ಮುಂಬೈನಲ್ಲಿ ನಡೆದ ಅಂಬಾನಿ ಪುತ್ರನ ಅದ್ದೂರಿ ಮೆಹೆಂದಿ ಕಾರ್ಯಕ್ರಮ

Entertainment, Featured, Kannada News, News No Comments on ಮುಂಬೈನಲ್ಲಿ ನಡೆದ ಅಂಬಾನಿ ಪುತ್ರನ ಅದ್ದೂರಿ ಮೆಹೆಂದಿ ಕಾರ್ಯಕ್ರಮ 50

ಮುಂಬೈ: ಭಾರತದ ಪ್ರಸಿದ್ಧ ವಜ್ರ ವ್ಯಾಪಾರಿ ರಸೆಲ್​ ಮೆಹ್ತಾ ಪುತ್ರಿ ಶ್ಲೋಕಾಳೊಂದಿಗೆ ಮುಕೇಶ್​ ಅಂಬಾನಿ ಪುತ್ರ ಆಕಾಶ್​ಗೆ ವಿವಾಹ ನೆರವೇರಲಿದೆ. ಇದಕ್ಕೆ ಪೂರ್ವಭಾವಿಯಾಗಿ ನಿನ್ನೆ ಮುಕೇಶ್​ ಅಂಬಾನಿ ಮುಂಬೈ ನಿವಾಸದಲ್ಲಿ ಅದ್ದೂರಿ ಮೆಹಂದಿ ಕಾರ್ಯಕ್ರಮ ನಡೆಯಿತು.  

ಈ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ, ಶಾರೂಖ್​ ಖಾನ್​, ಐಶ್ವರ್ಯ ರೈ ಬಚ್ಚನ್​, ಕತ್ರಿನಾ ಕೈಫ್​, ಕರಣ್ ಜೋಹರ್​, ಕಿರಣ್ ರಾವ್​ಸೇರಿದಂತೆ ಇನ್ನಿತರ ನಟ, ನಟಿಯರು ಪಾಲ್ಗೊಂಡಿದ್ದರು.  

ಇತ್ತೀಚೆಗೆ ಅಮೆರಿಕನ್​ ಸಿಂಗ್​ ನಿಕ್​ ಜೋನ್ಸ್​ ಜತೆ ಸುತ್ತಾಡುತ್ತಿರುವ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದ್ದು, ಬಿಳಿ ಸೀರೆಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಂಗೊಳಿಸುತ್ತಿದ್ರು. ವಿಶೇಷ ಎಂದ್ರೆ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ, ನೂತನ ಜೋಡಿ ಆಕಾಶ್​ ಅಂಬಾನಿ ಹಾಗೂ ಶ್ಲೋಕ್​ ಮೆಹ್ತಾ ಜತೆ ಫೋಸ್​ ಕೊಟ್ಟ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಚೋಪ್ರಾ ಹಾಕಿದ ಈ ಫೋಟೋ ನೆಟ್ಟಿಜನ್​ನಲ್ಲಿ ಸಖತ್​ ಫೇಮಸ್ ​ಆಗಿದೆ. 
 
ಶನಿವಾರ ಎಂಗೇಜ್​ಮೆಂಟ್​ ಕಾರ್ಯಕ್ರಮ ಶನಿವಾರ ನಡೆಯಬಹುದು ಎನ್ನಲಾಗಿದ್ದು, ಜೂನ್​ ಮೊದಲ ವಾರದಲ್ಲೇ ಆಮಂತ್ರಣ ಪತ್ರಿಕೆ ರೆಡಿಯಾಗಿವೆ. ಮಗನ ಮದುವೆ ಹಿನ್ನೆಲೆಯಲ್ಲಿ ಈಗಾಗಲೇ ಮುಕೇಶ್​ ಅಂಬಾನಿ ಮುಂಬೈನ ಪ್ರಸಿದ್ಧ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು. ಆದರೆ, ಇದುವರೆಗೂ ಮದುಮೆ ದಿನಾಂಕವನ್ನು ಪ್ರಕಟ ಮಾಡಿಲ್ಲ.   

Related Articles

Leave a comment

Back to Top

© 2015 - 2017. All Rights Reserved.