ಸಾಧನೆಗೆ ಕಮಿಟ್‍ಮೆಂಟ್ ಇರಬೇಕು ಜೊತೆಗೆ ಸಮಯ ಕೊಡಬೇಕು

ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲವೆಂಬ ಮಾತೊಂದಿದೆ. ಆದರೆ, ಇಂದಿನ ಯುವ ಪೀಳಿಗೆ ಗಟ್ಟುಮುಟ್ಟಾದ ದೇಹವನಿಟ್ಟುಕೊಂಡೂ ಕೂಡಾ, ಮೋಜು ಮಸ್ತಿಯಲ್ಲೇ ಸಮಯ ಕಳೆಯುತ್ತಿರುವುದೇ ಹೆಚ್ಚು. ಇಂತವರ ಮಧ್ಯೆ ಎಲ್ಲರಿಗೂ ಮಾದರಿಯಾಗಿರುವ ವಿಕಲಚೇತನ ವ್ಯಕ್ತಿಯೊಬ್ಬರು ತನ್ನ ಅಂಧತ್ವವನ್ನು ಮರೆತು ಇನ್ನೋಬ್ಬರಿಗೆ ಸ್ಫೂರ್ತಿಯಾಗುವಂತಹ ಸಾಧನೆ ಮೆರೆದಿದ್ದಾರೆ. ಹೆಸರು ಮಂಜುನಾಥ ಸದ್ಯ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು, ಈಗ ಭಾರಿ ಸುದ್ದಿಯಲ್ಲಿದ್ದಾರೆ.

Manjunath Phd 1ಮಂಜುನಾಥ, ಹುಟ್ಟಿದ್ದು 1986 ತುಮಕೂರಿನ ಪಾವಗಡ ತಾಲೂಕಿನ ಕತ್ತಿಕ್ಯಾತನಳ್ಳಿ ಗ್ರಾಮದಲ್ಲಿ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನ ತುಮಕೂರು ಜಿಲ್ಲೆಯಲ್ಲಿ ಮುಗಿಸಿದ್ದು. ಮಂಡ್ಯದಲ್ಲಿ ಪದವಿ ಮತ್ತು ಮೈಸೂರಿನಲ್ಲಿ ಸ್ನಾತಕ ಪದವಿಯನ್ನು ಪೂರೈಸಿದರು.  ತಮಿಳನಾಡಿನ ಸೇಲಂನ ಡೀಂಮ್ಡ್ ಯೂನಿವರ್ಸಿಟಿಯಲ್ಲಿ ರಾಜ್ಯಶಾಸ್ತ್ರದಲ್ಲಿ ಎಂಫಿಲ್ ಪದವಿ ಪಡೆದರು. ನಂತರದಲ್ಲಿ ಬ್ಲೈಂಡ್ ಅಸಿಸ್ಟೆಂಟ್ ಪ್ರೊಪೇಸರ್ ಒಬ್ಬರು ಪಿಎಚ್‍ಡಿ ಪದವಿ ಪಡೆದಿದ್ದರಿಂದ ಸ್ಫೂರ್ತಿಗೊಂಡು, ತಾನು ಪಿಎಚ್‍ಡಿ ಮಾಡಬೇಕೆಂದು ಮಾನಸಗಂಗೋತ್ರಿಯ ರಾಜ್ಯಶಾಸ್ತ್ರದಲ್ಲಿ ವಿಭಾಗದಲ್ಲಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಷಯದ ಮೇಲೆ ಪಿಎಚ್‍ಡಿ ಪಡೆದರು.

