ಸಾಂಸ್ಕøತಿಕ ನಗರಿಯ ಬಹುಮುಖ ಪ್ರತಿಭೆ ದಿಯಾ ಅರಸ್

ಈಕೆ ಮೈಸೂರಿನ ಚಿಕ್ಕ ವಯಸ್ಸಿನ ದೊಡ್ಡ ಪ್ರತಿಭೆ. ಭಾರತದ ಭವಿಷ್ಯದ ಕ್ರೀಡಾ ಕ್ಷೇತ್ರದ ಕನಸಿನ ಕೂಸು. ಹೆಣ್ಣು ಮಕ್ಕಳಿಗೆ ಸ್ಫೂರ್ತಿ. ದೇಶಕ್ಕೆ ಕೀರ್ತಿ. ಎಲ್ಲರೂ ತಮ್ಮ ಯಶಸ್ಸಿಗೆ ಯಾವುದಾದರು ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಈ ಹುಡುಗಿ ಹಾಗಲ್ಲ. ಸೈಕ್ಲಿಂಗ್, ಸಂಗೀತ, ಚಿತ್ರಕಲೆ, ಚಾರಣ, ಕೃತಕ ಗೋಡೆ ಹತ್ತುವುದು, ಛಾಯಾಚಿತ್ರ ಹಾಗೂ ಸಾಹಸ ಕ್ರೀಡೆ ಇತರೇ ಕ್ಷೇತ್ರಗಳಲ್ಲೂ ಪರಿಣಿತೆ. ಇನ್ನು ಕರಾಟೆ, ಕಿಕ್‍ಬಾಕ್ಸಿಂಗ್, ನೃತ್ಯ ಮತ್ತು ಗೈಡಿಂಗ್ ಕ್ಷೇತ್ರಗಳಲ್ಲಿ ಸಣ್ಣ ವಯಸ್ಸಿನಲ್ಲೆ ಸಾಧನೆಯ ಶಿಖರವನ್ನು ಹತ್ತಿದವಳು.

D2

ಈ ಬಾಲ ಆಟಗಾರ್ತಿ ಗಳಿಸಿದ ಪ್ರಶಸ್ತಿಗಳು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟವನ್ನು ತಲುಪಾಗಿದೆ. ತನ್ನ 4 ವರ್ಷ ವಯಸ್ಸಿನಲ್ಲೇ ಸಾಧನೆ ಎಂಬ ಸಾಹಸಕ್ಕೆ ದುಮುಕಿದವಳು ಇವಳು. ಯಾರೀ ಹುಡುಗಿ ಅಂತೀರಾ ಬೇರ್ಯಾರು ಅಲ್ಲ ಅವಳೇ ದಿಯಾ. ಎಸ್ ಅರಸ್. ನಮ್ಮ ಈ ಬಾಲ ಸಾಧಕಿ ಇರುವುದು ಎಲ್ಲಿ ಅಂತೀರ. ಅದೇ ನಮ್ಮ ಮೈಸೂರಿನ ಸರಸ್ವತಿಪುರಂನಲ್ಲಿ. ಈಕೆ ಹುಟ್ಟಿದ್ದು 2001 ಜನವರಿ 1ರಲ್ಲಿ.

