ಕರುಣಾನಿಧಿ ಆರೋಗ್ಯ ಸ್ಥಿರವಾಗಿದೆ – ವದಂತಿಗಳನ್ನು ಕಿವಿಗೊಡದಿರಿ : ಎಂ. ಕೆ ಸ್ಟಾಲಿನ್

BREAKING NEWS, National, News, Top News No Comments on ಕರುಣಾನಿಧಿ ಆರೋಗ್ಯ ಸ್ಥಿರವಾಗಿದೆ – ವದಂತಿಗಳನ್ನು ಕಿವಿಗೊಡದಿರಿ : ಎಂ. ಕೆ ಸ್ಟಾಲಿನ್ 8
ಚೆನ್ನೈ: ತಮಿಳುನಾಡು ಮಾಜಿ ಸಿಎಂ ಹಾಗೂ ಡಿಎಂಕೆ ಮುಖ್ಯಸ್ಥ, ಕರುಣಾನಿಧಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಭಾನುವಾರ ರಾತ್ರಿ ಕರುಣಾನಿಧಿ ಆರೋಗ್ಯಸ್ಥಿತಿ ಗಂಭೀರಗೊಂಡಿತ್ತು, ಈಗ ಚೆನ್ನೈನ ಕಾವೇರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದ್ದು, ಸದ್ಯಕ್ಕೆ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.
ಈ ಬಗ್ಗೆ ಭಾನುವಾರ ರಾತ್ರಿ ಆಸ್ಪತ್ರೆಯ ಆಡಳಿತ ಮಂಡಳಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಕರುಣಾನಿಧಿ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ. ರಾತ್ರಿ ಮನೆಗೆ ತೆರಳುವ ಮುನ್ನ ಮಾತನಾಡಿದ ಪುತ್ರ ಎಂ.ಕೆ ಸ್ಟಾಲಿನ್, ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ, ಕರುಣಾನಿಧಿ ಚೇತರಿಸಿಕೊಳ್ಳುತ್ತಿದ್ದಾರೆ. ಬೆಂಬಲಿಗರು ಶಾಂತಿಯಿಂದ ವರ್ತಿಸಿ, ಮನೆಗೆ ತೆರಳಬೇಕು ಅಂತ ಮನವಿ ಮಾಡಿದರು.

Related Articles

Leave a comment

Back to Top

© 2015 - 2017. All Rights Reserved.