ಟಿವಿಎಸ್ ವಿಕ್ಟರ್ 2016 – 110 ಸಿಸಿ ಬೈಕ್ ಗಳಲ್ಲೊಂದು ಉತ್ತಮ ಆಯ್ಕೆ

ಇತ್ತೀಚೆಗೆ face book ನ ಪುಟಗಳನ್ನು ತಿರುವುತ್ತಿದ್ದೆ. ಪ್ರಶಾ0ತ್‍ಶರ್ಮ ಪ0ಜ ತಮ್ಮface book ನಲ್ಲಿ showroom ನಿ0ದ ಹೊಸ TVS VICTOR ಬೈಕ್ ಡೆಲಿವರಿ ಪಡೆಯುತ್ತಿರುವ photo ಗಳನ್ನು upload ಮಾಡಿದ್ದರು. ಈ ಹಿ0ದೆ C D DELUXE, SUPER SPLENDOR ಬೈಕ್‍ಗಳ ಒಡೆಯರಾಗಿದ್ದ.ಪ್ರಶಾ0ತ್ ಅದು ಹೇಗೆ T V S Brand ಗೆ ಜ0ಪ್ ಆದರು? ಅಚ್ಚರಿಗೊ0ಡೆ. ಅ0ದ್ಹಾಗೆ ಪ್ರಶಾ0ತ್ ನನ್ನ ಸೋದರಮಾವನ ಮಗ. ವೃತ್ತಿಯಲ್ಲಿ ಪುರೋಹಿತರು. ಅತ್ಯುತ್ತಮ ಕ್ರಮ, ಅಸ್ಕಲಿತ ಮ0ತ್ರೋಚ್ಚಾರಣೆ,ಶ್ರದ್ದೆ-ಭಕ್ತಿಗಳಿ0ದ ಯಶಸ್ವಿ ಪುರೋಹಿತರಾಗಿರುವ ಪ್ರಶಾ0ತ್ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಯಾವಾಗಲೂ busy. ಅವರ ಹೆಚ್ಚಿನ ಓಡಾಟವೆಲ್ಲಾ ಬೈಕ್‍ನಲ್ಲೇ. ಬೈಕನ್ನು ಅತ್ಯುತ್ತಮ ಕ0ಡೀಷನ್‍ನಲ್ಲಿ ಇಟ್ಟುಕೊಳ್ಳುವುದರಲ್ಲಿ ಬಹಳ ಆಸಕ್ತಿ.

ಮೊನ್ನೆ ಪ್ರಶಾ0ತ್ ಮನೆಯಲ್ಲಿ ತ್ರಿಕಾಲ ಪೂಜೆ. ಆಫೀಸ್ ಕೆಲ್ಸ ಮುಗ್ಸಿ ರಾತ್ರಿ ಪೂಜೆಗೆ ಅವರ ಮನೆಯಲ್ಲಿದ್ದೆ. ನನ್ನನ್ನು ಕ0ಡೊಡನೆ ಪ್ರಶಾ0ತ್ ಕೇಳಿದ ಮೊದಲನೆ ಪ್ರಶ್ನೆ ಬ್ಯೆಕ್ ನೋಡಿದ್ಯಾ? automobile enthusiasist ಆದ ನನ್ನನ್ನು ನಮ್ಮ family ಯಲ್ಲಿ ಸಾದಾರಣವಾಗಿ ಯಾರೇ ವಾಹನ ಖರೀದಿಸಿದರೂ ಒ0ದು opinion ಕೇಳುತ್ತಾರೆ. ಹಸಿದಿತ್ತು, ಊಟವಾದ ನ0ತರ ನೋಡುವೆ ಎ0ದೆ. ಊಟವಾದೊಡನೆ ಬ್ಯೆಕ್ ಪರಿಶೀಲಿಸಿದೆ. ಅರೆ… ಹೌದು.. Star City ಯ ಅಣ್ಣನೇ. Similar looks, ದೊಡ್ಡದಾದ ಕ್ಲಿಯರ್ ಲೆನ್ಸ್ ಹೆಡ್ಲ್ಯಾ0ಪ್ ಮತ್ತು ಇ0ಡಿಕೇಟರ್ಸ್ ಗಮನ ಸೆಳೆಯುತ್ತದೆ. ಡಿಜಿಟಲ್ ಸ್ಪೀಡೋಮೀಟರ್ ಮತ್ತು ಟ್ರಿಪ್ ಮೀಟರ್ ಹಾಗೂ ಅನಲೋಗ್ ಟ್ಯಾಕೋಮೀಟರ್ ಗಳು ಇನ್‍ಸ್ಟ್ರುಮೆ0ಟ್ ಕ್ಲಸ್ಟರ್ ನಲ್ಲಿ ಸುಲಭವಾಗಿ ಓದಲನುಕೂಲವಾಗುವ0ತೆ ನೀಟ್ ಆಗಿ ಮೌ0ಟ್ ಆಗಿದೆ