ಈಕೆಯ ಬಹುದೊಡ್ಡ ಸಾಧನೆ ನೀವು ತಿಳಿಯಲೇಬೇಕು. ಅದೇನೆಂದರೆ ರಷ್ಯಾ ದೇಶದ ಅನಪಾ ನಗರದಲ್ಲಿ ಸೆಪ್ಟಂಬರ್ 2016 ರಲ್ಲಿ ನಡೆದ 15-16 ವರ್ಷದೊಳಗಿನ ವಾಕೊ ವಲ್ರ್ಡ್ ಜ್ಯೂನಿಯರ್ ಕಿಕ್‍ಬಾಕ್ಸಿಂಗ್ ಚಾಂಪಿಯನ್‍ಷಿಪ್‍ನ ಕೆ-1 ವಿಭಾಗದಲ್ಲಿ ಭಾರತವನ್ನು ಪ್ರ್ರತಿನಿಧಿಸಿ ಚಿನ್ನದ ಪದಕವನ್ನು ಪಡೆದಿರುವ ಕರ್ನಾಟಕದ ಪ್ರಥಮ ಹಾಗು ಏಕೈಕ ಬಾಲಕಿ. ಆದರೆ ಆ ಸಂದರ್ಭದಲ್ಲಿ ದಸರಾ ಇದ್ದದ್ದರಿಂದ ಈ ಸಾಧನೆ ವಿಷಯ ಹೆಚ್ಚಿನ ಪ್ರಸಿದ್ಧಿಗೆ ಬರಲಿಲ್ಲ. ಹಾಗೆಯೇ ಕೇವಲ 16ನೇ ವಯಸ್ಸಿಗೆ ಈಕೆಯ ವ್ಯಕ್ತಿಚಿತ್ರದ ಪ್ರತಿ ಮೂವತ್ತು ಪುಟಗಳಷ್ಟಿದೆ ಎಂದರೆ ಊಹಿಸಿಕೊಳ್ಳಿ ಈಕೆಯ ಸಾಧನೆಯ ಹಂಬಲ ಎಷ್ಟಿದೆ ಅಂತ.

K-1

ಇನ್ನು ಇವಳ ಬಗ್ಗೆ ಹೇಳುವುದಾದರೆ. ವಯಸ್ಸಿಗೆ ಮೀರಿದ ಸಾಧನೆ, ತೂಕದ ಮಾತು, ಸಹಜತೆ, ಸಾಮಾನ್ಯರಲ್ಲಿ ಸಾಮಾನ್ಯವೆಂಬಂತಹ ಸ್ವಭಾವದವಳು. ಈಕೆಗೆ ಡಿ. ದೇವರಾಜ ಅರಸ್ ಪ್ರಶಸ್ತಿ, ಜಿ. ಪಿ. ರಾಜರತ್ನಂ ಪ್ರಶಸ್ತಿ, ಭಾರತ್ ಸ್ಕೌಟ್ಸ್ & ಗೈಡ್ಸ್‍ನ ರಾಜ್ಯ ಪುರಸ್ಕಾರ, 2016 ರ ವಾಕೊ ವಲ್ರ್ಡ್ ಜ್ಯೂನಿಯರ್ ಕಿಕ್‍ಬಾಕ್ಸಿಂಗ್ ಚಾಂಪಿಯನ್‍ಷಿಪ್‍ನಲ್ಲಿ ಚಿನ್ನದ ಪದಕ, ಇತರೆ ಸಾಂಸ್ಕøತಿಕ ಕ್ಷೇತ್ರದಲ್ಲಿ ಹಲವು ಪ್ರಶಸ್ತಗೆ ಭಾಜನರಾಗಿದ್ದಾರೆ. ಇವು ನೂರರಲ್ಲಿ ಮೂರು ಭಾಗ ಅಷ್ಟೇ.

ಇಷ್ಟೆಲ್ಲ ಸಾಧನೆಗೈದು ನಮ್ಮ ದೇಶವನ್ನು ಕ್ರೀಡಾ ಕ್ಷೇತ್ರದಲ್ಲಿ ಶ್ರೀಮಂತಗೋಳಿಸಿ ಸ್ವ ತಯಾರಿ ನಡೆಸಿ, ಅಂತರಾಷ್ಡ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಈ ಹುಡುಗಿಗೆ ಒಂದೇ ಒಂದು ಕೊರತೆ ಪ್ರಚಾರ ಸಿಗದಿದ್ದದ್ದು. ಈಕೆಯ ಸಾಧನೆ ಕೆಲವು ಪತ್ರಿಕೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಬಂದು ಹೋಗಿದೆ ಅಷ್ಟೇ. ಕ್ರಿಕೆಟ್ ಹೊರತು ಪಡಿಸಿ ಇನ್ನುಳಿದ ಕ್ಷೇತ್ರದಲ್ಲಿ ಸಾಧಿಸುವ ಪ್ರತಿಭೆಗಳಿಗೆ ಪ್ರೋತ್ಸಾಹವನ್ನು ನೀಡುವ ಕೆಲಸ ನಮ್ಮ ಸರ್ಕಾರ ಮಾಡಬೇಕಿದೆ. ಅಂತರಾಷ್ಟ್ರೀಯ ಮಟ್ಟದ ಸಾಧಕಿಯೊಬ್ಬಳು ಎಲೆ ಮರೆಯ ಕಾಯಿಯಂತಾದರೆ ನಾವೇ ಭಾರತದ ಕ್ರೀಡಾ ಕ್ಷೇತ್ರವನ್ನ ಹಿಮ್ಮೆಟ್ಟಿಸಿದಂತಾಗುದಲ್ಲವೇ?

