ಪ್ರತ್ಯೇಕ ರಾಜ್ಯಕ್ಕಾಗಿ ಗುರುವಾರದ ಉತ್ತರ ಕರ್ನಾಟಕ ಬಂದ್’ಗೆ ಬಹುತೇಕ ಸಂಘಟನೆಗಳಿಂದ ಬೆಂಬಲವಿಲ್ಲ..

BREAKING NEWS, News, Regional, Top News No Comments on ಪ್ರತ್ಯೇಕ ರಾಜ್ಯಕ್ಕಾಗಿ ಗುರುವಾರದ ಉತ್ತರ ಕರ್ನಾಟಕ ಬಂದ್’ಗೆ ಬಹುತೇಕ ಸಂಘಟನೆಗಳಿಂದ ಬೆಂಬಲವಿಲ್ಲ.. 41
ಬೆಂಗಳೂರು : ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟು ಹಲವು ಸಂಘಟನೆಗಳು ಗುರುವಾರ ಕರೆಕೊಟ್ಟಿರುವ ಉತ್ತರ ಕರ್ನಾಟಕ ಬಂದ್​ಗೆ ಉತ್ತಮ ಬೆಂಬಲ ದೊರೆಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಬಂದ್​ಗೆ ಕರೆಕೊಟ್ಟಿರುವ ಉತ್ತರ ಕರ್ನಾಟಕ ಸಮಗ್ರ ಹೋರಾಟ ಸಮಿತಿಯು ತಮ್ಮ ಬಂದ್​ಗೆ ಉ.ಕ ರೈತ ಸಂಘಟನೆ, ಉ.ಕ ಜೈನ ಸಂಘಟನೆ, ಉ.ಕ ಮಾಜಿ ಸೈನಿಕರ ಸಂಘ, ಉ.ಕ ವಿದ್ಯಾರ್ಥಿ ಸಂಘ, ಉ.ಕ ಕಾರ್ಮಿಕರ ಸಂಘ ಸೇರಿದಂತೆ 25ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ ಎಂದು ಹೇಳಿಕೊಂಡಿದ್ದಾರೆ.
ಆದರೆ, ಉತ್ತರ ಕರ್ನಾಟಕದ ಹಲವು ಸಂಘಟನೆಗಳು ಬಂದ್​ಗೆ ಬೆಂಬಲ ನೀಡದಿರಲು ನಿರ್ಧರಿಸಿವೆ. ಕರ್ನಾಟಕ ರಕ್ಷಣಾ ವೇದಿಕೆ, ನವನಿರ್ಮಾಣ ಸೇನೆ, ಹೋಟೆಲ್ ಮಾಲಿಕರ ಸಂಘ, ಆಟೋ ಚಾಲಕರ ಸಂಘ ಹಾಗೂ ಹಲವು ಕನ್ನಡ ಸಂಘಟನೆಗಳು ಬಂದ್​ನಿಂದ ದೂರ ಉಳಿದಿರುವುದು ಬಂದ್ ಯಶಸ್ಸಿನ ಮೇಲೆ ಅನುಮಾನ ಮೂಡಿಸಿದೆ. ಅದರ ಜೊತೆಗೆ ಬಂದ್ ಕೇವಲ ಧಾರವಾಡಕ್ಕೆ ಮಾತ್ರ ಸೀಮಿತವಾಗಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.

Related Articles

Leave a comment

Back to Top

© 2015 - 2017. All Rights Reserved.