಖ್ಯಮಂತ್ರಿ ಸ್ಥಾನವನ್ನು ಪಡೆದರೆ, ಮತ್ತೊಬ್ಬ ಕಾಂಗ್ರೆಸ್‌ ಮುಖಂಡ ರಮೇಶ್‌‌ ಕುಮಾರ್‌ ಸ್ಪೀಕರ್‌ ಆಗಿ ಆಯ್ಕೆ ಆಗಿದ್ದಾರೆ. ಇದನ್ನು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸ್ಪಷ್ಟಪಡಿಸಿದ್ದು, ಬಹುಮತ ಸಾಬೀತುಪಡಿಸಿದ ಬಳಿಕ ಖಾತೆಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.