ಕನ್ನಡ ಹಬ್ಬದ ವೈಭವವನ್ನು ಜನರಿಗೆ ತಲುಪಿಸಿದ ಆಕಾಶವಾಣಿ

alva No Comments on ಕನ್ನಡ ಹಬ್ಬದ ವೈಭವವನ್ನು ಜನರಿಗೆ ತಲುಪಿಸಿದ ಆಕಾಶವಾಣಿ 32

ವಿದ್ಯಾಗಿರಿ : ವಿಜೃಂಭಣೆಯಿಂದ ನಡೆಯುತ್ತಿರುವ ನುಡಿಸಿರಿಯ ವೈಭವವನ್ನು ಜನರ ಮನೆಗಳಿಗೆ ತಲುಪಿಸುತ್ತಿದೆ ಮಂಗಳೂರು ಆಕಾಶವಾಣಿ. ನುಡಿಸಿರಿಯ ಮುಖ್ಯ ವೇದಿಕೆಯ ಪಕ್ಕದಲ್ಲೆ ಆಕಾಶವಾಣಿಯು ತನ್ನ ತಾತ್ಕಾಲಿಕ ಕೇಂದ್ರವನ್ನು ತೆರೆದು ನುಡಿಸಿರಿಯ ವಿಷಯಗಳನ್ನು ಜನರಿಗೆ ತಲುಪಿಸುತ್ತಿದೆ.

ನುಡಿಸಿರಿಯ ಈ ಮೂರು ದಿವಸಗಳ ಕಾರ್ಯಕ್ರಮಗಳನ್ನು ಪೂರ್ವಾಹ್ನ 9 ರಿಂದ 1.10ರವರೆಗೆ ಹಾಗೂ ಅಪರಾಹ್ನ 2.35ರಿಂದ 6ರವರೆಗೆ ನೇರ ಪ್ರಸಾರ ಮಾಡಿದೆ. ಹತ್ತು ಕಡೆ ನಡೆಯುತ್ತಿರುವ ಕಾರ್ಯಕ್ರಮಗಳನ್ನು ಹಾಗೂ ಪ್ರಮುಖ ಸಾಹಿತಿಗಳ, ಗಣ್ಯ ವ್ಯಕ್ತಿಗಳ ಸಂದರ್ಶವನ್ನು ಪ್ರಸಾರ ಮಾಡಿದೆ.

img_1768

img_1767

ಡಾ.ವಸಂತ್ ಕುಮಾರ್ ಪೆರ್ಲರ ನೇತೃತ್ವದಲ್ಲಿ ಡಾ. ಶರಬೇಂದ್ರ ಸ್ವಾಮಿ ಹಾಗೂ ಡಾ. ಸದಾನಂದ ಪೆರ್ಲ ಸೇರಿದಂತೆ ಎಂಟು ಆಕಾಶವಾಣಿಯ ಸಿಬ್ಬಂದಿಗಳು, ಆರು ಇಂಜಿನಿಯರ್ ಗಳು ಕೆಲಸದಲ್ಲಿ ನಿರತರಾಗಿದ್ದಾರೆ.

ಆಕಾಶವಾಣಿಯ ಈ ಕಾರ್ಯಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಕಾರ್ಯಕ್ರಮಕ್ಕೆ ಬರಲಾಗದವರು ತಾವಿದ್ದ ಸ್ಥಳದಲ್ಲೆ ನುಡಿಸಿರಿಯ ವಿಶಿಷ್ಟ ಕಾರ್ಯಕ್ರಮವನ್ನು ಆಲಿಸುವ ಅವಕಾಶವನ್ನು ಒದಗಿಸಿಕೊಟ್ಟಿದೆ ಮಂಗಳೂರು ಆಕಾಶವಾಣಿ.

ವಿಶೇಷ ವರದಿ : ಚೈತನ್ಯ ಕುಡಿನಲ್ಲಿ

Leave a comment

Search

Back to Top