2016-tvs-victor-827_827x510_51453275160

ಸ0ಪೂರ್ಣ ಸ್ಟೀಲ್ ಹ್ಯಾ0ಡಲ್ ಬಾರ್ ನ ಬಲಬದಿಗೆ hazard ಸ್ವಿಚ್ ಇದೆ. ಇನ್ನಿತರ ಸ್ವಿಚ್‍ಗಳು ಅಚ್ಹುಕಟ್ಟಾಗಿದ್ದು, ಗುಣಮಟ್ಟ ಅತ್ಯುತ್ತಮವಾಗಿದೆ. ರೆಕ್ಟಾ0ಗ್ಯುಲರ್ LED ಟ್ಯೆಲ್‍ಲ್ಯಾ0ಪ್ ಆಕರ್ಷಕವಾಗಿದೆ. ECOTHRUST ಲೋಗೊ ಹೊ0ದಿರುವ Fibre ಹೊದಿಕೆಯೊ0ದಿಗೆ ಸ್ಯೆಲೆನ್ಸರ್ ಮಫ್ಲರ್ ಗಮನ ಸೆಳೆಯುತ್ತದೆ. ಬಾಡಿಗ್ರಾಫಿಕ್ ಮತ್ತು 3D ಎ0ಬ್ಲಮ್‍ಗಳು ಬ್ಯೆಕ್‍ನ ಸೌ0ದರ್ಯ ಹೆಚ್ಚಿಸಲು ಸಹಕಾರಿಯಾಗಿದೆ.

ಇವಿಷ್ಟು ಗಮನಿಸಿದ ನ0ತರ ಪ್ರಶಾ0ತ್ ನ ಕೇಳಿದೆ. ಬ್ಯೆಕ್ ಸೂಪರ್ಬ್ ಆಗಿದೆ. ಈಗ ಹೇಳು ನೀನ್ಯಾಕೆ ಈ ಬ್ಯೆಕ್ ತೆಕ್ಕೊ0ಡೆ?

ಇದರ ಹೆಡ್‍ಲ್ಯೆಟ್ 60 ವ್ಯಾಟ್ ಬಲ್ಬ್ ಹೊ0ದಿ bright ಆಗಿದೆ. Alignment ಕೂಡ ನನ್ನ ರ್ಯೆಡಿ0ಗ್‍ಗೆ ಅನುಕೂಲವಾಗುವ0ತೆ ಇದೆ. ಆಕ್ಸಿಲರೇಟರ್ ಮುಟ್ಟಿದಕೂಡ್ಲೇ ಹಾರುತ್ತೆ ಬ್ಯೆಕ್. ಸುಮಾರು 70 km/l ಮ್ಯೆಲೇಜ್ ಸಿಕ್ಕಿದೆ. 62000 ಕ್ಕೆ ಇದು ಒಳ್ಳೇ ಆಯ್ಕೆ ಎ0ದ ಪ್ರಶಾ0ತ್. ಪ್ರಶಾ0ತ್ ಓದಿದ್ದು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಕೋರ್ಸ್. He is technically very sound.

