ಇಂಗ್ಲೆಂಡ್ ಟೆಸ್ಟ್​​ ಸರಣಿಗೂ ಮುನ್ನ ಟೀಂ ಇಂಡಿಯಾದ ಮತ್ತೊಬ್ಬ ಪ್ರಮುಖ ಆಟಗಾರನಿಗೆ ಗಾಯ

BREAKING NEWS, Sports No Comments on ಇಂಗ್ಲೆಂಡ್ ಟೆಸ್ಟ್​​ ಸರಣಿಗೂ ಮುನ್ನ ಟೀಂ ಇಂಡಿಯಾದ ಮತ್ತೊಬ್ಬ ಪ್ರಮುಖ ಆಟಗಾರನಿಗೆ ಗಾಯ 38
ಲಂಡನ್ : ಭಾರತ ಹಾಗೂ ಇಂಗ್ಲೆಂಡ್ ನಡುವೆ ಆಗಸ್ಟ್​ 1 ರಿಂದ ಆರಂಭಗೊಳ್ಳಲಿರುವ ಟೆಸ್ಟ್​ ಸರಣಿ ದಿನದಿಂದ ದಿನಕ್ಕೆ ತೀವ್ರತೆಯನ್ನ ಪಡೆಯುತ್ತಿದೆ. ಸರಣಿಗೆ ಉಭಯ ತಂಡಗಳೂ ಭರ್ಜರಿ ತಯಾರಿ ನಡೆಸುತ್ತಿರುವಾಗಲೇ, ಟೀಂ ಇಂಡಿಯಾಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಭಾರತದ ಸ್ಟಾರ್ ಸ್ಪಿನ್ನರ್ ಆರ್. ಅಶ್ವಿನ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಮೊದಲ ಟೆಸ್ಟ್​ನಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ. ಈಗಾಗಲೇ ಇಂಗ್ಲೆಂಡ್ ತನ್ನ ತಂಡಕ್ಕೆ ಮಾಜಿ ಆಟಗಾರ ಆದಿಲ್ ರಶೀದ್ ಅವರನ್ನು ಬರಮಾಡಿಕೊಂಡಿದೆ. ಇದರಿಂದ ಭಾರತ ತಂಡಕ್ಕೆ ಹಿನ್ನಡೆ ಎಂದೇ ಹೇಳಲಾಗುತ್ತಿದೆ.
ಟೀಂ ಇಂಡಿಯಾ ಆಟಗಾರರಿಗೆ ಇತ್ತೀಚಿನ ದಿನಗಳಲ್ಲಿ ಗಾಯದ ಸಮಸ್ಯೆ ಎಡಬಿಡದೆ ಕಾಡುತ್ತಿದೆ. ಆಂಗ್ಲರ ನಾಡಿಗೆ ಕಾಲಿಟ್ಟಾಗಿನಿಂದ ಒಬ್ಬರಾದ ಮೇಲೆ ಒಬ್ಬರಂತೆ ಗಾಯದ ಸಮಸ್ಯೆಗೆ ಗುರಿಯಾಗುತ್ತಿರುವ ಟೀಂ ಇಂಡಿಯಾದ ಈ ಸಾಲಿಗೆ ಸದ್ಯ ಅಶ್ವಿನ್ ಸೇರ್ಪಡೆಯಾಗಿದ್ದಾರೆ.
ಬಿಸಿಸಿಐ ಈಗಾಗಲೇ ಇಂಗ್ಲೆಂಡ್ ವಿರುದ್ಧದ 3 ಟೆಸ್ಟ್ ಸರಣಿಯ ಪಂದ್ಯಕ್ಕೆ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಅವರನ್ನು ಕೂಡಾ ಆಯ್ಕೆ ಮಾಡಿದೆ. ಹೀಗಾಗೀ ಅಶ್ವಿನ್ ಗೈರು ಈ ಇಬ್ಬರು ಆಟಗಾರರಿಗೆ ವರವಾಗಲಿದೆಯೇ ಎಂಬುದನ್ನು ನೋಡಬೇಕಿದೆ.

Related Articles

Leave a comment

Back to Top

© 2015 - 2017. All Rights Reserved.