Prizes Diea

1) 16 ವರ್ಷಕ್ಕೇನೆ 30 ಪುಟದ ಪ್ರೋಪೈಲ್ ಮಾಡಿದ್ದೀರ. ನಿಮ್ಮ ಈ ಸಾಧನೆಯ ಹಂಬಲಕ್ಕೆ ಸ್ಫೂರ್ತಿ ಯಾರು?
ದಿಯಾ:- ಸ್ಫೂರ್ತಿ ಅನ್ನುವುದಕ್ಕಿಂತ ಅಪ್ಪ ಅಮ್ಮ ತುಂಬ ಸಪೋರ್ಟ್ ಮಾಡ್ತಾರೆ. ಸುಮಾರ್ ಜನ ಇದ್ದಾರೆ ಅದು ಬೇರೆ ಬೇರೆ ಕ್ರೀಡೆಯವರು ಆಗಿರಬಹುದು. ಕಿಕ್ ಬಾಕ್ಸಿಂಗ್ ಅಂದ್ರೆ ಅವ್ರೇ ಆಗ್‍ಬೇಕಿಲ್ಲ ಸೈನಾ ನೆಹ್ವಾಲ್, ಮಿಲ್ಕಾ ಸಿಂಗ್ ಅಂಥವ್ರು ಸಹ ಸ್ಫೂರ್ತಿ ಆಗಿದ್ದಾರೆ.

2) ನಿಮಗೆ ಕ್ರೀಡೆಯ ಬಗ್ಗೆ ಆಸಕ್ತಿ ಶುರುವಾಗಿದ್ದು ಯಾವಾಗ, ಹೇಗೆ?
ದಿಯಾ:- ಚಿಕ್ಕಂದಿನಿಂದಲೂ ಹಲವಾರು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸ್ತಿದ್ದೆ, ಪ್ರೀ ಕೆ.ಜಿ ಯಲ್ಲಿ ಕರಾಟೆ ಕಲಿಸ್ತಿದ್ರು. ಇದ್ರಿಂದ ನನಗೆ ಒಂದು ಹುರುಪು ಬಂತು. ಇನ್ನೂ ಮನೇಲಿ ಟಿವಿಲಿ ಬರುವ ಹಾಡು, ಡ್ಯಾನ್ಸು ನೋಡಿ ಮಾಡ್ತಿದ್ದೆ ಇದೆಲ್ಲ ನೊಡಿ ನಮ್ಮ ಅಪ್ಪ ಅಮ್ಮ ಡ್ಯಾನ್ಸ್ ಮತ್ತು ಕರಾಟೆಗೆ ಸೇರಿಸಿದ್ರು.

12247676_977464869000061_1329567274269386101_o

3) ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ ಪ್ರತಿನಿದಿಸುವ ಅವಕಾಶ ಗಳಿಸಿಕೊಂಡಿದ್ರಿ ಇದರ ಬಗ್ಗೆ ಏನು ಅನ್ನಿಸ್ತಿದೆ?
ದಿಯಾ:- ತುಂಬ ಖುಷಿಯಾಗುತ್ತೆ. ಚಿಕ್ಕ ವಯಸ್ಸಿನಲ್ಲೇ ದೇಶವನ್ನು ಪ್ರತಿನಿಧಿಸೋದು. ಜೊತೆಗೆ ಅಲ್ಲಿ ಚಿನ್ನದ ಪದಕ ಗೆದ್ದೆ ಅಂದ್ರೆ ಅದು ಹೆಮ್ಮಯ ಸಂಗತಿ ಅಲ್ವಾ.

