ನುಡಿಸಿರಿಯಲ್ಲಿ ನೋಡುಗರ ಮನ ಸೆಳೆದ ಕೃತಕ ಪ್ರಾಣಿಗಳು

alva

ನೋಡಲು ಆನೆಯಂತೆ ಕಂಡರೂ ಅದು ಆನೆಯಲ್ಲ, ಅದೇ ರೀತಿ ನೋಡಲು ಸಿಂಹ, ಹುಲಿ, ಚಿಂಪಾಜಿಗಳಿದ್ದವು. ಆದರೇ ಅವು ಜೀವಂತ ಜೀವಿಗಳಲ್ಲ. ಆದರೆ ಅವುಗಳು ಸ್ವಭಾವಿಕವಾಗಿ ಅರುಚುತ್ತಿದ್ದವು. ಆ ಪ್ರಾಣಿಗಳ ಕೂಗನ್ನು ಲೌಂಡ್ ಸ್ವೀಕರ್ ಗಳ ಮೂಲಕ ಕೇಳಿಸಲಾಗುತ್ತಿತ್ತು. ಪ್ರಾಣಿಯ ಒಳಗಡೆ ಕುಳಿತ ಮನುಷ್ಯ ಅವುಗಳನ್ನು ನಿಯಂತ್ರಿಸುತ್ತಿದ್ದನು. ಹೀಗಾಗಿ ಆನೆ ಸೊಂಡಿಲನ್ನು ಆಡಿಸಿದರೆ, ಹುಲಿ, ಸಿಂಹ, ಚಿಂಪಾಜಿ ತಲೆ ಗುಮುಕು ಹಾಕುತ್ತಿದ್ದವು.

ಈ ರೀತಿಯ ಕೃತಕ ಪ್ರಾಣಿ ಪ್ರದರ್ಶನ ಕಂಡಿದ್ದು ಆಳ್ವಾಸ್ ನುಡಿಸಿರಿಯ ಮುಖ್ಯ ವೇದಿಕೆಯಾದ ರತ್ನಾಕರವರ್ಣಿ ವೇದಿಕೆಯ ಮುಂಬಾಗದಲ್ಲಿ. ಕೇರಳದ ಕಲಾವಿದರು ಈ ಕಲಾಕೃತಿಯ ನಿರ್ಮಾತೃಗಳು. ಜೋಡಿಗೋಬೆ ಎಂಬುವವರು ಇವುಗಳ ಮಾಲಿಕ.

“ಕೇರಳದಲ್ಲಿ ಈ ರೀತಿಯ ಸೊಬಗನ್ನು ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಕಾಣುವುದು ಸಾಮಾನ್ಯ. ಆಳ್ವಾಸ್ ನುಡಿಸಿರಿಗೆ ನಮ್ಮನ್ನು ಕರೆಸಿರುವುದು ಸಂತಸ ತಂದಿದೆ. ಇವುಗಳನ್ನು ಫೈಬರ್, ಮೆಟಲ್ ಗಳಿಂದ ನಿರ್ಮಿಸಲಾಗಿದೆ. ಕೇರಳದಲ್ಲಿ ಇಂತಹ ಹಲವಾರು ಕಲಾವಿದರು ಸಿಗುತ್ತಾರೆ” ಎಂದು ಕಲಾಕೃತಿಗಳನ್ನು ಒತ್ತುತಂದಿರುವ ತಂಡದ ಹದಿನಾರು ಮಂದಿಯಲ್ಲಿ ಒಬ್ಬರಾದ ಆದರ್ಶ್ ವಿವರಿಸಿದರು.

“ಜನರು ಈ ಕಲಾಕೃತಿಗಳನ್ನು ನೋಡಿ ಖುಷಿಯಾಗುತ್ತಿದ್ದಾರೆ. ಅದರಲ್ಲೂ ಮಕ್ಕಳಿಗೆ ತುಂಬಾ ಇಷ್ಟವಾಗುತ್ತಿದೆ. ಜತೆಗೆ ಹಲವರು ಸೆಲ್ಫಿ ತೆಗೆದುಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ” ಎಂದು ತಂಡದ ಮಹೇಶ್ ಹೇಳಿದರು.

ಪ್ರಕೃತಿ ನಾಶವಾಗಿ ವನ್ಯಜೀವಿಗಳು ಕಾಣೆಯಾಗುತ್ತಿರುವ ದಿನಗಳಲ್ಲಿ ಮುಂದಿನ ತಲೆಮಾರಿನ ಜನತೆ ಇಂತಹ ಕಲಾಕೃತಿಗಳಿಂದಲೇ ಮುಂದೆ ಸಂತಸಪಡಬೇಕಾದ ಕಾಲ ಬಂದರೂ ಬರಬಹುದು. ಈಗಾಗಲೇ ಕೆಲವೊಂದು ಪ್ರಾಣಿಗಳನ್ನು ಕೇವಲ ಪಳಯುಳಿಕೆಯಲ್ಲಿ ನೋಡುತ್ತಿದ್ದೇವೆ” ಎಂದು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ ಶಾಂಭವಿ ಹೇಳಿದರು.

ವಿಶೇಷ ವರದಿ : ಯತಿರಾಜ್ ಬ್ಯಾಲಹಳ್ಳಿ

1 Comment

  1. poojitha s bhat November 19, 2016 at 10:18 am

    Tumbaa Dhanyavadagalu……
    Nice

Leave a comment

Search

Back to Top