ಎಲ್ಸಿಟಾ ಹಾಗೂ ಯೂಲೂ ಸಹಭಾಗಿತ್ವದಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸೈಕಲ್ ಯೋಜನೆ ಆರಂಭ

BREAKING NEWS, News, Regional, Top News No Comments on ಎಲ್ಸಿಟಾ ಹಾಗೂ ಯೂಲೂ ಸಹಭಾಗಿತ್ವದಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸೈಕಲ್ ಯೋಜನೆ ಆರಂಭ 26

ಬೆಂಗಳೂರು, ನವೆಂಬರ್ 22:- ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಹನ ದಟ್ಟನೆಯ ಸಮಸ್ಯೆಯನ್ನು ಪರಿಹರಿಸಲು ಹಾಗೂ ಪರಿಸರದ ಸಂರಕ್ಷಣೆಯನ್ನು ಗುರಿಯಾಗಿಟ್ಟುಕೊಂಡು ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‍ಶಿಪ್ ಅಥಾರಿಟಿಯು (ಎಲ್ಸಿಟಾ), ಯೂಲೂ ಬೈಕ್ಸ್ ಸಹಯೋಗದಲ್ಲಿ ನಿಲ್ದಾನರಹಿತ ಸೈಕಲ್ ಯೋಜನೆಯನ್ನು ಇಂದು ಜಾರಿಗೊಳಿಸಿತು.

ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಸಂಸ್ಥೆಗಳ ಬೆಳವಣಿಗೆಗೆ ಹಾಗೂ ಉತ್ತಮ ಉತ್ಪಾದಕತೆಗೆ ಅವಿರತವಾಗಿ ಶ್ರಮ ಪಡುತ್ತಿರುವ ಎಲ್ಸಿಟಾ ಸಂಸ್ಥೆಯು, ಇಲ್ಲಿನ ಉದ್ಯೋಗಿಗಳಿಗಾಗಿ ಉತ್ತಮ ಕಾರ್ಯಕ್ರಮಗಳನ್ನು ಹಿಂದಿನಿಂದಲೂ ಆಯೋಜಿಸುತ್ತಾ ಬಂದಿದೆ. ತಮ್ಮಎಲ್ಲಾ ಯೋಜನೆಗಳಲ್ಲಿ ಉತ್ತಮ ಪಾರದರ್ಶಕತೆ ಹಾಗೂ ಜನರ ನಂಬಿಕೆ ಗಳಿಸುರುವ ಸಂಸ್ಥೆಯು ಈ ಬಾರಿ ಸೈಕಲ್ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಪರಿಸರ ಸಂರಕ್ಷಣೆಗಾಗಿ ಒತ್ತು ನೀಡುತ್ತದೆ.

ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸುವ ಮತ್ತು ಪರಿಸರ ಸಂರಕ್ಷಣೆಗಾಗಿ ಸಮರ್ಥ ಹಾಗೂ ಸಮಯೋಚಿತ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಯೂಲೂ ಸಂಸ್ಥೆಯೊಂದಿಗೆ ನಾವು ಕೂಡ ಕೈ ಜೋಡಿಸಿದ್ದೇವೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಆರೋಗ್ಯಕರ ಹಾಗೂ ಪರಿಸರ ಪ್ರೇಮಿ ಜೀವನಶೈಲಿಯನ್ನು ಗುರಿಯಾಗಿಟ್ಟುಕೊಂಡು ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ, ಎಂದು ಎಲ್ಸಿಟಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಮಾ ಎನ್‍ ಎಸ್‍ ಅವರು ಹೇಳಿದರು.