4) ಕರಾಟೆ, ಡ್ಯಾನ್ಸ್, ಪೇಂಟಿಂಗ್, ಸೈಕ್ಲಿಂಗ್, ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಕೂಡ ತೊಡಗಿಕೊಂಡಿದ್ದೀರ ಇದು ಹೇಗೆ ಸಾಧ್ಯ ಆಯ್ತು?
ದಿಯಾ:- ಎಲಾದಕ್ಕ್ಲು ನಮ್ ಅಪ್ಪ ಅಮ್ಮನೇ ಕಾರಣ. ನಾನ್ ಏನೇ ನಿರ್ದಾರ ತಗೊಂಡ್ರು ಆಯ್ತು ಮಾಡು ಮಗಳೆ ಎಂದು ಪ್ರೋತ್ಸಾಹ ಕೊಡ್ತಿದ್ರು. ಏನೇ ನಿರ್ದಾರ ಕೈಗೊಂಡ್ರು ನೀನು ಹೇಳಿದ್ದು ಸರಿ ಅಂತಿದ್ರು. ಆ ನಂತರ ನಾನು ಏನು ಮಾಡಬೇಕು, ಏನ್ ತಪ್ಪು ಮಾಡ್ದೆ, ಹೀಗೆ ಮಾಡು ಅಂತ ಅವರೆ ಹೇಳ್ತಿದ್ರು.

Deia Climbing

5) ಸ್ವತಃ ನಿಮ್ಮ ತಂದೆನೆ ನಿಮಗೆ ಕೋಚ್ ಆದಾಗ ನಿಮ್ಮ ಅನುಭವ?
ದಿಯಾ:- ಪ್ಲೆಸ್ಸು ಮೈನಸ್ ಎರಡು ಇದೆ. ಕಳ್ಳಾಟ ಜಾಸ್ತಿ ಆಡ್ತಿದ್ದೆ. ಆದ್ರೆ ಅಪ್ಪಂಗೆ ನನ್ ಪ್ಮ್ಲಸ್ಸು ಅಂಡ್ ಮೈನಸ್ ಗೊತ್ತಿರೋದ್ರಿಂದ್ ಏನ್ ಬೇಕು ಬೇಡಾ ಅನ್ನೋದನ್ನ ಸೇರಿಸಲು, ಸಹಕರಿಸಲು ಸಹಾಯ ಆಗುತ್ತೆ.

6) ನಿಮ್ಮ ಈ ಎಲ್ಲ ಸಾಧನೆ ನೋಡಿ ಹೊರಗಿನ ಜನ ಅಥವಾ ನಿಮ್ಮ ಸ್ನೇಹಿತರು ನಿಮ್ಮ ಜೊತೆ ಹೇಗೆ ನಡೆದುಕೊಳ್ಳುತ್ತಾರೆ?
ದಿಯಾ:- ಮೊದ್ಲು ದಿಯಾ ನಮ್ ಫ್ರೆಂಡು ಅಂತ ನೋಡ್ತಿದ್ರು ಈಗ್ಲೂ ಸಹ ಅದೇ ರೀತಿ ನೋಡ್ತಾರೆ. ದಿಯಾ ನನ್ ಫ್ರೆಂಡು ಅಂತ ಹೆಮ್ಮೆ ಪಡ್ತಾರೆ. ಇನ್ನೂ ಟೀಚರ್ಸ್ ಕೂಡ ಹೊರಗಡೆ ಎಲ್ಲಾದರು ಸಿಕ್ಕಿದರೆ ಅವರ ಮನೆಯವರಿಗೆ ನನ್ ಸ್ಟೂಡೆಂಟ್ ಅಂತ ಪರಿಚಯ ಮಾಡಿಸ್ತಾರೆ. ತುಂಬ ಖುಷಿ ಅನ್ಸುತ್ತೆ.

