ಸಮ್ಮೇಳನಾಧ್ಯಕ್ಷರ ಮನದ ಮಾತು

alva

ರತ್ನಾಕರವರ್ಣಿ ವೇದಿಕೆ, ವಿದ್ಯಾಗಿರಿ : ಸಮ್ಮೇಳನಾಧ್ಯಕ್ಷ ಸ್ಥಾನ ದೊರಕಿದ್ದು ಅತ್ಯಂತ ಅನಿರೀಕ್ಷಿತವಾದದ್ದು. ಇಂತಹ ಅಪೂರ್ವ ಅವಕಾಶವನ್ನು ಒದಗಿಸಿದ ಮೋಹನ ಮೋಹನ ಆಳ್ವಾರಿಗೆ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ. ಇದು ನನ್ನ ಜೀವನದ ಅತ್ಯಂತ ಮಹತ್ವದ ಕ್ಷಣ.

ಇದು ಸಾಹಿತ್ಯಿಕ, ಸಾಂಸ್ಕೃತಿಕ ಸಮಾವೇಶ. ಅತ್ಯಂತ ಮಹತ್ವಪೂರ್ಣವಾದ ರೀತಿಯಲ್ಲಿ ಧರ್ಮ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಪ್ರಮುಖ ಕ್ಷೇತ್ರಗಳ ಕುರಿತು ಪ್ರಬುದ್ಧ ಚರ್ಚೆ ನಡೆದಿದೆ. ಈ ಎಲ್ಲಾ ಚರ್ಚೆಗಳು ಅತ್ಯಂತ ಅರ್ಥಪೂರ್ಣವಾಗಿತ್ತು.

ಇದು ಕೇವಲ ಹಿರಿಯರಿಗೆ ಸೀಮಿತವಾಗಿರದೆ, ನಿಜವಾದ ಅರ್ಥದಲ್ಲಿ ‘ಯುವಸಿರಿ’ ಯಾಗಿ ಮೂಡಿಬಂದಿದೆ. ಸಾಹಿತ್ಯ ಸಾಂಸ್ಕೃತಿಕ ಹಾಗೂ ವಿಚಾರಗಳ ಅದ್ಭುತವಾದ ರಮ್ಯಲೋಕವೆ ಸೃಷ್ಟಿಯಾಗಿತ್ತು.

ಕರ್ನಾಟಕ : ನಾಳೆಗಳ ನಿರ್ಮಾಣ ಎಂಬ ಸಮ್ಮೇಳನದ ಪರಿಕಲ್ಪನೆ ಕೇವಲ ಚರ್ಚೆಯ ವಿಷಯವಾಗಿರಲಿಲ್ಲ, ಈ ತತ್ವವನ್ನು ಮೋಹನ ಆಳ್ವರು ಈಗಾಗಲೆ ತಮ್ಮ ಕಾರ್ಯಗಳಲ್ಲಿ ಅಳವಡಿಸಿಕೊಂಡಿದ್ದಾರೆ. ಹಾಗಾಗಿ ಇದು ಈಗಾಗಲೆ ಪ್ರಾರಂಭವಾಗಿದೆ.

ಡಾ. ಗಿರಡ್ಡಿ ಗೋವಿಂದರಾಜರು ಹೇಳಿದ ಮಧ್ಯಮ ಮಾರ್ಗದ ಪರಿಕಲ್ಪನೆ ಈ ಸಂಸ್ಥೆಯಿಂದಲೆ ಪ್ರಾರಂಭವಾಗಿದೆ.

ನುಡಿಸಿರಿಯ ಪ್ರಶಸ್ತಿಯನ್ನು ನೀಡುವಾಗ ಮೋಹನ ಆಳ್ವರಲ್ಲಿ ಎಳ್ಳಷ್ಟು ದುರಾಭಿಮಾನವಿರುವುದಿಲ್ಲ. ಅತ್ಯಂತ ವಿನಯಪೂರ್ವಕವಾಗಿ, ಭಕ್ತಿಯಿಂದ, ಗೌರವದಿಂದ ಪ್ರಶಸ್ತಿಯನ್ನು ನೀಡುತ್ತಾರೆ. ಇದು ನನ್ನ ಅನುಭವದಿಂದ ಬಂದಂತಹ ಮಾತುಗಳು. ಇಂತಹ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರಲಿ.

ಸಮ್ಮೇಳನಾಧ್ಯಕ್ಷತೆಯ ಸ್ಥಾನ ದೊರಕುವುದು ಕೇವಲ ಗೌರವದ ಅಥವಾ ಪುಸ್ಕಾರದ ದೃಷ್ಟಿಗೆ ಮಾತ್ರ ಸೀಮಿತವಲ್ಲ. ಇಲ್ಲಿ ಸಿಗುವ ಜ್ಞಾನ, ಅನುಭವಗಳು ನಮ್ಮ ಮುಂದಿನ ಜೀವನಕ್ಕೆ ಮಾರ್ಗದರ್ಶನ ನೀಡುತ್ತದೆ.

ವರದಿ : ಚೈತನ್ಯ ಕುಡಿನಲ್ಲಿ

Leave a comment

Search

Back to Top