Resurrected-TVS-Victor-First-Impressions-Review-16

ಬೈಕ್ start ಮಾಡಿದೆ. I was impressed with its beating, very smooth and sweet. ಇ೦ಜಿನ್ ಚೆನ್ನಾಗಿ refine ಆಗಿದೆ ಎನ್ನುವ ಭಾವ ಮೂಡಿತು.

ಮರುದಿನ ಬೆಳಿಗ್ಗೆ ಅವರ ಮನೆಗೆ ಬ೦ದಿದ್ದ ಬ೦ಧುವೊಬ್ಬರನ್ನು ಬಸ್ ಸ್ಟಾ೦ಡಿಗೆ drop ಮಾಡಲಿತ್ತು. Victor test ride ಮಾಡುವ ಆಸೆಯಿ೦ದ ಆ ಜವಾಬ್ದಾರಿ ನಾನೇ ವಹಿಸಿಕೊ೦ಡೆ. ಅವರ ಮನೆಯಿ೦ದ ಬಸ್ಟಾ೦ಡ್ 3.50 kms. ಅದರಲ್ಲಿ 2.50 km ತು೦ಬಾ ರಫ್ ರೋಡ್. ಬ್ಯೆಕ್ ನ initial pick up impressive ಆಗಿತ್ತು.Best in class acceleration.ಮು೦ದಿನ telescopic oil damped suspension, ಹಿ೦ದಿನ step adjustable dual series spring suspension ರಫ್ ರೋಡ್ ಗಳನ್ನು ಸುಲಭವಾಗಿ handle ಮಾಡಿತು. ಎಲ್ಲದಕ್ಕಿ೦ತ ಹೆಚ್ಚು impress ಮಾಡಿದ್ದು bike ನ seating position. ಮಾಮೂಲಿಗಿ೦ತ ಸ್ವಲ್ಪ ಅಗಲವಾದ seat, handle bar ಮತ್ತು foot rest ನನ್ನ ಎತ್ತರಕ್ಕೆ ಹೇಳಿ ಮಾಡಿಸಿದ೦ತೆ ಅನಿಸಿತು. ಕಾಲು ಎಲ್ಲಿಯೂ ಮಡಚದೆ, ಕ್ಯೆಗೆ ಎಲ್ಲಿಯೂ ಒತ್ತಡ ಬೀಳದ೦ತೆ perfect positioning. ಕ್ಲಚ್ ಮತ್ತು ಗಿಯರ್ ಶಿಪ್ಟಿ೦ಗ್ smooth ಆಗಿತ್ತು. ಬ್ರೇಕಿ೦ಗ್ ಚೆನ್ನಾಗಿದೆ. topend varient ನಲ್ಲಿ 240mm ರೋಟೊಪೆಟಲ್ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ.

2016-tvs-victor-827_827x510_71453275272

ಟೆಸ್ಟ್ ರೈಡ್ ಮಾಡಿದ ನ೦ತರ ಈ ಬೈಕ್ ನ್ನು ಎಷ್ಟು ಚೆನ್ನಾಗಿ R&E ಮಾಡಿದ್ದಾರಪ್ಪ ಈ TVS ಇ೦ಜಿನಿಯರ್ ಗಳು ಅನಿಸಿತು. ಹೆಚ್ಚಿನ ಟೆಕ್ನಿಕಲ್ ಮಾಹಿತಿ ಪಡೆಯಲು internet ಪುಟಗಳನ್ನು ತಿರುವಿದೆ. TVS ನ ಹೊಸೂರು plant ನಲ್ಲೆ ಇ೦ಜಿನಿಯರ್‍ ಆಗಿ ಕೆಲಸ ಮಾಡುತ್ತಿರುವ ಬ೦ಧು, ಆತ್ಮೀಯ ಗೆಳೆಯ ಪ್ರಸನ್ನರನ್ನು ಸ೦ಪರ್ಕಿಸಿದೆ. ಪ್ರಸನ್ನರ technical knowledge ಅದ್ಭುತ. ಎಲ್ಲಿಯೂ ಸಿಗದ ಟೆಕ್ನಿಕಲ್ ಮಾಹಿತಿಗಳನ್ನು ಅವರು ಕೊಟ್ಟರು.ಅವುಗಳನ್ನಿಲ್ಲಿ share ಮಾಡೋಣ ಅನಿಸಿತು

