ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಆರೋಗ್ಯಸ್ಥಿತಿ ಗಂಭೀರ

News No Comments on ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಆರೋಗ್ಯಸ್ಥಿತಿ ಗಂಭೀರ 12

ಚೆನ್ನೈ : ಡಿಎಂಕೆ ಮುಖಂಡ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಗೋಪಾಲಪುರಂನಲ್ಲಿರುವ ಅವರ ನಿವಾಸದಲ್ಲಿಯೇ ವೈದ್ಯಕೀಯ ಶುಶ್ರೂಷೆ ನೀಡಲಾಗುತ್ತಿದೆ. ಅದಕ್ಕಾಗಿ ಇಲ್ಲಿನ ಕಾವೇರಿ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್​ಗಳ ತಂಡಗಳು ಕರುಣಾನಿಧಿ ನಿವಾಸದಲ್ಲಿ ಉಳಿದುಕೊಂಡಿದ್ದು, ಮಾಜಿ ಮುಖ್ಯಮಂತ್ರಿಗಳ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ.

ತಮಿಳುನಾಡಿನ ಉಪಮುಖ್ಯಮಂತ್ರಿ ಪನ್ನೀರ್​ಸೆಲ್ವಂ ಹಾಗೂ ಸಂಪುಟದ ಮೂವರು ಹಿರಿಯ ಸಚಿವರು ಕರುಣಾನಿಧಿ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಕರುಣಾನಿಧಿ ಪುತ್ರ ಎಂ.ಕೆ. ಸ್ಟಾಲಿನ್ ಜೊತೆ ಕೆಲ ಹೊತ್ತು ಆರೋಗ್ಯದ ಬಗ್ಗೆ ಚರ್ಚೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪನ್ನೀರ್​ಸೆಲ್ವಂ, ಕರುಣಾನಿಧಿ ಅವರ ಆರೋಗ್ಯಸ್ಥಿತಿ ಬಗ್ಗೆ ಯಾವುದೇ ಆತಂಕ ಬೇಡ. ಅವರ ಆರೋಗ್ಯ ಸ್ಥಿತಿ ಚೇತರಿಕೆ ಕಾಣುತ್ತಿದ್ದು, ಯಾವುದೇ ರೀತಿಯ ಗೊಂದಲಗಳನ್ನು ಸೃಷ್ಠಿಸಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು.

ಕರುಣಾನಿಧಿ ಅವರಿಗೆ ವಯೋಸಹಜ ಆರೋಗ್ಯ ಸಮಸ್ಯೆಗಳ ಕಾಡುತ್ತಿದೆ ಅಷ್ಟೇ. ಮೂತ್ರದ್ವಾರ ಸೋಂಕಿನಿಂದಾಗಿ ಅವರಿಗೆ ಜ್ವರ ಕಾಣಿಸಿದೆ. ಸೋಂಕು ಹೆಚ್ಚಾಗುವ ಕಾರಣದಿಂದ ಕರುಣಾನಿಧಿ ಅವರ ಬಳಿ ಹೆಚ್ಚು ಜನರನ್ನು ಬಿಡಲಾಗುತ್ತಿಲ್ಲ. ಸತತ 24 ಗಂಟೆ ಕಾಲ ಅವರ ಆರೋಗ್ಯದತ್ತ ಗಮನ ಹರಿಸುತ್ತಿದ್ದೇವೆ ಎಂದು ಕಾವೇರಿ ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.