ಅಮ್ಮಚ್ಚಿ ಕಥೆ ಮುಂದಿನ ತಿಂಗಳು ತೆರೆಗೆ

Entertainment No Comments on ಅಮ್ಮಚ್ಚಿ ಕಥೆ ಮುಂದಿನ ತಿಂಗಳು ತೆರೆಗೆ 32
ರಂಗಭೂಮಿ ಕಲಾವಿದರೇ ಸೇರಿ ಅಭಿನಯಿಸಿರುವ ಈ ಸಿನಿಮಾದಲ್ಲಿ ‘ಅಮ್ಮಚ್ಚಿ’ ಪಾತ್ರದಲ್ಲಿ ವಾಸುದೇವ ಅಡಿಗ ಹೋಟೆಲ್ ಮಾಲೀಕರ ಮಗಳು ವೈಜಯಂತಿ ನಟಿಸಿದ್ದಾರೆ. ಈ ಮೂಲಕ ವೈಜಯಂತಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ರಂಗಭೂಮಿ ಹಾಗೂ ಡಬ್ಬಿಂಗ್ ಆರ್ಟಿಸ್ಟ್ ಆಗಿರುವ ಚಂಪಾ ಶೆಟ್ಟಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಉಪೇಂದ್ರ ಅವರ ‘ಎ’ ಸಿನಿಮಾ ಮೂಲಕ ಡಬ್ಬಿಂಗ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿರುವ ಚಂಪಾ ಶೆಟ್ಟಿ ವೈದೇಹಿ ಅವರ ಕಥೆಯನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ.
ಸಿನಿಮಾದಲ್ಲಿ ನಾಯಕ, ನಾಯಕಿ ಪಾತ್ರ ಇಲ್ಲದಿರುವುದೇ ವಿಶೇಷ ಎನ್ನಲಾಗಿದೆ. ರಾಜ್​​​ ಅವರು ಈ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಕಾಶೀನಾಥ್​ ಪತ್ತಾರು ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಪ್ರಕಾಶ್ ಶೆಟ್ಟಿ ಹಾಗೂ ಸ್ನೇಹಿತರು ಸಿನಿಮಾವನ್ನು ನಿರ್ಮಿಸಿದ್ದಾರೆ. ಇನ್ನು ಚಂಪಾ ಅವರ ಸಿನಿಮಾ ಮಾಡುವ 20 ವರ್ಷಗಳ ನೆನಪು ಈಗ ಈಡೇರಿದ್ದು, ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ. 

Related Articles

Leave a comment

Back to Top

© 2015 - 2017. All Rights Reserved.