ವಿರಾಸತ್’ಗೆ ಸಜ್ಜಾಗಿದೆ ಮೂಡುಬಿದ್ರೆಯ ಆಳ್ವಾಸ್ ಕ್ಯಾಂಪಸ್

alva

ಮೂಡುಬಿದಿರಿಯ ಆಳ್ವಾಸ್ ಕಾಲೇಜಿನಲ್ಲಿ ಇಂದಿನಿಂದ ಆಳ್ವಾಸ್ ವಿರಾಸತ್ ಆರಂಭವಾಗಲಿದೆ. ಈ ಸಾಂಸ್ಕೃತಿಕ ಹಬ್ಬಕ್ಕೆ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆ ಸಂಪೂರ್ಣ ಸಜ್ಜಾಗಿದೆ. ಇಂದಿನಿಂದ 15ರ ವರೆಗೆ ನಡೆಯುವ ವಿರಾಸತ್’ಗಾಗಿ ಕ್ಯಾಂಪಸ್ ಅನ್ನು ವಿಶೇಷ ರೀತಿಯಲ್ಲಿ ಸಜ್ಜು ಮಾಡಲಾಗಿದೆ.

IMG-20170112-WA0021

IMG-20170112-WA0027

IMG-20170112-WA0023

150 ಅಡಿ ಅಗಲ ಹಾಗೂ 60 ಅಡಿ ಉದ್ದದ ವಿಶಾಲವಾದ ವೇದಿಕೆಯನ್ನು ಸಜ್ಜು ಮಾಡಲಾಗಿದ್ದು, ಇದರ ಸುತ್ತಲೂ ಮಾಡಿರುವ ಅಲಂಕಾರ ಮನಮೋಹಕವಾಗಿದೆ. ಅಲ್ಲದೇ, ಅಲಂಕಾರಿಕವಾಗಿ ಬಳಸಿರುವ ಎತ್ತಿನ ಬಂಡಿಯ ಚಕ್ರ, ವಿದ್ಯುತ್ ದೀಪಾಲಂಕಾರಗಳು, ಗುತ್ತು ಮನೆಗಳು ವಿಶೇಷ ಮೆರುಗನ್ನು ನೀಡಿದೆ. ಈ ಬಾರಿ ವಿಶೇಷವಾಗಿ ಶ್ರೀಲಂಕಾದ ಸಾಂಪ್ರದಾಯಿಕ ಮುಖವಾಡಗಳನ್ನು ಬಳಸಲಾಗಿದೆ. ಅಲ್ಲದೇ, 40 ಸಾವಿರ ಜನಕ್ಕೆ ಸಾಕಾಗುವಷ್ಟು ಆಸನ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟಿನಲ್ಲಿ ವಿರಾಸತ್’ಗೆ ಸಕಲ ರೀತಿಯಿಂದ ಆಳ್ವಾಸ್ ಕ್ಯಾಂಪಸ್ ಸಜ್ಜಾಗಿದೆ.

IMG-20170112-WA0025

IMG-20170112-WA0024

IMG-20170112-WA0026

Leave a comment

Search

Back to Top