ಇತ್ತಿಚಿಗಷ್ಟೇ ನಡೆದ ಮೈಸೂರು ವಿಶ್ವವಿದ್ಯಾನಿಲಯದ 97ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ಮತ್ತು 14ನೇ ಧರ್ಮಗುರು ದಲೈಲಾಮ ರವರಿಂದ ಪಿಎಚ್‍ಡಿ ಪದವಿ ಸ್ವೀಕರಿಸಿದದ್ದು, ಅಂಧರೊಬ್ಬರು ಪಿಎಚ್‍ಡಿ ಪದವಿ ಪಡೆದ ಸುದ್ದಿ ಈ ಬಾರಿಯ ವಿಶೇಷವಗಿತ್ತು. ಸಾಮಾನ್ಯರೊಬ್ಬರು ಪಿಎಚ್‍ಡಿ ಪಡೆದಿದ್ದರೆ ಅದು ಇಷ್ಟೊಂದು ಸುದ್ದಿಯಾಗುತ್ತಿರಲಿಲ್ಲ. ಆದರೆ ಅಂಧರೊಬ್ಬರು ಪಡೆದ ಪಿಎಚ್‍ಡಿ ಪದವಿ ಸಾಕಷ್ಟು ಅಡೆ-ತಡೆಗಳು, ಸಂಕಷ್ಟಗಳ ನಡುವೆ ಸಾಗಿ ಬಂದ ಮಂಜುನಾಥ್ ರವರ ಈ ಸಾಧನೆ ಇತೆರರಿಗೂ ಮಾದರಿಯಾಗಿದೆ.

ಸದ್ಯ ಮಾಧ್ಯಮಗಳಲ್ಲಿ ತುಂಬ ಬ್ಯುಸಿಯಾಗಿರುವ ಮಂಜುನಾಥ್ ರವರ ಕಿರು ಸಂದರ್ಶನ ಇಲ್ಲಿದೆ..

ನಿಮ್ಮ ಪಿಎಚ್‍ಡಿ ಜರ್ನಿ ಹೇಗಿತ್ತು?
ಎಂಎ ಮುಗಿದ ಮೇಲೆ ಪಿಎಚ್‍ಡಿಗೆ ಸ್ವಲ್ಪ ವಿಳಂಭ ಆಯ್ತು ಈ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಎಂಫಿಲ್ ಮುಗಿಸಿದೆ. ಆನಂತರ ಮಾನಸಗಂಗೋತ್ರಿಯ ರಾಜ್ಯಶಾಸ್ತ್ರ ವಿಭಾಗದ ದಯಾನಂದ್ ಮಾನೆ, ಅವರ ಮಾರ್ಗದಶನದಲ್ಲಿ ಮುಗಿಸಿದೆ. ಪಿಎಚ್‍ಡಿ ಮಾಡಬೇಕಾದರೆ ಸರ್ಕಾರದ ಯಾವುದೆ ವೇತನಗಳಿರಲಿಲ್ಲ. ಆರ್ಥಿಕವಾಗಿ ಅಧ್ಯಾಪಕರು ಮತ್ತು ಅನೇಕರು ನನಗೆ ಸಹಾಯ ಮಾಡಿದರು. ಈ ಸಂದರ್ಭದಲ್ಲಿ ನನಗೆ ಬರೆಯಲಿಕ್ಕೆ, ಓದಲಿಕ್ಕೆ ನಮ್ಮ ವಿದ್ಯಾರ್ಥಿಗಳು ಸಹಾಯಮಾಡಿದರು. ನನ್ನ ಎಬಿವಿಪಿ ಸ್ನೇಹಿತರು ನನಗೆ ಬೆಂಬಲ ನೀಡಿದರು. ಒಟ್ಟಿನಲ್ಲಿ ಘಟಿಕೋತ್ಸವದಲ್ಲಿ ಪ್ರಶಂಸೆ ಮಾತುಗಳು ಆಡಿದ್ದು ಬಹಳ ಖುಷಿ ಆಯ್ತು.

ನೀವು ಪಿಎಚ್‍ಡಿ ಮಾಡ್ತೀನಿ ಎಂದಾಗ ಹೊರಗಿನವರ ಪ್ರತಿಕ್ರೀಯೇ ಹೇಗಿತ್ತು?
ಈಗಾಗಲೇ ಬೇರೆಯವರು ಪಿಎಚ್‍ಡಿ ಮಾಡಿರೋದ್ರಿಂದ ಯಾವ ಪ್ರತಿಕ್ರಿಯೇನು ಬರಲಿಲ್ಲ. ರಾಜ್ಯಶಾಸ್ತ್ರ ವಿಭಾಗದ ದಯಾನಂದ ಮಾನೆಯವರೆ ಕರೆದು ಪಿಎಚ್‍ಡಿ ಮಾಡು ಎಂದು ಹೇಳಿದ್ರು. ಎಲ್ಲರು ಕೂಡ ನನಗೆ ಸಪೋರ್ಟ್ ಮಾಡಿದ್ರು.

