ಚಿಕ್ಕಮಗಳೂರು; ಬಿಜೆಪಿ ನಗರ ಕಾರ್ಯದರ್ಶಿಯ ಭೀಕರ ಹತ್ಯೆ

BREAKING NEWS, News, Regional, Top News No Comments on ಚಿಕ್ಕಮಗಳೂರು; ಬಿಜೆಪಿ ನಗರ ಕಾರ್ಯದರ್ಶಿಯ ಭೀಕರ ಹತ್ಯೆ 277

ಚಿಕ್ಕಮಗಳೂರು: ಚಿಕ್ಕಮಗಳೂರಿನ ಗೌರಿ ಕಾಲುವೆಯಲ್ಲಿ ಬಿಜೆಪಿ ನಗರ ಕಾರ್ಯದರ್ಶಿಯ ಭೀಕರ ಕೊಲೆ ನಡೆದಿದೆ.

ಗೌರಿ ಕಾಲುವೆಯ ಗುಡ್ ಮಾರ್ನಿಂಗ್‌ ಶಾಪ್ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ಬಿಜೆಪಿ ಚಿಕ್ಕಮಗಳೂರು ನಗರ ಕಾರ್ಯದರ್ಶಿ ಅನ್ವರ್ ಹತ್ಯೆಗೀಡಾಗಿದ್ದಾರೆ.

ಚಿಕ್ಕಮಗಳೂರು ನಗರದ ಉಪ್ಪಳಿ ನಿವಾಸಿ ಅನ್ವರ್‌ರನ್ನು ಬೈಕಿನಲ್ಲಿ ಬಂದ ಅಪರಿಚಿತರು ಐದು ಬಾರಿ ಚಾಕು ಇರಿದು ಕೊಲೆಗೈದಿದ್ದಾರೆ.

ಹಳೆ ವೈಷಮ್ಯದ‌ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವ ಶಂಕೆ ಎದುರಾಗಿದೆ.

ರಾತ್ರಿ 9:30 ರ ವೇಳೆ ಈ ಹತ್ಯೆ ಜರುಗಿದೆ. ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ಅನ್ವರ್‌ರವರ ಅಂತಿಮ ದರ್ಶನಕ್ಕಾಗಿ ಸಾವಿರಾರು ಬಿಜೆಪಿ‌ ಕಾರ್ಯಕರ್ತರು ಆಗಮಿಸುತ್ತಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.