
ನುಡಿಸಿರಿಯ ಮತ್ತೊಂದು ಮೆರಗು ರಂಗೋಲಿ ಭಾವಚಿತ್ರ ಪ್ರದರ್ಶನ
alva November 20, 2016ವಿದ್ಯಾಗಿರಿ : ತಮ್ಮ ಅದ್ಭುತ ಕೈಚಳಕದ ಮೂಲಕ ಡಾ.ಮೋಹನ ಆಳ್ವ, ಸಮ್ಮೇಳನಾಧ್ಯಕ್ಷೆ ಡಾ.ಬಿ.ಎನ್.ಸುಮಿತ್ರಾ ಬಾಯಿ, ಉದ್ಘಾಟಕರಾದ ಜಯಂತ ಕಾಯ್ಕಿಣಿ, ಖ್ಯಾತ ರಂಗಕರ್ಮಿ ಡಾ.ಬಿ.ಜಯಶ್ರೀ ಸೇರಿಂದತೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಸಾಹಿತಿಗಳನ್ನೂ ರಂಗೋಲಿಯಲ್ಲಿ ಬಹಳ ಸುಂದರವಾಗಿ ಮೂಡಿಸಿದ್ದಾರೆ ಹುಬ್ಬಳ್ಳಿಯ ಕಲಾವಿದ ಶಿವಲಿಂಗಪ್ಪ ಎಸ್.ಬಡಿಗೇರ್
ಶಿವಲಿಂಗಪ್ಪ ಬಡಿಗೇರ್ ಅವರು ಸತತ ಮೂರು ರಾತ್ರಿ ಮೂರು ಹಗಲುಗಳ ಪರಶ್ರಮದ ಫಲವಾಗಿ ಈ ಸುಂದರವಾದ ಕಲೆ ಮೂಡಿಬಂದಿದೆ. ಇವರ ಅರ್ಧಾಂಗಿ ಶ್ರೀಮತಿ ಸರೋಜಾ ಅವರು ಪತಿಯ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
ಸುಮಾರು 25 ವರ್ಷಗಳಿಂದ ಈ ಕಲೆಯನ್ನು ಅಭ್ಯಾಸ ಮಾಡುತ್ತಾ ಬಂದಿದ್ದು, ಬಾಲ್ಯದಲ್ಲಿಯೆ ಚಿತ್ರಕಲೆಯ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಮೊದಲಿಗೆ ಪ್ರವೃತ್ತಿಯಾಗಿದ್ದ ರಂಗೋಲಿಯಲ್ಲಿ ಭಾವಚಿತ್ರಗಳನ್ನು ಬಿಡಿಸುವ ಕಲೆಯು ನಂತರ ಬಹು ಬೇಡಿಕೆಯಿಂದಾಗಿ ವೃತ್ತಿಯನ್ನಾಗಿ ಸ್ವೀಕರಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನ, ದಸರಾ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರದರ್ಶನವನ್ನ ನೀಡಿದ್ದಾರೆ. ಈ ಹಿಂದೆ 2003ರ ನುಡಿಸಿರಿಯಲ್ಲಿ ಪ್ರದರ್ಶನ ನೀಡಿದ್ದರು. ಇದರೊಂದಿಗೆ ಮರಕೆತ್ತನೆ, ಶಿಲ್ಪಕೆತ್ತನೆಗಳಂತಹ ಸೂಕ್ಷ್ಮ ಕೆಲಸಗಳನ್ನು ಮಾಡುತ್ತಾರೆ ಶಿವಲಿಂಗಪ್ಪ ಬಡಿಗೇರ್. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಶಿವಲಿಂಗಪ್ಪ ಎಸ್.ಬಡಿಗೇರ್, 9741329502
ವಿಶೇಷ ವರದಿ : ಚೈತನ್ಯ ಕುಡಿನಲ್ಲಿ
Leave a comment