ಏತಕ್ಕೆ ಬೇಕು ಜಯಂತಿಗಳು ಈ ಬರದ ಸಮಯದಲ್ಲಿ?

ಇಷ್ಟು ದಿನ ಇತಿಹಾಸದ ಪುಟದಲ್ಲಿ ರಾರಾಜಿಸುತ್ತಿದ್ದ ಟಿಪ್ಪು ಸುಲ್ತಾನ್ ಈಗ ರಾಜ್ಯದಾದ್ಯಂತ ಮತ್ತೆ ಸುದ್ಧಿಯಲ್ಲಿದ್ದಾನೆ. ಅದೂ ಬರಿ ಸುದ್ದಿಯಾಗಿಲ್ಲ, ಎರಡು ಪಕ್ಷಗಳ ಹಿತ ಕಾಯುವ ಗಾಳವಾಗಿದ್ದಾನೆ. ಜೊತೆಗೆ ಮಾಧ್ಯಮಗಳು ಇದಕ್ಕೆ ಸಹಕರಿಸುವ ದೋಣಿಗಳಾಗುತ್ತಿವೆ. ರಾಜಕಾರಣಿಗಳಿಗೆ ಓಟುಗಳಿಸುವ ಆಸೆಯಾದರೆ, ಏನೂ ತಿಳಿಯದ ಅಮಾಯಕ ಜನರಿಗೆ ಸುಮ್ಮನೆ ಏಟು ತಿನ್ನುವುದು ಕಾಯಕವಾಗಿಬಿಟ್ಟಿದೆ.

ಹಿಂದೆ ಟಿಪ್ಪು ಒಳ್ಳೆಯದು ಮಾಡಿದನೋ, ಇಲ್ಲವೋ ಬೇಕಿಲ.್ಲ ಅದು ಇತಿಹಾಸ. ಆದರೆ, ಇಂದು ಅವನ ಹೆಸರಿನಿಂದ ಏನಾಗುತ್ತಿದೆ ಎನ್ನುವುದು ಮುಖ್ಯ. ಅವನು ಪುಸ್ತಕದಲ್ಲೆ ಉಳಿದರೆ ಒಳಿತು. ಏಕೆಂದರೆ ಅವನ ಬಗ್ಗೆ ಕೆದುಕುತ್ತ ಹೋದರೆ ಕೊನೆಗೆ ಸಿಗುವುದು ಬರಿ ದ್ವಂದ್ವಗÀಳು ಹಾಗೂ ಅಪಸ್ವರಗಳು. ಆದರೆ ಯಾವುದೊ ಲಾಭಕ್ಕಾಗಿ ಟಿಪ್ಪುವಂತವರನ್ನು ರಾಜಕೀಯ ಕೆಸರೆರಚಾಟಕ್ಕೆ ಮಣ್ಣಾಗಿ ಬಳಸಿಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಆದರೆ ಇದರಿಂದ ಕೆಡುಕನ್ನು ಅನುಭವಿಸುತ್ತಿರುವವರು ಸಾಮಾನ್ಯ ಜನರು.

ಹೌದು. ಒಂದು ಕಡೆ ಕಾಂಗ್ರೆಸ್ ಮುಸ್ಲೀಮರ ಓಟ್ ಬ್ಯಾಂಕಿಗಾಗಿ ಟಿಪ್ಪು ಜಯಂತಿಯನ್ನ ಬಳಸಿಕೊಳ್ಳುತ್ತಿದ್ದರೆ, ಇತ್ತ ಬಿಜೆಪಿಯವರು ಇದನ್ನು ವಿರೋದಿಸುತ್ತ ಧರ್ಮವನ್ನು ಎಳೆತಂದು ಟಿಪ್ಪು ಹಾಗೆ ಹೀಗೆ ಎಂದೆಲ್ಲ ಹೇಳುತ್ತ ಒಬ್ಬರಿಗೊಬ್ಬರು ಬೈದಾಡುತ್ತಿದ್ದಾರೆ. ಅದಾಗಿದ್ದರೆ ಸರಿ ಒಂದು ಹೆಜ್ಜೆ ಮುಂದೋಗಿ ಹೋರಾಟಕ್ಕೂ ಇಳಿದಿದ್ದಾರೆ. ಇಂಥದಕ್ಕೆ ಬಲಿಯಾಗುತ್ತಿರುವುದು ಅಮಾಯಕ ಜನರು. ಇದಕ್ಕೆ ಕೊಡಗಿನಲ್ಲಿ ಆದ ಹಿಂಸಾಚಾರವೇ ಸಾಕ್ಷಿ.
ಆಗಿದ್ದು ಇಷ್ಟೇ. ಭಾರತದ ಇತಿಹಾಸದಲ್ಲಿ ಅಜರಾಮರನಾದ, ಆಂಗ್ಲರನ್ನು ಸೋಲಿಸಿ ಅಜೇಯರಾಗಿ ಉಳಿದಿದ್ದ ಅವರಿಗೆ ಸಿಂಹ ಸ್ವಪ್ನವಾಗಿ ಕಾಡಿದ ಟಿಪ್ಪುವಿಗೆ ಗೌರವ ಸಲ್ಲಿಸಬೇಕೆಂಬ ಕಾರಣವೊಡ್ಡಿ, ಟಿಪ್ಪು ಜಯಂತಿಯನ್ನು ಹೋದ ವರ್ಷವೇ ಆರಂಭಿಸಲಾಯ್ತು. ಆದರೆ ಅದು ಕೋಮು ಗಲಭೆಯ ರೂಪ ಪಡೆದುಕೊಂಡುಬಿಟ್ಟಿತು.

