ಅನ್ವರ್ ಕೊಲೆಗಾರರನ್ನು ಬಂಧಿಸಿ: ಶೋಭಾ ಕರಂದ್ಲಾಜೆ

BREAKING NEWS, News, Regional, Top News No Comments on ಅನ್ವರ್ ಕೊಲೆಗಾರರನ್ನು ಬಂಧಿಸಿ: ಶೋಭಾ ಕರಂದ್ಲಾಜೆ 22

ಚಿಕ್ಕಮಗಳೂರು:- ಚಿಕ್ಕಮಗಳೂರು ನಗರದಲ್ಲಿ ನಿನ್ನೆ ರಾತ್ರಿ ಹತ್ಯೆಯಾದ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಅನ್ವರ್ ಅವರ ಕೊಲೆ ಆರೋಪಗಳನ್ನು ಕೂಡಲೇ ಬಂಧಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

ಇಂದು ಬೆಳಿಗ್ಗೆ ಪೋಸ್ಟ್ ಮಾರ್ಟಮ್ ನಂತರ ಬಿಜೆಪಿ ಕಚೇರಿಗೆ ಅನ್ವರ್ ಅವರ ಪಾರ್ಥಿವ ಶರೀರವನ್ನು ತರಲಾಯಿತು. ಈ ವೇಳೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿಟಿ ರವಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ನೆರೆದಿದ್ದರು.

ಈ ವೇಳೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಅನ್ವರ್, ಹಲವಾರು ವಿರೋಧಗಳ ನಡುವೆಯೂ ನಮ್ಮ ಪಕ್ಷದಲ್ಲಿ ಕೆಲಸ ಮಾಡಿದ್ದರು. ಕೊಲೆ ಆರೋಪಿಗಳನ್ನು ಯಾವುದೇ ಒತ್ತಡಕ್ಕೆ ಒಳಗಾಗದೇ ಬಂಧಿಸಬೇಕು ಎಂದು ಆಗ್ರಹಿಸಿದರು.

‘ನ್ಯೂಸ್ ನಿರಂತರ’ದೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಪೊಲೀಸ್ ಇಲಾಖೆ ಅತಿ ಶೀಘ್ರದಲ್ಲಿ ಕೊಲೆ ಆರೋಪಗಳನ್ನು ಬಂಧಿಸಬೇಕು. ಯಾವುದೇ ರಾಜಕೀಯ ಒತ್ತಡಗಳಿಗೆ ಒಳಗಾಗದೇ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.

Related Articles

Leave a comment

Back to Top

© 2015 - 2017. All Rights Reserved.