ರಾಜಕೀಯ ಪ್ರವೇಶ ಸದ್ಯಕ್ಕಿಲ್ಲ: ಯದುವೀರ್

BREAKING NEWS, News, Regional, Top News No Comments on ರಾಜಕೀಯ ಪ್ರವೇಶ ಸದ್ಯಕ್ಕಿಲ್ಲ: ಯದುವೀರ್ 21
 
ಇಂದು ನಗರದ ಪತ್ರಕರ್ತರ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯದುವೀರ್, ಅಂಬಾರಿ ವಿಷಯವನ್ನು ನಾನು ಮಾತನಾಡುವುದಿಲ್ಲ. ನನ್ನ ಅಮ್ಮನನ್ನೇ ಕೇಳಬೇಕು. ಅಮ್ಮನಿಗೆ ಅದರ ಮೇಲೆ ಅಧಿಕಾರವಿರುವುದು. ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ನನಗೆ ಸದ್ಯಕ್ಕೆ ರಾಜಕಾರಣಕ್ಕೆ ಬರುವುದಕ್ಕೆ ಆಸಕ್ತಿ ಇಲ್ಲ. ಈಗಾಗಲೇ ಸಾಕಷ್ಟು ಬಾರಿ ಈ ಬಗ್ಗೆ ಹೇಳಿದ್ದೇನೆ. ಮುಂದೆ ಏನಾಗುತ್ತೋ ಅದೂ ಗೊತ್ತಿಲ್ಲ. ಸದ್ಯಕ್ಕೆ ಮನೆಯ ಜವಾಬ್ದಾರಿ ಹಾಗೂ ಪಾರಂಪರಿಕ ಕ್ಷೇತ್ರಗಳನ್ನ ನೋಡಿಕೊಂಡು ಹೋಗುವುದೇ ಮುಖ್ಯವಾಗಿದೆ ಎಂದರು.
ಇಸ್ರೇಲ್ ರಾಷ್ಟ್ರಕ್ಕಾಗಿ ಯುದ್ಧದಲ್ಲಿ ಹೋರಾಡಿದ ಮೈಸೂರಿನ ಲ್ಯಾಸರ್ಸ್ ಕುಟುಂಬಗಳಿಗೆ ಸನ್ಮಾನ:
ನೂರು ವರ್ಷಗಳ ಹಿಂದೆ ಮೈಸೂರು ಮತ್ತು ಜೋಧ್​ಪುರ್ ಲ್ಯಾಸರ್ಸ್​ಗಳು ಇಸ್ರೇಲ್​ನ ಹೈಫಾ ಎಂಬ ನಗರದಲ್ಲಿ ನಡೆದ ವಾರ್​ನಲ್ಲಿ ಗೆದ್ದಿದ್ದಾರೆ. ಇದು ಇತಿಹಾಸದಲ್ಲಿ ದಾಖಲಾಗಿದೆ. ಮೈಸೂರಿನ ಮಹಾರಾಜರ ಭದ್ರತೆಗಾಗಿ ಮೈಸೂರು ಲಾಸೆರ್ಸ್​ಗಳನ್ನ ನೇಮಕ ಮಾಡಲಾಗಿತ್ತು.ಮೈಸೂರು ಅರಮನೆಯಲ್ಲಿ ಸುಮಾರು 4 ಸಾವಿರ ಯೋಧರಿದ್ದರು. ಇಸ್ರೇಲ್​ನ ಹೈಫಾದಲ್ಲಿ 1918 ಸೆಪ್ಟೆಂಬರ್ 23 ರಂದು ನಡೆದಿದ್ದ ಯುದ್ಧದಲ್ಲಿ ಸುಮಾರು 2500 ರಿಂದ 3000 ಸೈನಿಕರು ಭಾಗಿಯಾಗಿದ್ದರು. ಮೈಸೂರು ಮತ್ತು ಜೋಧ್​ಪುರ್​ನ ಲ್ಯಾಸೆರ್ಸ್​ಗಳು ಸೇರಿ ಯುದ್ಧದಲ್ಲಿ ಭಾಗಿಯಾಗಿದ್ದರು. ಈ ಯುದ್ಧಕ್ಕೆ ನೂರು ವರ್ಷವಾದ ಹಿನ್ನೆಲೆಯಲ್ಲಿ ಹೈಫಾ ವಿಜಯದ ಶತಮಾನೋತ್ಸವ ಸಮಿತಿಯಿಂದ ಲ್ಯಾಸೆರ್ಸ್​ಗಳ ಸ್ಮರಣಾರ್ಥವಾಗಿ ನಗರದ ರಾಜೇಂದ್ರ ಕಲಾಮಂದಿರದಲ್ಲಿ ಸಂಜೆ 6 ಗಂಟೆಗೆ ಯುದ್ಧದಲ್ಲಿ ಭಾಗಿಯಾಗಿದ್ದ ಮೈಸೂರಿನ 5 ಕುಟುಂಬಗಳನ್ನ ಗುರುತಿಸಿ ಸನ್ಮಾನ ಮಾಡಲಾಗುತ್ತಿದೆ. ಇದೊಂದು ಐತಿಹಾಸಿಕ ವಿಜಯವಾಗಿದೆ. ಯುದ್ಧದ ಇತಿಹಾಸ ಎಲ್ಲರಿಗೂ ತಿಳಿಯಬೇಕು ಅನ್ನೋದೆ ನಮ್ಮ ಆಶಯವಾಗಿದೆ ಎಂದರು.

Related Articles

Leave a comment

Back to Top

© 2015 - 2017. All Rights Reserved.