ಕಾವೇರಿ ನೀರು ನಿರ್ವಹಣೆ ಮಂಡಳಿ ರಚನೆಯನ್ನು ವಿರೋಧಿಸಿ ಪ್ರತಿಭಟನೆ

BREAKING NEWS, Kannada News, News, Regional, Top News No Comments on ಕಾವೇರಿ ನೀರು ನಿರ್ವಹಣೆ ಮಂಡಳಿ ರಚನೆಯನ್ನು ವಿರೋಧಿಸಿ ಪ್ರತಿಭಟನೆ 62

ಮೈಸೂರು: ಮೈಸೂರಿನ ನ್ಯಾಯಾಲಯ ಮುಂಭಾಗವಿರುವ ಮಹಾತ್ಮಾ ಗಾಂಧೀಜಿ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾಪಡೆಯ ಜಿಲ್ಲಾಧ್ಯಕ್ಷರಾದ ತೇಜೇಶ್ ಲೋಕೇಶ್ ಗೌಡ ಮಾತನಾಡಿ, “ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮೊದಲಿನಿಂದಲೂ ನಮಗೆ ಅನ್ಯಾಯವಾಗತ್ತ ಬಂದಿದೆ. ಒಂದು ವೇಳೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾದರೆ ಕಬಿನಿ, ಕೆಆರ್ ಎಸ್, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳ ಮೇಲೆ ನಮ್ಮ ರಾಜ್ಯ ಹಿಡಿತ ಕಳೆದುಕೊಳ್ಳಲಿದೆ, ಬೊಗಸೆ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೆಸರಿಗೆ ಮಾತ್ರ ಜಲಾಶಯಗಳು ನಮ್ಮ ರಾಜ್ಯದಲ್ಲಿರುತ್ತವೆ. ಆದರೆ ಅದರ ನಿಯಂತ್ರಣ, ಗುಟ್ಟು, ಜನಿವಾರಗಳೆಲ್ಲಾ ಕೇಂದ್ರದ ಕೈಗೆ ಹೋಗುತ್ತದೆ. ಆದ್ದರಿಂದ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸು‌ವುದನ್ನು ನಾವು ಖಂಡಿಸುತ್ತೇವೆ. ಕಾವೇರಿ ನೀರು ನಿರ್ವಹಣೆ ಮಂಡಳಿಯನ್ನು ರಚಿಸುವ ಮೂಲಕ ಕೇಂದ್ರ ಸರ್ಕಾರ ನಮ್ಮ ಹಕ್ಕನ್ನು ಕಿತ್ತುಕೊಂಡು ಏಕಪಕ್ಷೀಯವಾಗಿ ತೆಗೆದುಕೊಂಡಿರುವ ನಿರ್ಧಾರ ಖಂಡನೀಯ. ಮಂಡಳಿ ರಚನೆಯೂ ಮುನ್ನ ಸಂಸತ್ತಿನ ಉಭಯ ಸದನಗಳಲ್ಲೂ ಚರ್ಚೆ ನಡೆಯಬೇಕಿತ್ತು, ಆದರೆ ಕೇಂದ್ರ ಸರ್ಕಾರ ಅದಕ್ಕೆ ಅವಕಾಶ ನೀಡದೆ ತರಾತುರಿಯಲ್ಲಿ ಮಾಡಲು ಹೊರಟಿರುವುದು ತಮಿಳುನಾಡು ಪರ ಇರುವಂತಿದೆ. ನಮ್ಮ ಸಹನೆಯೇ ದೌರ್ಬಲ್ಯ ಅಲ್ಲ. ನಮಗೆ ಪ್ರಾಧಿಕಾರ ರಚನೆಯಿಂದ ಅನ್ಯಾಯವಾಗುತ್ತದೆ. ಪ್ರಾರಂಭದಿಂದಲೂ ಕಾವೇರಿ ಮಂಡಳಿ ರಚನೆಗೆ ನಮ್ಮ ರಾಜ್ಯದ ವಿರೋಧವಿದೆ. ಮಂಡಳಿಯೇ ಎಲ್ಲವನ್ನೂ ನಿರ್ಧರಿಸುವುದಾದರೆ ನಮ್ಮ ರಾಜ್ಯ ಸರ್ಕಾರದ ಪಾತ್ರವೇನು?ಇದೆಲ್ಲಾ ಕಾರಣಗಳಿಂದ ಕೇಂದ್ರ ಸರ್ಕಾರ ಕೂಡಲೇ ಕಾವೇರಿ ನೀರು ನಿರ್ವಹಣೆ ಮಂಡಳಿ ಯನ್ನು ರದ್ದು ಮಾಡಿ, ಅಂತರರಾಜ್ಯ ಜಲ ನೀತಿ ಯನ್ನು ರೂಪಿಸಬೇಕು ಎಂದು ಪ್ರಧಾನ ಮಂತ್ರಿಗಳಿಗೆ ಒತ್ತಾಯಿಸುತ್ತಿದ್ಧೇವೆ,” ಎಂದರು.

ಪ್ರತಿಭಟನೆಯಲ್ಲಿ ಪ್ರಜೀಶ್, ಶಾಂತರಾಜೇ ಅರಸ್, ಶಾಂತಮೂರ್ತಿ ಆರ್, ಸುನೀಲ್ ಕುಮಾರ್ ಬಿ, ದೂರ ಸುರೇಶ್, ವಿಜಯೇಂದ್ರ, ಅಕ್ಷಯ್, ಮಿನಿ ಬಂಗಾರಪ್ಪ, ಪರಿಸರ ಚಂದ್ರು, ಮಹದೇವ ಸ್ವಾಮಿ, ಗುರು ಮಲ್ಲಪ್ಪ, ನಾಗೇಂದ್ರ, ವಿರೂಪಾಕ್ಷ, ಕಲೀಂ, ಶ್ರೀನಿವಾಸ್, ದೀಪಕ್, ಜಗದೀಶ್ ರಾಧಾಕೃಷ್ಣ, ನಂಜುಂಡಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

Leave a comment

Back to Top

© 2015 - 2017. All Rights Reserved.