ಲಕ್ಷ ದೀಪೋತ್ಸವದಲ್ಲಿದ್ದ ವೈವಿಧ್ಯಮಯ ಖಾದ್ಯಗಳ ಒಂದು ನೋಟ..

Deepotsava 2015 No Comments on ಲಕ್ಷ ದೀಪೋತ್ಸವದಲ್ಲಿದ್ದ ವೈವಿಧ್ಯಮಯ ಖಾದ್ಯಗಳ ಒಂದು ನೋಟ.. 72

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಸಾಗಿದವು. ಇಲ್ಲಿನ ಸಾಂಸ್ಕøತಿಕ ಕಾರ್ಯಕ್ರಮಗಳು, ವಿಶೇಷ ಉಪನ್ಯಾಸಗಳು, ವಿಚಾರ ಗೋಷ್ಠಿ, ಸಂಗೀತ ಸುಧೆ, ಯಕ್ಷಗಾನ, ಭರತ್ಯನಾಟ್ಯ, ಅಂಗವಿಕಲರ ನೃತ್ಯ ಮೊದಲಾದವುಗಳು ನೋಡುಗರ ಕಣ್ಮನ ಸೆಳೆದವು. ಅಂತೆಯೇ ಅಲ್ಲಿನ ಜನರ ದಣಿವು ಮತ್ತು ಹಸಿವನ್ನು ನೀಗಿಸುವ ಹಲವಾರು ವಿಶೇಷ ಖಾದ್ಯಗಳ ಅಂಗಡಿಗಳ ಸಾಲುಗಳನ್ನು ಕಾಣಬಹುದಾಗಿದ್ದವು.

ಗೋಬಿ ಮಂಚೂರಿ, ಮಸಾಲ ಪುರಿ, ಪಾನಿಪುರಿ, ಸೇವ್‍ಪುರಿ, ಚುರುಮುರಿ, ಬಜ್ಜಿ, ಬಿಸಿ ಬಿಸಿ ಉತ್ತರ ಕರ್ನಾಟಕದ ಬಿಳಿಜೋಳ ರೊಟ್ಟಿ, ಎಣ್ಣೆಗಾಯಿ ಬದನೆಕಾಯಿ ಇನ್ನೂ ಮೊದಲಾದ ಚಾಟ್ಸ್‍ಗಳು ಜನರ ಬಾಯಲ್ಲಿ ನೀರೂರಿಸುತ್ತವೆ. ಆದ್ದರಿಂದ ವ್ಯಾಪಾರಿಗಳಿಗೆ ಬೊಂಬಾಟ್ ವ್ಯಾಪಾರ. ಉತ್ತರ ಕರ್ನಾಟಕದ ಪ್ರಸಿದ್ಧವಾದ ಗಿರಮಿಟ್ಟ ಮತ್ತು ಮೆಣಸಿನ ಬಜಿ, ಬಿಳಿಜೋಳದ ರೊಟ್ಟಿ, ಎಣ್ಣೆಗಾಯಿ ಬದನೆಕಾಯಿ ಅತೀ ಹೆಚ್ಚು ತಿಂಡಿ ಪ್ರಿಯರನ್ನು ಸೆಳೆದದ್ದು ಒಂದು ವಿಶೇಷವಾದರೆ, ಖಾರದಿಂದ ಕಣ್ಣೀರು ಹಾಕಿದ್ದು ಮತ್ತೊಂದು ವಿಶೇಷವಾಗಿತ್ತು. ಇಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರೂ ರಾತ್ರಿ ಸಮಯದಲ್ಲಿ ಬಗೆ ಬಗೆಯ ತಿಂಡಿಗಳನ್ನು ಸವಿಯುವುದರಲ್ಲಿ ತಲ್ಲೀನರಾಗಿದ್ದರು.

Food

ತಮ್ಮ ದಣಿವನ್ನು ನಿವಾರಿಸಿಕೊಳ್ಳಲು ಬಂದವರಿಗಂತೂ ಅಲ್ಲಲ್ಲಿ ಕಬ್ಬಿನ ಹಾಲು, ವಿವಿಧ ಬಗೆಯ ಹಣ್ಣಿನ ಜ್ಯೂಸ್‍ಗಳು, ತಂಪು ಪಾನೀಯಗಳು, ಐಸ್‍ಕ್ರೀಮ್‍ಗಳು ರಸ್ತೆ ಬದಿಯಕ್ಕೂ ಕಾಣಸಿಗುತ್ತವೆ. ವ್ಯಾಪಾರಿಗಳಂತೂ ತಮ್ಮದೇ ಆದ ರೀತಿಯಲ್ಲಿ ಜನರನ್ನು ಸೆಳೆಯುತ್ತಿದ್ದುದ್ದು ಒಂದು ವಿಶೇಷವಾಗಿತ್ತು. ಐಸ್‍ಕ್ರೀಮ್ ಅಂಗಡಿಯವನು ಎಲ್ಲರಕ್ಕಿಂತ ಬಿನ್ನವಾಗಿ ಜೋರು ದನಿಯಲ್ಲಿ ಕೂಗಿ ಕರೆಯುತ್ತಿದ್ದ. ಒಟ್ಟಾರೆ ಒಂದು ಜಾತ್ರೆಯ ವಾತಾವರಣ ಅಲ್ಲಿ ಮನೆ ಮಾಡಿತ್ತು.

ವಿಶೇಷ ವರದಿ :ಆನಂದ ಹುಣಶಾಳ

Related Articles

Back to Top

© 2015 - 2017. All Rights Reserved.