ವಿಷ್ಣು ಸಮಾಧಿ ವಿವಾದ; ಮಂಡ್ಯ ರಮೇಶ್ ಬೇಸರ

Entertainment No Comments on ವಿಷ್ಣು ಸಮಾಧಿ ವಿವಾದ; ಮಂಡ್ಯ ರಮೇಶ್ ಬೇಸರ 7
ಇಂದು ನಗರದಲ್ಲಿ ಏರ್ಪಡಿಸಲಾಗಿದ್ದ ವಿಷ್ಣುವರ್ಧನ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಷ್ಣುವರ್ಧನ್ ಒಬ್ಬರು ಉತ್ತಮ ಕಲಾವಿದರು. ಅಂತವರಿಗೆ ಇಲ್ಲಿ ನಿರಂತರವಾಗಿ ನೋವು, ಅಪಮಾನ ಆಗುತ್ತಾ ಬಂದಿದೆ. ಆದರೂ ಜನರ ಮನಸ್ಸಿನಲ್ಲಿ ಅವರು ಹಸಿರಾಗಿ ನಿಂತಿದ್ದಾರೆ. ಇಂದಲ್ಲಾ ನಾಳೆ ಅವರ ಅಭಿಮಾನಿಗಳೇ ಸ್ವಯಂ ಘೋಷಿತವಾಗಿ ತಾವೇ ವಿಷ್ಣುವರ್ಧನ್ ಪುತ್ಥಳಿ ಅಥವಾ ಸ್ಮಾರಕ ಭವನವನ್ನು ನಿರ್ಮಿಸುತ್ತಾರೆ ಎಂದರು.
ನನಗೆ ತಿಳಿದಿರುವ ಮಟ್ಟಿಗೆ ಭಾರತಿ ವಿಷ್ಣುವರ್ಧನ್ ಅವರು ಒಂದು ಒಳ್ಳೆಯ ನೀಲಿ ನಕ್ಷೆಯನ್ನು ತಯಾರಿಸಿಕೊಂಡಿದ್ದಾರೆ. ಸರ್ಕಾರ ಈ ಬಗ್ಗೆ ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು. ಹಾಗಾದಲ್ಲಿ ಮಾತ್ರ ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಅಧ್ಬುತವಾದ ಶಾಲೆ, ಸ್ಮಾರಕಗಳು ನಿರ್ಮಾಣವಾಗುತ್ತವೆ. ಬೇಕಾದಷ್ಟು ಒಳ್ಳೆಯ ಕೆಲಸಗಳು ಆಗುತ್ತವೆ. ಇನ್ನು ಮೈಸೂರಿನಲ್ಲೇ ಫಿಲ್ಮ್​ ಸಿಟಿ ಮಾಡಬೇಕು ಎನ್ನುವುದು ವಿಷ್ಣು ಅವರ ದೊಡ್ಡ ಆಸೆ. ಅದೂ ಈಡೇರಿದರೆ ಬಹಳ ಸಂತೋಷ ಎಂದು ಮಂಡ್ಯ ರಮೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Related Articles

Leave a comment

Back to Top

© 2015 - 2017. All Rights Reserved.