7) ಇತ್ತೀಚೆಗೆ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಅವರ ರಕ್ಷಣೆಗೆ ಈ ರೀತಿಯ ವಿದ್ಯೇಗಳು ಉಪಯೋಗ ಆಗುತ್ತಾ?
ದಿಯಾ:- ಮೊದಲು ಕರಾಟೆ, ಕಿಕ್ ಬಾಕ್ಸಿಂಗ್ ಕಲಿತರೆ ರಕ್ಷಣೆ ಸಿಗುತ್ತೆ ಅನ್ನೋದನ್ನ ಜನರ ಮನಸ್ಸಿನಿಂದ ಮೊದಲು ತೆಗೆದುಹಾಕಬೇಕು. ಎಂತಹ ಸಂದರ್ಭ ಬಂದಾಗಲು ಬೇಸಿಕ್ ಕಾಮನ್‍ಸೆನ್ಸ್ ಉಪಯೋಗಿಸಿ ತಮ್ಮ ಶಕ್ತಿಯನ್ನ ಹೇಗೆ ಉಪಯೋಗಿಸಿಕೊಳ್ಳೋದನ್ನ ನಾವ್ ಹೆಣ್ಣ್ ಮಕ್ಳು ತಿಳ್ಕೋಬೇಕು. ಕೈ ಹಿಡ್ಕೊಂಡಿದಾರಾ ಬಿಡಿಸ್ಕೊಳ್ಳೋದನ್ನ ಮಾಡಬೇಕು. ಅದನ್ನ ಬಿಟ್ಟು ಕಿರುಚಾಡಿದರೆ ಏನು ಆಗೋದಿಲ್ಲ. ಕರಾಟೆ, ಕಿಕ್ ಬಾಕ್ಸಿಂಗ್ ಕಲಿತರೆ ದೈಹಿಕವಾಗಿ ಬಲಶಾಲಿಗಳಾಗಿರಬಹುದು. ಇದರಿಂದ ರಕ್ಷಣೆ ಪಡೆಯಬಹುದು.

8) ಬಾಲ್ಯದಲ್ಲಿ ಯಾವುದಾದರು ಕ್ರೀಡೆಗೆ ಸಂಬಂಧ ಪಟ್ಟ ವಿಷಯಾನ ನೆನಪು ಮಾಡ್ಕೋತೀರ ಎಂದರೆ ಯಾವುದನ್ನ ನೆನಸಿಕೊಳ್ತೀರ?
ದಿಯಾ:- ರಷ್ಯಾದಲ್ಲಿ ಚಿನ್ನ ಗೆದ್ದದ್ದು, ಅದನ್ನ ಬಿಟ್ಟರೆ, ಗಿನ್ನೀಸ್ ರೆಕಾರ್ಡ್ ಅಟೆಮ್ಟ್ ಮಾಡಿದ್ದು. 1 ನಿಮಿಶದಲ್ಲಿ 31 ಮಂಗಳೂರು ಹೆಂಚು ತಲೆಯಲ್ಲಿ ಹೊಡೆದಿದ್ದೆ. ಆದರೆ ಕೆಲವು ತಾಂತ್ರಿಕಾ ಕಾರಣಗಳಿಂದ ಅದು ವ್ಯರ್ಥವಾಯ್ತು. ಅಂದ್ರೆ ಆ ವಯಸ್ಸಿನಲ್ಲಿ ಶಿಕ್ಷಕರು ಮತ್ತು ಪೋಷಕರು ಒತ್ತಾಯಿಸಿದ್ದಾರೆ ಹಾಗೂ ರಕ್ಷಣಾ ವಸ್ತುಗಳನ್ನ ಬಳಿಸಿಲ್ಲದಿದ್ದರಿಂದ ಆಗಲಿಲ್ಲ. ಅದು ಎಲ್ಲಾ ಸರಿಯಾಗಿದ್ದಿದ್ರೆ ಗಿನ್ನೀಸ್ ರೆಕಾರ್ಡ್ ಆಗ್ತಿತ್ತು. ಅದು ಯಾವಾಗ್ಲೂ ನೆನಪಾಗುತ್ತೆ.

