ಉಪೇಂದ್ರ ರಾಜಕೀಯ ಪಕ್ಷಕ್ಕೆ ಚಾಲನೆ

Entertainment No Comments on ಉಪೇಂದ್ರ ರಾಜಕೀಯ ಪಕ್ಷಕ್ಕೆ ಚಾಲನೆ 17

ಬೆಂಗಳೂರು: ಇಂದು ರಿಯಲ್ ಸ್ಟಾರ್ ಉಪೇಂದ್ರಗೆ 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಶುಭ ಸಂದರ್ಭದಲ್ಲೇ ಉಪ್ಪಿ ಹೊಸ ಪಕ್ಷ ಲಾಂಚ್ ಮಾಡಿದ್ದಾರೆ.

ಹೌದು. ನಟ ಉಪೇಂದ್ರ ಅವರು ಇಂದು `ಉತ್ತಮ ಪ್ರಜಾಕೀಯ ಪಕ್ಷ’ ಎಂಬ ಹೊಸ ಪಕ್ಷವನ್ನು ಲೋಕಾರ್ಪಣೆ ಮಾಡಿದ್ದಾರೆ. ವಿನೂತನವಾಗಿ ಪಕ್ಷವನ್ನು ಲಾಂಚ್ ಮಾಡಿದ ಅವರು, ಇನ್ಮುಂದೆ ನನ್ಮ ಬರ್ತ್ ಡೇ ಯುಪಿಪಿ ಬರ್ತ್ ಡೇ ಆಗಲಿದೆ ಅಂತ ಹೇಳಿದ್ರು.

ವೇದಿಕೆ ಮೇಲೆ ಯುಪಿಪಿಐ ಎಂಬ ಪದಗಳನ್ನಿಟ್ಟು ಅದರಲ್ಲಿ ಐ ಎಂಬ ಪದಕ್ಕೆ ಬೆಂಕಿ ಹಚ್ಚಿ ಉಪ್ಪಿ ಹೆಸರಿನಲ್ಲಿ ಯುಪಿಪಿ ಮಾತ್ರ ಉಳಿದುಕೊಂಡಿದ್ದು ಐ(ನಾನು) ಅನ್ನೋದು ಹೋಗಬೇಕು. 15-20 ವರ್ಷದಿಂದ ನಾನು ಅನ್ನೋದನ್ನು ಕಿತ್ತೊಕೊಳ್ಳೋಕೆ ಇಂದು ದಿನ ಬಂತು. ಇನ್ಮೇಲೆ ಉಪ್ಪಿ ಬರ್ತ್ ಡೇ ಇರಲ್ಲ. ಇಷ್ಟು ವರ್ಷಗಳ ಕಾಲ ಅಭಿಮಾನಿಗಳು ಬರ್ತ್ ಡೇ ಯನ್ನು ಆಚರಿಸಿಕೊಂಡು ಬಂದ್ರು. ಹೀಗಾಗಿ ಇಂದು ಅಭಿಮಾನಿಳಿಗೋಸ್ಕರ ಯುಪಿಪಿ ಎಂಬ ವೇದಿಕೆಯೊಂದನ್ನು ಸಿದ್ಧಪಡಿಸಿದ್ದೇನೆ ಇನ್ಮೇಲಿಂದ ಸೆಪ್ಟೆಂಬರ್ 18ರಂದು ಯುಪಿಪಿ ಬರ್ತ್ ಡೇ ಆಗುತ್ತೆ ಅಂತ ಹೇಳಿದ್ರು.

ಒಂದು ವರ್ಷದ ಹಿಂದೆ ಪ್ರಜಾಕೀಯ ಎಂಬ ಕಲ್ಪನೆಯಿಟ್ಟುಕೊಂಡು ಬಂದಿದ್ದೆವು. ಆ ಬಳಿಕ ಏನೇನೋ ಆಗೋಯ್ತು. ಹೀಗಾಗಿ ಇನ್ನೊಂದು ಪಕ್ಷದ ಜೊತೆ ಸೇರಿ ಕೋಳ್ಳೋ ಪರಿಸ್ಥಿತಿ ಎದುರಾಯ್ತು. ಹೀಗಾಗಿ ಕಳೆದ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗಿಲ್ಲ. ಆಗೋದೆಲ್ಲ ಒಳ್ಳೆಯದೇ ಅನ್ನುವಂತೆ ಎಲ್ಲವೂ ಒಳ್ಳೆದಾಗಿದೆ. ಸದ್ಯ ನಮ್ಮದೇ ಒಂದು ಪಕ್ಷವನ್ನು ರಿಜಿಸ್ಟಾರ್ ಮಾಡಿದ್ದೇವೆ. ಅದೇ ಉತ್ತಮ ಪ್ರಜಾಕೀಯ ಪಕ್ಷ ಅಂದ್ರು

Related Articles

Leave a comment

Back to Top

© 2015 - 2017. All Rights Reserved.