ಸಾಲಮನ್ನಾ; ರೈತರಿಗೆ ಸಿ ಎಂ ಕುಮಾರಸ್ವಾಮಿ ಪತ್ರ

BREAKING NEWS, News, Regional, Top News No Comments on ಸಾಲಮನ್ನಾ; ರೈತರಿಗೆ ಸಿ ಎಂ ಕುಮಾರಸ್ವಾಮಿ ಪತ್ರ 47
 
ರೈತರ ಸಂಪೂರ್ಣ ಸಾಲ ಮನ್ನಾ ವಿಚಾರವಾಗಿ ಹಲವು ಅಡೆತಡೆಗಳ ಮಧ್ಯೆ ಸಂಪೂರ್ಣವಲ್ಲವಾದರೂ ಕೆಲ ಷರತ್ತುಗಳೊಂದಿಗೆ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ. ರಾಷ್ಟ್ರೀಯ ಬ್ಯಾಂಕ್​ಗಳ ಸಾಲ ಮನ್ನಾ ಘೋಷಣೆಯಾಗಿದ್ದರೂ ಅದರ ಜಾರಿ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಆದರೆ ಸಹಕಾರಿ ಬ್ಯಾಂಕ್​ಗಳ ಸಾಲ ಮನ್ನಾ ವಿಚಾರವಾಗಿ ಸಿಎಂ ತಕ್ಕಮಟ್ಟಿಗೆ ಯಶಸ್ವಿ ಕಂಡಿದ್ದಾರೆ. ಇದೀಗ ಕುಮಾರಸ್ವಾಮಿ ಈ ಸಾಧನೆಯ ರಾಜಕೀಯ ಲಾಭ ಪಡೆಯುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಹೌದು, ತಾವು ಚುನಾವಣೆ ವೇಳೆ ರೈತರಿಗೆ ನೀಡಿದ ಮಾತನ್ನು ಈಡೇರಿಸಿದ್ದೇವೆಂಬ ಪತ್ರವನ್ನು ಅನ್ನದಾತನಿಗೆ ರವಾನಿಸಲು ಸಿಎಂ ಕುಮಾರಸ್ವಾಮಿ ಯೋಚಿಸುತ್ತಿದ್ದಾರಂತೆ.

ಆ ಮೂಲಕ‌ ಸಾಲ ಮನ್ನಾದ ಕ್ರೆಡಿಟ್ ಪಡೆಯಲು ಜೆಡಿಎಸ್ ಪಕ್ಷ  ಮುಂದಾಗಿದೆ. ಮೊದಲ‌ ಹಂತದಲ್ಲಿ ಸಹಕಾರಿ ಬ್ಯಾಂಕಿನ 1 ಲಕ್ಷದವರೆಗಿನ ಸಾಲ ಮನ್ನಾ ಮಾಡಿ ಸರ್ಕಾರ ಆದೇಶವನ್ನು‌ ಹೊರಡಿಸಿದೆ. ಆ ನಿಟ್ಟಿನಲ್ಲಿ ಎರಡು ಕಂತುಗಳಲ್ಲಿ ಹಣವನ್ನೂ ಬಿಡುಗಡೆ ಮಾಡಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ‌ ಸಾಲ ಮನ್ನಾ ಮಾಡಿ ರೈತರಿಗೆ ಪತ್ರ ಬರೆದ ಮಾದರಿಯಲ್ಲಿ ರೈತರಿಗೆ ನೇರವಾಗಿ ಪತ್ರ ಬರೆಯುವ ಮೂಲಕ ರಾಜಕೀಯ ಲಾಭ ಪಡೆಯಲು ಕುಮಾರಸ್ವಾಮಿ ಪ್ಲಾನ್ ಹಾಕಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ರೈತರಿಗೆ ಕಳುಹಿಸಲು ಉದ್ದೇಶಿಸಿರುವ ಕರಡು ಪತ್ರ ಸಿದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಸಾಲ ಮನ್ನಾವಾದ ರೈತರಿಗೆ ಪತ್ರ ರವಾನಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

Related Articles

Leave a comment

Back to Top

© 2015 - 2017. All Rights Reserved.