ಬಿಗ್ ಬಾಸ್ ಮನೆಯಲ್ಲಿ ಅತ್ತ ಸ್ಪರ್ಧಿಗಳು

Entertainment, Featured No Comments on ಬಿಗ್ ಬಾಸ್ ಮನೆಯಲ್ಲಿ ಅತ್ತ ಸ್ಪರ್ಧಿಗಳು 10

ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅವರು ದಿವಂಗತರಾಗಿ ಇಂದಿಗೆ 9 ದಿನಗಳು ಕಳೆದಿವೆ. ಆದರೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಶನಿವಾರ ಅಂಬಿ ಸಾವಿನ ಸುದ್ದಿ ತಿಳಿದಿದೆ. ಈ ಹಿನ್ನೆಲೆಯಲ್ಲಿ ಸ್ಪರ್ಧಿಗಳೆಲ್ಲರೂ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

‘ಬಿಗ್ ಬಾಸ್’ ಸ್ಪರ್ಧಿಗಳಿಗೆ ಹೊರ ಜಗತ್ತಿನ ಸಂಪರ್ಕ ಇರುವುದಿಲ್ಲ. ಫೋನ್, ಟಿವಿ, ಸಾಮಾಜಿಕ ಜಾಲತಾಣ ಯಾವುದೇ ಸಂಪರ್ಕವಿಲ್ಲದೇ ಅವುಗಳಿಂದ ದೂರ ಇರುತ್ತಾರೆ. ಆದ್ದರಿಂದ ಅಂಬರೀಶ್ ಅವರ ನಿಧನದ ಸುದ್ದಿ ಕೂಡ ಸ್ಪರ್ಧಿಗಳಿಗೆ ಗೊತ್ತಿರಲಿಲ್ಲ. ಹೀಗಾಗಿ ಶನಿವಾರ ಪ್ರಸಾರವಾದ ಸಂಚಿಕೆಯಲ್ಲಿ ಅಂಬಿ ಸಾವಿನ ಸುದ್ದಿ ತಿಳಿದಿದೆ.

ನಟ ಅಂಬರೀಶ್ ಅವರು ಕಳೆದ ಶನಿವಾರ ದಿನಾಂಕ 24 ರಂದು ಇಹಲೋಕ ತ್ಯೆಜಿಸಿದ್ದರು. ಒಂದು ವಾರಗಳ ಬಳಿಕ ನಿನ್ನೆಯ ಸಂಚಿಕೆಯಲ್ಲಿ ಕೊನೆಯ ಕ್ಷಣ ಸುದೀಪ್ ಅವರು ಅಂಬಿ ನಿಧನದ ವಿಡಿಯೋ ಪ್ಲೇ ಮಾಡುವ ಮೂಲಕ ಸ್ಪರ್ಧಿಗಳಿಗೆ ಸುದ್ದಿ ತಿಳಿಸಿದ್ದಾರೆ. ಈ ವೇಳೆ ಒಂದು ತಕ್ಷಣ ವಿಡಿಯೋ ನೋಡಿ ಶಾಕ್ ಆಗಿ ಅಂಬರೀಶ್ ನೆನೆದು ಅತ್ತಿದ್ದಾರೆ.

ನಮ್ಮ ಪ್ರೀತಿಯ ಮಾಮ ಅಂಬರೀಶ್ ಅವರ ಅಗಲಿಕೆಯ ಸುದ್ದಿಯನ್ನು ಸಂಚಿಕೆಯ ಮೊದಲೇ ಹೇಳಲು ಸಾಧ್ಯವಾಗಿಲ್ಲ. ಯಾಕೆಂದರೆ ಮೊದಲೇ ಅಂಬಿ ಸಾವಿನ ಹೇಳಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ವಿಡಿಯೋ ಹಾಕಿ ವಿಚಾರವನ್ನು ತಿಳಿಸುತ್ತಿದ್ದೇವೆ. ವಿಡಿಯೋ ನೋಡಿ ಸ್ಪರ್ಧಿಗಳ ಪ್ರತಿಕ್ರಿಯೇ ಹೇಗೆ ಇರುತ್ತದೆ ಗೊತ್ತಿಲ್ಲ. ಅದನ್ನು ನೋಡಲು ನನ್ನಿಂದ ಆಗಲ್ಲ ಎಂದು ಸುದೀಪ್ ಹೇಳಿ ಬಿಗ್ ಮನೆಯಲ್ಲಿ ವಿಡಿಯೋ ಪ್ಲೇ ಮಾಡಿ ಬಿಗ್‍ಬಾಸ್ ವೇದಿಕೆಯಿಂದ ಹೊರಟಿದ್ದಾರೆ.

ವಿಡಿಯೋ ಪ್ಲೇ ಆದ ತಕ್ಷಣ ಸ್ಪರ್ಧಿಗಳೆಲ್ಲರೂ ಕಣ್ಣೀರು ಹಾಕಿದ್ದಾರೆ. ಎಲ್ಲರೂ ವಿಡಿಯೋ ನೋಡಿಕೊಂಡು ಮೌನವಾಗಿ ಕುಳಿತಿದ್ದರು. ಅದರಲ್ಲೂ ನವೀನ್ ಸಜ್ಜು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇಂದು ಅಂಬರೀಶ್ ಫೋಟೋಗೆ ಪೂಜೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.