ಮೋಹನ ಆಳ್ವರಿಂದ ಕರಾವಳಿ ವಿಕಿಮೀಡಿಯನ್ನರ ಸಂಘ ಉದ್ಘಾಟನೆ

alva

img_3220
ವಿದ್ಯಾಗಿರಿ:ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಕೇರಳದ ಉತ್ತರ ಭಾಗದಲ್ಲಿರುವ ಕಾಸರಗೋಡು ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಪ್ರಮುಖ ಭಾಷೆಗಳಾದ ಕನ್ನಡ, ತುಳು ಮತ್ತು ಕೊಂಕಣಿ ಇವುಗಳಿಗೆ ಸಂಬಂಧಿಸಿದ ವಿಕಿಪೀಡಿಯ ಮತ್ತು ಇತರೆ ಯೋಜನೆಗಳ ಬಗ್ಗೆ ಕೆಲಸ ಮಾಡುವ ಕರಾವಳಿ ವಿಕಿಮೀಡಿಯನ್ನರುಗಳ ಸಂಘವನ್ನು ಇಂದು ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು.

ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ : ನಾಳೇಗಳ ನಿರ್ಮಾಣವೆಂಬ ನುಡಿಸಿರಿಯ ಪರಿಕಲ್ಪನೆಗೆ ಕರಾವಳಿ ವಿಕಿಮೀಡಿಯನ್ನರ ಸಂಘವು ಇನ್ನಷ್ಟು ಅರ್ಥವನ್ನು ನೀಡುತ್ತಿದೆ. ಕರಾವಳಿಯ ಜನರು ಜಾತಿ, ಮತಗಳನ್ನು ಮೀರಿ ತುಳು ಭಾಷೆಯನ್ನು ಪ್ರೀತಿಸುತ್ತಾರೆ, ವಿಕಿಮೀಡಿಯನ್ನರ ಈ ಕೆಲಸದಿಂದ ತುಳು ಭಾಷೆಯ ಬೆಳವಣಿಗೆ ಮತ್ತುಷ್ಟು
ಹೆಚ್ಚಾಗಲಿ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ‘ವಿಶ್ವಕನ್ನಡ’ದ ಸಂಪಾದಕ, ಅಂಕಣಕಾರ ಡಾ.ಯು.ಬಿ.ಪವನಜ, ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ
ಜೀವನ್ ರಾಂ, ಪ್ರಾಧ್ಯಾಪಕ ಪ್ರಸಾದ್ ಶೆಟ್ಟಿ, ಸಂಪಾದನೋತ್ಸವದಲ್ಲಿ ಪಾಲ್ಗೊಂಡಿರುವ ವಿಕಿಪೀಡಿಯಾ ಸಂಪಾದಕರು ಉಪಸ್ಥಿತರಿದ್ದರು.

ವರದಿ : ಪೌಲೋಸ್.ಬಿ.

1 Comment

Leave a comment

Search

Back to Top