ಅತ್ಯಂತ ಕಡಿಮೆ ವೆಚ್ಚದಲ್ಲಿ ಹಾಗೂ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಕಡಿಮೆ ದೂರದ ಪ್ರಯಾಣವನ್ನು ನಿರ್ವಹಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಯೂಲೂ ಸಂಸ್ಥೆಯು, ಈ ಯೋಜನೆಯಿಂದ ಮುಂದಿನ ಪೀಳಿಗೆಗೆ ಉತ್ತಮ ಹಾಘೂ ಆರೋಗ್ಯಕರ ವಾತವರಣವನ್ನು ನೀಡುವ ಭರವಸೆಯನ್ನು ಹೊಂದಿದೆ. ಅಧಿಕ ಇಂಧನವನ್ನು ಉಪಯೋಗಿಸುವ ವಾಹನಗಳ ಉಪಯೋಗವನ್ನು ಕಡಿತಗೊಳಿಸಿ ಪರಿಸರಸ್ನೇಹಿ ಸೈಕಲ್ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಯೂಲೂ ಸಂಸ್ಥೆ ಹೊಂದಿದೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಯೂಲೂ ಸೈಕಲ್ ಯೋಜನೆಯನ್ನು ಆರಂಭಿಸುತ್ತಿರುವುದು ನಮ್ಮ ಹಿರಿಮೆಗೆ ಸಂದ ಗರಿ. ಎಲೆಕ್ಟ್ರಾನಿಕ್ ಸಿಟಿಯು ಬೆಂಗಳೂರಿನ ಸುಸ್ಥಿರ ಪರಿಸರ ಅಭಿವೃದ್ಧಿಗಾಗಿ ಸದಾ ತೆರೆದುಕೊಂಡಿರುವ ಪ್ರದೇಶ. ಸಂಪೂರ್ಣ ಭಾರತಕ್ಕೆ ಎಲೆಕ್ಟ್ರಾನಿಕ್ ಸಿಟಿಯನ್ನು ಮಾದರಿ ಸಿಟಿಯಾಗಿಸುವಲ್ಲಿ ಪ್ರಯತ್ನಿಸುತ್ತೇವೆ. ನಮಗೆ ಬದುಕಲು ಈ ಸೌರಮಂಡಲದಲ್ಲಿ ಇನ್ನೊಂದು ಗ್ರಹ ಇಲ್ಲದಿರುವ ಕಾರಣ ನಮ್ಮ ಭೂಮಿಯನ್ನು ಸ್ವಚ್ಚ ಹಾಗೂ ಹಸಿರಾಗಿಡುವುದು ಯೂಲೂ ಬೈಕ್ಸ್ ಸಂಸ್ಥೆಯ ಉದ್ದೇಶ, ಎಂದು ಯೂಲೂ ಬೈಕ್ಸ್ ಸಂಸ್ಥೆಯ ಸಿಇಒ ಅಮಿತ್ ಗುಪ್ತಾ ಅವರು ತಿಳಿಸಿದರು.

ನವೆಂಬರ್ ತಿಂಗಳಿನ ಮೊದಲಿನಲ್ಲಿ ಎಲ್ಸಿಟಾ ಸಂಸ್ಥೆಯೊಂದಿಗೆ ಒಪ್ಪಂದವನ್ನು ಮಾಡಿಕೊಂಡ ಯೂಲೂ ಸಂಸ್ಥೆಯು, ಈ ವರೆಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ 20 ಜಾಗಗಳನ್ನು ಸೈಕಲ್ ಸ್ಟ್ಯಾಂಡ್‍ಗಳಾಗಿ ಗುರುತಿಸಿದೆ. ಯೂಲೂ ಆ್ಯಪ್‍ ಡೌನ್‍ಲೋಡ್‍ ಮಾಡಿ ಅದರ ಮುಖಾಂತರ ಹಣವನ್ನು ನೇರವಾಗಿ ಯೂಲೂ ಬ್ಯಾಂಕ್ ಖಾತೆಗೆ ಜಮಾ ಮಾಡಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. https://www.yulu.bike/apps.html ಈ ಲಿಂಕ್‍ ಅನ್ನು ಬಳಸಿಕೊಂಡು ಬಳಕೆದಾರರು ಯೂಲೂ ಆ್ಯಪ್ ಡೌನ್‍ಲೋಡ್‍ ಮಾಡಿಕೊಳ್ಳಬಹುದು.

ಎಲ್ಸಿಟಾ (ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್ಶಿಪ್ ಅಥಾರಿಟಿ)

2013ರಲ್ಲಿ ಸ್ಥಾಪಿಸಲಾದ ಎಲ್ಸಿಟಾ ಸಂಸ್ಥೆಯು ಇಲೆಕ್ಟ್ರಾನಿಕ್ ಸಿಟಿಯ ನಿರ್ವಹಣೆ ಮಾಡುತ್ತಿದೆ. ಕರ್ನಾಟಕ ಸರಕಾರವು 2013ರಲ್ಲಿ ಇಲೆಕ್ಟ್ರಾನಿಕ್ ಸಿಟಿಯನ್ನು ಕೈಗಾರಿಕಾ ಪ್ರದೇಶ ಎಂದು ಪರಿಗಣಿಸಿ ಇದರ ನಿರ್ವಹಣೆಗಾಗಿ ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಆಕ್ಟ್  ಅಡಿಯಲ್ಲಿ ಎಲ್ಸಿಟಾ ಸಂಸ್ಥೆಯನ್ನು ಸ್ಥಾಪಿಸಿದೆ.

Related Articles

Leave a comment

Back to Top

© 2015 - 2017. All Rights Reserved.