ನವೆಂಬರ್ 10ರಂದು ಟಿಪ್ಪು ಜಯಂತಿಯ ಆಚರಣೆ ಸಡಗರದಿಂದಲೇ ಆರಂಭವಾಯ್ತು. ಆದರೆ ಜಯಂತಿ ಬಗ್ಗೆ ಹಲವರಲ್ಲಿ ವಿರೋಧವಿತ್ತು. ಟಿಪ್ಪುವನ್ನು ಹೆಚ್ಚಾಗಿ ವಿರೋದಿಸುತ್ತಿದ್ದ ಕೊಡಗಿನಲ್ಲಿ ಮೊದಲು ಇದರ ವಿರುದ್ಧ ಗಲಬೆ ಆರಂಭವಾಯ್ತು. ಅದರಲ್ಲಿ ಹಿಂದೂ ಸಂಘಟನೆಗೆ ಸೇರಿದ ಕುಟ್ಟಪ್ಪ ಎನ್ನುವವರು ಆಕಸ್ಮಿಕವಾಗಿ ಸತ್ತುಹೋದರು. ರಾಜ್ಯಾದ್ಯಂತ ಈ ವಿಷಯ ಕಾಡ್ಗಿಚ್ಚಿನಂತೆ ಹಬ್ಬಿತು. ಘಟನೆ ವಿಕೋಪಕ್ಕೆ ತಿರುಗಿತಲ್ಲದೆ, ರಾಜ್ಯದ ವಿವಿಧೆಡ ದೊಡ್ಡ ದಾಂದಲೆಯೇ ಉಂಟಾಯಿತು.
ಆದದ್ದು ಆಯು.್ತ ಅದು ಮುಗಿದದ್ದು ಆಯ್ತು ಅಂದುಕೊಂಡಾಗಲೇ ಮತ್ತೆ ಇಂದು ಅದು ಜೀವ ಪಡೆದುಕೊಂಡಿದೆ. ನವೆಂಬರ್ 10 ರಂದು ಮತ್ತೆ ಈ ಕರಿನೆರಳಿನೊಂದಿಗೆ ಟಿಪ್ಪು ಜಯಂತಿ ಮಾಡೇ ಮಾಡುತ್ತೇವೆಂದು ಸಿದ್ದು ಸರ್ಕಾರ ಸವಾಲು ಹಾಕಿದರೆ, ಬಿಜೆಪಿ ಅದು ಹೇಗೆ ಮಾಡುತ್ತೀರೆಂದು ಪ್ರತಿ ಸವಾಲು ಒಡ್ಡಿದೆ. ಮಾಧ್ಯಮಗಳು ಒಂದಾದಮೇಲೊಂದರಂತೆ ಟಿಪ್ಪು ಜಯಂತಿ ಬೇಕೆ ಬೇಡವೆ ಎಂದು ತಾವೆ ನಿರ್ಧರಿಸಿ ಬಲವಂತವಾಗಿ ವೀಕ್ಷಕರಿಗೆ ತುರುಕುತ್ತಿವೆ.

ಆದರೆ ಒಂದಂತೂ ನಿಜ. ಟಿಪ್ಪು ಒಳ್ಳೆಯವ ಅಥವಾ ಕೆಟ್ಟವ ಎಂದು ನಿರ್ಧರಿಸುವುದು ಈಗ ಬೇಕಿಲ್ಲ. ಇಂತಹ ಯಾವುದೆ ಜಯಂತಿಗಳು ಅಗತ್ಯವಿಲ್ಲ. ಇಂತದಕ್ಕೆಲ್ಲ ಖರ್ಚು ಮಾಡುವ ಬದಲು ಬರದಲ್ಲಿ ಪರದಾಡುತ್ತಿರುವ ಜನರಿಗೆ ಉಪಯುಕ್ತವಾದದ್ದನ್ನು ಮಾಡಿದರೆ ಒಂದಷ್ಟು ಮಂದಿಗೆ ಸಹಾಯವಗುವುದಂತು ಖಂಡಿತ. ಜೊತೆಗೆ ಮಾಧ್ಯಮಗಳು ಇಂತಹ ವಿಷಯಗಳನ್ನು ಎತ್ತಿ ತೋರಿಸುವುದಕ್ಕಿಂತ ಬಿಟ್ಟು ಬಿಡುವುದೆ ಒಳಿತು. ನಾಡಿಗೆ ಬೇಕಿರುವುದು ಜಯಂತಿಗಳಲ್ಲ ಶಾಂತಿ.

-ಅಕ್ಷಯ್ ಕೆ

Akshay

3 thoughts on “ಏತಕ್ಕೆ ಬೇಕು ಜಯಂತಿಗಳು ಈ ಬರದ ಸಮಯದಲ್ಲಿ?

  • February 12, 2018 at 10:51 am
    Permalink

    ಟಿಪ್ಪು ಜಯಂತಿ ಅಷ್ಟೇ ಅಲ್ಲ ಯಾವುದೇ ಜಯಂತಿಯನ್ನು ಆಚರಿಸುವ ಅವಶ್ಯಕತೆ ಇಲ್ಲ.

    Reply

Leave a Reply

Your email address will not be published. Required fields are marked *