ನನ್ಗಾಗಿ ಪ್ರಾಣ ಕೊಡ್ತೇನೆಂದ ಕಾರ್ಯಕರ್ತ 25,000 ಹಣ ಪಡೆದು ಬೇರೆ ಪಕ್ಷಕ್ಕೆ ಹೋಗ್ಬಿಟ್ಟ: ಸಾ.ರಾ. ಮಹೇಶ್

News, Regional, Top News No Comments on ನನ್ಗಾಗಿ ಪ್ರಾಣ ಕೊಡ್ತೇನೆಂದ ಕಾರ್ಯಕರ್ತ 25,000 ಹಣ ಪಡೆದು ಬೇರೆ ಪಕ್ಷಕ್ಕೆ ಹೋಗ್ಬಿಟ್ಟ: ಸಾ.ರಾ. ಮಹೇಶ್ 20

ಮೈಸೂರು: ನನಗಾಗಿ ಪ್ರಾಣ ಕೊಡುತ್ತೇನೆಂದು ಹೇಳುತ್ತಿದ್ದ ಕಾರ್ಯಕರ್ತ 25 ಸಾವಿರ ರೂ. ಪಡೆದು ಬೇರೆ ಪಕ್ಷಕ್ಕೆ ಹೋದ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರಿಂದ ಆದ ಮೋಸದ ಬಗ್ಗೆ ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದರು.

ಸಾ.ರಾ. ಮಹೇಶ್ ಸ್ವಕ್ಷೇತ್ರದಲ್ಲಿ ಗ್ರಾಮವಾಸ್ತವ್ಯ ಮುಂದುವರಿಸಿದ್ದಾರೆ. ಕೆ.ಆರ್.ನಗರ ಕ್ಷೇತ್ರದ ಹನಸೋಗೆ ಗ್ರಾ.ಪಂ ವ್ಯಾಪ್ತಿಯ ಕರ್ತಾಳು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರಿಂದ ಆದ ಮೋಸದ ಬಗ್ಗೆ ಬಹಿರಂಗವಾಗಿ ಅಸಮಧಾನ ಹೊರಹಾಕಿದರು. ಕರ್ತಾಳು ಗ್ರಾಮಕ್ಕೆ ನೀನು ಬರಲೇಬೇಡ ಅಣ್ಣ ಒಂದು ರೂಪಾಯಿ ದುಡ್ಡು ಬೇಡ ಎಂದಿದ್ದ ಕಾರ್ಯಕರ್ತ ಚುನಾವಣೆ ದಿನ ನಾಪತ್ತೆಯಾಗಿದ್ದ. ನಾನು 37 ವರ್ಷದಲ್ಲಿ ಕಲಿತ ಬುದ್ದಿಯನ್ನೆಲ್ಲ ರಾಜಕೀಯ 15 ವರ್ಷದಲ್ಲೆ ಪಾಠ ಕಲಿಸಿತು ಎಂದು ಹೇಳಿದರು.

ಎಲ್ಲರು ನಮ್ಮವರೇ ಆದರೂ ಕೆಲವರು ನಮ್ಮ ಜೊತೆ ಇರೋಲ್ಲ ಅಷ್ಟೆ. ಎಲ್ಲ ಮಾಡಿದರು ಜನ ಮತ ಹಾಕಲ್ಲ. ಈ ಬಾರಿ ಲೋಕಸಭೆ ಉಪಚುನಾವಣೆಗೆ ಎರಡು ಪಕ್ಷದಿಂದ ಒಬ್ಬ ಅಭ್ಯರ್ಥಿ ಹಾಕಿದ್ದೇವು. ಆದರೆ ಕಾರಣವೇ ಇಲ್ಲದೆ ಮತದಾನ ಬಹಿಷ್ಕಾರ ಮಾಡ್ತಿವಿ ಎಂದರು.

ಆ ಗ್ರಾಮಕ್ಕೆ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದರು ಬಹಿಷ್ಕಾರ ಅಂದರು. ಆದರೆ ಎಂಎಲ್‍ಎ ಚುನಾವಣೆಯಲ್ಲಿ ಆ ಗ್ರಾಮದ ಜನ ಊಟವನ್ನು ಮಾಡದೆ ಕ್ಯೂ ನಿಂತು ಮತ ಹಾಕಿದರು. ಇದು ನಮ್ಮ ಹಣೆಬರಹ ಎಂದು ಲೋಕಸಭಾ ಉಪ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿದ ಗ್ರಾಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Related Articles

Leave a comment

Back to Top

© 2015 - 2017. All Rights Reserved.