ಮೆಡಿಸಿನ್ ಸಮಸ್ಯೆ ಇಲ್ಲವೇ ಇಲ್ಲ: ಶ್ರೀನಿವಾಸ್ ಗೌಡ 

BREAKING NEWS, Kannada News, News, Regional, Top News No Comments on ಮೆಡಿಸಿನ್ ಸಮಸ್ಯೆ ಇಲ್ಲವೇ ಇಲ್ಲ: ಶ್ರೀನಿವಾಸ್ ಗೌಡ  56

ಚಾಮರಾಜನಗರ: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆಯಿಲ್ಲ ಎಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ನಿರ್ದೇಶಕ ಶ್ರೀನಿವಾಸ್ ಗೌಡ ಅವರು ಸ್ಪಷ್ಟಪಡಿಸಿದ್ದಾರೆ. ಚಾಮರಾಜನಗರ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಿಡೀರ್ ಬೇಟಿ ನೀಡಿ ಆಸ್ಪತ್ರೆಯಲ್ಲಿನ ಕೆಲವು ಅವ್ಯವಸ್ಥೆಗಳನ್ನು ನೋಡಿ ಎಚ್ಚರಿಕೆ ನೀಡಿದ್ದಾರೆ. ನ್ಯೂಸ್ ನಿರಂತರ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ಯಾವುದೇ ಆಸ್ಪತ್ರೆಯಲ್ಲಿ ಔಷಧಿ ಕೊರತೆಯಿಲ್ಲ. ಆನ್ ಲೈನ್ ಮೂಲಕ ವ್ಯವಸ್ಥೆಯಿರುವುದರಿಂದ ಆ ಸಮಸ್ಯೆ ಇಲ್ಲ  ಎಂದರು.  ಆಗಿದ್ದ ಮೇಲೆ ಖಾಸಗೀ ಮೆಡಿಕಲ್ ಗೆ ವೈದ್ಯರು ಬರೆಯುತ್ತಿರುವುದು ಏಕೆ ಎಂದಾಗ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಉತ್ತರಿಸಿದರು.

ಚಾಮರಾಜನಗರ ಬಹುತೇಕ ಆಂಬ್ಯುಲೆನ್ಸ್ ಅದರಲ್ಲೂ ೧೦೮ ಅಲ್ಲಿ ವೆಂಟಿಲೇಟರ್ ಸಮಸ್ಯೆ ಇದೆ ಎಂದು ಗಮನಕ್ಕೆ ತಂದಾಗ ಈಗಾಗಲೇ ಹಳೆಯ ವಾಹನಗಳನ್ನ ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಿಲ್ಲಾಸ್ಪತ್ರೆಯ ಸರ್ಜನ್ ರಘುರಾಮ್ ಸರ್ವೆಗಾರ್, ವೈದ್ಯಕೀಯ ಕಾಲೇಜು ಡೀನ್ ರಾಜೇಂದ್ರನ್ ಸೇರಿದಂತೆ ಇತರರು ಉಪಸ್ಥಿತರಿದ್ದರು. (ವರದಿ: ರಾಮಸಮುದ್ರ ಎಸ್ ವೀರಭದ್ರಸ್ವಾಮಿ)

Related Articles

Leave a comment

Back to Top

© 2015 - 2017. All Rights Reserved.