ಎಫ್ ಬಿಯಲ್ಲಿ ಸ್ಟೇಟಸ್ ಹಾಕಿ ಮಹಿಳೆ ಆತ್ಮಹತ್ಯೆ

Crime, News, Regional No Comments on ಎಫ್ ಬಿಯಲ್ಲಿ ಸ್ಟೇಟಸ್ ಹಾಕಿ ಮಹಿಳೆ ಆತ್ಮಹತ್ಯೆ 26

ಕೋಲಾರ: ಮಹಿಳೆಯೊಬ್ಬರು ಸಾಯುತ್ತೇನೆಂದು ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಿಕೊಂಡು ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಳಬಾಗಿಲು ತಾಲೂಕಿನ ಕಪ್ಪಲಮಡಗು ಗ್ರಾಮದಲ್ಲಿ ನಡೆದಿದೆ.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಹಿಳೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿವ್ಯಾ (23) ಮೃತ ಮಹಿಳೆ. ಸೋಮವಾರವಷ್ಟೇ ಸಾಯುತ್ತೇನೆಂದು ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ ಮಹಿಳೆ ಇಂದು ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ.

ತನ್ನ ಚಿಕ್ಕಮ್ಮನ ಜೊತೆ ಚಿನ್ನದ ಒಡವೆ ವಿಚಾರಕ್ಕೆ ದಿವ್ಯಾ ಮನಸ್ತಾಪ ಮಾಡಿಕೊಂಡಿದ್ದರು ಎನ್ನಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿ ಮಾಡಿ ರಾಮಚಂದ್ರ ಎಂಬುವರೊಂದಿಗೆ ದಿವ್ಯಾ ಮದುವೆಯಾಗಿದ್ದರು. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.