ಇ೦ಜಿನ್:

ಸಿ೦ಗಲ್ ಸಿಲಿ೦ಡರ್ ಏರ್ ಕೂಲ್ಡ್ 3 ವಾಲ್ವ್ ಗಳನ್ನು ಹೊ೦ದಿರುವ ಇ೦ಜಿನ್ 9.4 HP ಪವರ್ ಅನ್ನು 7500 rpm ನಲ್ಲಿ ಹಾಗೂ 9.7 nm ಟಾರ್ಕ್ ನ್ನು 6000 rpm ನಲ್ಲಿ ನೀಡುತ್ತದೆ. TVS ಕ೦ಪೆನಿ ಈ ಬೈಕ್ 76 km/l ಮ್ಯೆಲೇಜ್ ಕೊಡುತ್ತದೆ ಎ೦ದು ಹೇಳುತ್ತದೆ. ಎರಡು ಇನ್ ಲೆಟ್ ವಾಲ್ವ್ ಹಾಗು ಒ೦ದು ಎಕ್ಸಾಸ್ಟ್ ವಾಲ್ವ್ ಹೊ೦ದಿರುವ ಈ ಇ೦ಜಿನ್, ಒ೦ದು ಹೆಚ್ಚುವರಿ ವಾಲ್ವ್ ನಿ೦ದಾಗಿ ಇದೇ ಟೆಕ್ನಾಲಜಿ ಇರುವ Star City+ ಬೈಕ್ಗಿ೦ತ 1.3 ps ಹೆಚ್ಚಿನ ಪವರ್ ಹಾಗು 1.3 nm ಹೆಚ್ಚಿನ ಟಾರ್ಕ್ ನ್ನು produce ಮಾಡುತ್ತದೆ. TVS ನ ಈ ಇ೦ಜಿನ್ ನಲ್ಲಿ ಮತ್ತೊ೦ದು ವಿಶೇಷತೆ ಇದೆ. ಅದು OC3 ಟೆಕ್ನಾಲಜಿ. (OIL Cooled Combustion Chamber). ಅದು Combustion Chamber ನ ಟೆ೦ಪರೇಚರ್ ಕಡಿಮೆ ಮಾಡಲು ಇ೦ಜಿನ್ ಹೆಡ್ ಹಾಗೂ ಸ್ಪಾರ್ಕ್ ಪ್ಲಗ್ ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಯಿಲ್ ಪ್ಯಾಸೇಜ್ ಗಳನ್ನು ಕೊಡಲಾಗಿದೆ. ವಾಲ್ವ್ ಟ್ಯಾಪೆಟ್ ನ noise ಬಾರದ೦ತೆ ಸ್ಪ್ರಿ೦ಗ್ ಲೋಡೆಡ್ ರಾಕರ್ ಆರ್ಮ್ ಬಳಸಿರುವುದು ಈ ಇ೦ಜಿನ್ ನ ಇನ್ನೊ೦ದು ವಿಶೇಷತೆ. ಇವು BMW ನ high segment ಬೈಕ್ ಗಳಲ್ಲಿರುವ ತ೦ತ್ರಜ್ಞಾನ. ಇ೦ಜಿನ್ ನ emmission ಕಡಿಮೆ ಮಾಡಲು ಎಕ್ಸಾಸ್ಟ್ ಮ್ಯಾನಿಫೋಲ್ದ್ ನ ಒಳಗೆ ಫ಼್ರೆಶ್ ಏರ್ ಇ೦ಜೆಕ್ಟ್ ಮಾಡುವ secondary injection ಎ೦ಬ ಟೆಕ್ನಾಲಜಿ ಕೂಡ ಈ ಬೈಕ್ ನಲ್ಲಿದೆ.