D2SAP

9) ನಿಮ್ಮ ಮುಂದಿನ ಯೋಜನೆ ಅಥವಾ ಗುರಿ?
ದಿಯಾ:- ನನ್ನ ವಯಸ್ಸಿನವರಿಗೆ ಅವಕಾಶ ಕೊಟ್ರೆ 2020 ಟೋಕಿಯೋ ಒಲಂಪಿಕ್ಸ್‍ನಲ್ಲಿ ಕರಾಟೆಯಲ್ಲಿ ಆಡಬೇಕು ಅನ್ನೋ ಆಸೆ ಇದೆ. ಕಿಕ್ ಬಾಕ್ಸಿಂಗ್ ತರ ಕರಾಟೆಯಲ್ಲಿ ವಲ್ರ್ಡ್ ಚಾಂಪಿಯನ್ ಆಗಬೇಕು. ಇದಲ್ದೇ ಒಂದು ಪ್ರೊಡಕ್ಷನ್ ಹೌಸ್ ಮಾಡಬೇಕು ಅನ್ನೋದು, ಒಟ್ನಲ್ಲಿ ಎಲ್ಲಾ ಕ್ಷೇತ್ರದಲ್ಲು ನಾನು ತೊಡಗಬೇಕು ಅನ್ನೋದು ನನ್ನ ಆಸೆ.

10) ಕೊನೆಯದಾಗಿ ಚಿಕ್ಕ ಚಿಕ್ಕ ಪ್ರತಿಭೆಗಳಿಗೆ ನೀವೇನ್ ಹೇಳ್ತೀರ?
ದಿಯಾ:- ನಾನೇನು ಹೇಳೋದಿಕ್ಕೆ ಇಷ್ಟ ಪಡಲ್ಲ. ಆದ್ರೆ ನಿಮ್ ಕನಸ್ಸನ್ನ ಚೇಸ್ ಮಾಡಿ. ನೀವು ಉಸಿರಾಟಕ್ಕೆ ಹೇಗೆ ಅಂಟಿಕೊಂಡಿರ್ತೀರೊ ಕನಸುಗಳಿಗೂ ಹಾಗೆ ಅಂಟಿಕೊಂಡಿರಬೇಕು. ನಮಗೆ ಎಷ್ಟೇ ಕಷ್ಟ, ನೋವು ಬಂದ್ರು ಉಸಿರಾಡ್ತಿವೋ ಹಾಗೆ ಸಾಧನೆ ಮಾಡಬೇಕಂದ್ರೆ ಕನಸ್ಸುಗಳಿಗೆ ಅಂಟಿಕೊಂಡಿರಬೇಕು. ಎಲ್ಲಾ ಅಪ್ಪ ಅಮ್ಮಂದರಿಗೆ ಹೇಳುವುದೊಂದೆ ನಿಮ್ಮ ಮಕ್ಕಳಿಗೆ ಮೋಟಿವೇಟ್ ಮಾಡಿ. ಬರಿ ಮಾರ್ಕ್ಸ್‍ಗಳಿಂದ ಏನು ಸಿಗಲ್ಲ. ಪಠ್ಯೇತರ ಚಟುಚಟಿಕೆಗಳಲ್ಲಿ ಅವರಿಗೆ ಪ್ರೋತ್ಸಾಹ ನೀಡಿ.

-ವಿಜಯಲಕ್ಷ್ಮೀ ಮೆಟಗಾರ

WhatsApp Image 2016-11-11 at 9.44.28 PM

5 thoughts on “ಸಾಂಸ್ಕøತಿಕ ನಗರಿಯ ಬಹುಮುಖ ಪ್ರತಿಭೆ ದಿಯಾ ಅರಸ್

 • December 13, 2016 at 9:52 am
  Permalink

  Wow nice. Interview

  Reply
  • December 13, 2016 at 10:20 am
   Permalink

   ಸಂದರ್ಶನ ಚೆನ್ನಾಗಿ ಮಾಡಿದ್ದೀರ

   Reply

Leave a Reply

Your email address will not be published. Required fields are marked *