ಚಂದ್ರಗ್ರಹಣ : ಜ್ಯೋತಿಷಿ ಮಾತಿಗೆ ಹೆದರಿ ಗ್ರಾಮವನ್ನೇ ತೊರೆದರು..!

BREAKING NEWS, News, Regional No Comments on ಚಂದ್ರಗ್ರಹಣ : ಜ್ಯೋತಿಷಿ ಮಾತಿಗೆ ಹೆದರಿ ಗ್ರಾಮವನ್ನೇ ತೊರೆದರು..! 26

ಚಿಕ್ಕಮಗಳೂರು : ಇಂದಿನ ಖಗ್ರಾಸ ಚಂದ್ರಗ್ರಹಣದ ವೇಳೆ ಗ್ರಾಮಕ್ಕೆ ತೊಂದರೆಯಾಗಲಿದೆ ಎಂಬ ಜ್ಯೋತಿಷಿಯ ಮಾತಿಗೆ ಹೆದರಿ, ರಾತ್ರೋರಾತ್ರಿ ಊರಿಗೆ ಊರನ್ನೇ ತೊರೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್ ಪುರ ತಾಲೂಕಿನ ಕೈಮರ ಸಮೀಪದ ಸಿಗುವಾನಿ ಗ್ರಾಮದಲ್ಲಿ ನಡೆದಿದೆ.

ಚಂದ್ರ ಗ್ರಹಣದ ವೇಳೆ ಗ್ರಾಮ ತೊರೆಯದಿದ್ದರೆ ಜನರು ರಕ್ತಕಾರಿ ಸಾಯಲಿದ್ದಾರೆ ಎಂದು ಕೇರಳ ಮೂಲದ ಜ್ಯೋತಿಷಿ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಇದರಿಂದ ಆತಂಕಗೊಂಡ ಗ್ರಾಮಸ್ಥರು, ತಾವು ಸಾಕಿದ ಪ್ರಾಣಿಗಳನ್ನು ಗ್ರಾಮದಲ್ಲಿಯೇ ಬಿಟ್ಟು ಬೇರೆಡೆ ತೆರಳಿದ್ದಾರೆ.

ಗ್ರಾಮದಲ್ಲಿ ಸುಮಾರು 60ಕ್ಕೂ ಅಧಿಕ ಹಕ್ಕಿ-ಪಿಕ್ಕಿ ಕುಟುಂಬಗಳು ವಾಸಿಸುತ್ತಿದ್ದು, ಮಲೆಯಾಳಿ ಮಾಂತ್ರಿಕನ ಮಾತಿಗೆ ಬೆಚ್ಚಿಬಿದ್ದು, ಕುದ್ರೆಗುಂಡಿ ಮಾರ್ಗವಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯತ್ತ ಗುಳೆ ಹೊರಟಿದ್ದಾರೆ ಎನ್ನಲಾಗುತ್ತಿದೆ.

ಈ ಬಗ್ಗೆ ವರದಿ ನೀಡುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರು ಎನ್.ಆರ್.ಪುರ ತಹಸೀಲ್ದಾರ್​ಗೆ ಸೂಚನೆ ನೀಡಿದ್ದಾರೆ

Related Articles

Leave a comment

Back to Top

© 2015 - 2017. All Rights Reserved.