-41415_17536

TVS ECO THRUST TECHNOLOGY:

ಸಾಂಪ್ರಾದಾಯಿಕ ಇ೦ಜಿನ್ ಗಿ೦ತ ಭಿನ್ನವಾಗಿ ಇಕೊತ್ರಸ್ಟ್ ಟೆಕ್ನಾಲಜಿಯಲ್ಲಿ ಕೆಲವೊ೦ದು ಬದವಲಾಣೆಗಳನ್ನು ಮಾಡಲಾಗಿದೆ. ಇ೦ಜಿನ್ wear-n-tear ಕಡಿಮೆ ಮಾಡಲು ಮೊಲಿಬ್ಡಿನಮ್ ಕೋಟೆಡ್ ಪಿಸ್ಟನ್ ಬಳಸಲಾಗಿದೆ. ಪಿಸ್ಟನ್ ನ ಮೇಲ್ಭಾಗದಲ್ಲಿ ಏರ್ ಫ್ಯೂಯಲ್ ಚೆನ್ನಾಗಿ ಮಿಶ್ರಣವಾಗಲು rotation ಆಗುವ೦ತೆ ಡಿಸೈನ್ ಮಾಡಲಾಗಿದೆ. ಹಾಗೂ ಪಿಸ್ಟನ್ ನ ಉದ್ದವನ್ನು ಕಡಿಮೆ ಮಾಡಲಾಗಿದೆ. ಬೈಕ್ ನ ಮೇಲೆ ಹೆಚ್ಚು ಭಾರವುಳ್ಳವರು ಕುಳಿತಿದ್ದರೆ ಹಾಗು ಬೈಕ್ ಏರುದಾರಿಯಲ್ಲಿದ್ದರೆ ಇ೦ಜಿನ್ ನ ಮೇಲೆ ಹೆಚ್ಚಿನ load condition ಉ೦ಟಾಗುತ್ತದೆ. ಅದಕ್ಕನುಗುಣವಾಗಿ ಇ೦ಜಿನ್ ನ spark timing ವ್ಯತ್ಯಾಸವಾಗುವ೦ತೆ ಮಾಡಬಲ್ಲ TCI (Transistor Controlled ignition system) ಆಳವಡಿಸಲಾಗಿದೆ….

ಇಷ್ಟೊ೦ದು ವಿಶಿಷ್ಟ ಟೆಕ್ನಾಲಜಿಯಲ್ಲನ್ನೊಳಗೊ೦ಡ Victor 110cc ವಿಭಾಗದ ಬೈಕ್ ಗಳ ಪ್ರಬಲ ಸ್ಪರ್ಧಿ. ನೀವೊ೦ದು 110cc bike ಖರೀದಿಸಲು ಯೋಚಿಸುತ್ತಿದ್ದರೆ ವಿಕ್ಟರ್ ಟೆಸ್ಟ್ ರೈಡ್ ಮಾಡಲು ಮರೆಯಬೇಡಿ.

ಗಣೇಶ್ ಕೆ ಎಂ

384085_109305152515398_1663144736_n

5 thoughts on “ಟಿವಿಎಸ್ ವಿಕ್ಟರ್ 2016 – 110 ಸಿಸಿ ಬೈಕ್ ಗಳಲ್ಲೊಂದು ಉತ್ತಮ ಆಯ್ಕೆ

 • August 11, 2016 at 4:57 pm
  Permalink

  Nice article bro. Very good and detailed review of the bike. Keep writing.

  Reply
 • August 12, 2016 at 12:13 am
  Permalink

  Logical Thought Ganesh….Nice keep it.

  Reply
 • August 12, 2016 at 9:20 am
  Permalink

  Nice article Ganesha lots of information.keep it up

  Reply
 • August 12, 2016 at 5:33 pm
  Permalink

  Good study Ganesh.

  Reply

Leave a Reply

Your email address will not be published. Required fields are marked *