ನಿಮ್ಮ ಪಿಎಚ್‍ಡಿ ವಿಷಯ ವಿದ್ಯಾರ್ಥಿ ಪರಿಷತ್. ಅದರ ಬಗ್ಗೆ ಮಾಹಿತಿ ಎಲ್ಲಿ ಸಿಕ್ತು?
ಮೈಸೂರಿನ ಎಬಿವಿಪಿ ಕಾರ್ಯಾಲಯ ಬೆಂಗಳೂರು, ಮಂಗಳೂರು, ದಾರವಾಡ, ಕಲಬುರ್ಗಿ, ಗುಲ್ಬರ್ಗ, ಬೆಳಗಾಂ ಕಛೇರಿಗಳಿಂದ ಮಾಹಿತಿ ಸಿಕ್ತು. ಹಾಗೂ ದೆಹಲಿ, ಮುಂಬೈನ ಕೇಂದ್ರ ಕಛೇರಿಗಳಲ್ಲಿ ಹೆಚ್ಚಿನ ಮಾಹಿತಿಗಳು ಸಿಕ್ತು. ಆಮೇಲೆ ಇದಕ್ಕೆ ಸಂಬಂಧ ಪಟ್ಟ ಹಿರಿಯ ಕಾರ್ಯಕರ್ತರು ನನಗೆ ಸಕಾಲದಲ್ಲಿ ಮಾಹಿತಿ ಒದಗಿಸಿದರು.

ಪಿಎಚ್‍ಡಿ ಹಂತದ ವರಗೆ ಬಂದ್ದಿದೀರ. ಯಾವತ್ತಾದ್ರು ಇದು ಕಷ್ಟ, ಇದು ಆಗೋದೆ ಇಲ್ಲ ಅಂತ ಅನ್ಸಿದೇಯಾ?
ಆಗೋದೆ ಇಲ್ಲ ಅಂತ ಯಾವತ್ತು ಅನ್ನಿಸ್ಲಿಲ್ಲ. ಆದ್ರೆ ನನಗೆ ಆರ್ಥಿಕವಾಗಿ ವ್ಯತ್ಯಾಸ ಆಗಿದ್ದು ಬಿಟ್ಟರೆ ಇನ್ಯಾವುದರಲ್ಲು ವ್ಯತ್ಯಾಸ ಆಗಲಿಲ್ಲ.

ನೀವು ಒಬ್ಬ ಶಿಕ್ಷಕರಾಗ ಹೊರಟಿರುವವರು. ಇಂದಿನ ಶಿಕ್ಷಣ ವ್ಯವಸ್ಥೆಯ ಪರಿಸ್ಥಿತಿ ಬಗ್ಗೆ ಏನ್ ಹೇಳ್ತೀರ?
ಹೇಳಲಿಕ್ಕೆ ತುಂಬ ವಿಷಯಗಳಿವೆ ಆದರೆ ಕೆಲವನ್ನ ಪ್ರಸ್ತಾಪ ಮಾಡ್ತೀನಿ. ಮೊದಲನೆಯದಾಗಿ ಕೇಂದ್ರ ಸರ್ಕಾರದ ಸರ್ವೇ ಇತ್ತೀಚೆಗೆ ಬಿಡುಗಡೆ ಮಾಡಿದೆ. ಶೇ60% ಶಿಕ್ಷಕರು ಏನು ಮಾಡದೆ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಅಧ್ಯಾಪಕರುಗಳು ಪಠ್ಯ ಪುಸ್ತಕದ ಜೊತೆಗೆ ಬೇರೆ ಬೇರೆ ಪುಸ್ತಕಗಳು ಹಾಗೂ ಮಾಧ್ಯಮಗಳಿಂದ ಕಲಿತು ನುರಿತವರಾಗಬೇಕು. ಇನ್ನು ವಿದ್ಯಾರ್ಥಿಗಳು ಅಷ್ಟೇ ನಾನು ಏತಕ್ಕೆ ಬಂದಿದ್ದೇನೆ, ಏನು ಮಾಡ್ತಿದಿನಿ ಅನ್ನೋದ್ರು ಬಗ್ಗೆ ಅರಿವಿರಬೇಕು. ಪ್ರತಿದಿನ ಒಂದು ಟೈಮ್ ಟೇಬಲ್ ಹಾಕೊಳ್ಳಬೇಕು. ಮುಂದಿನ 30 ವರ್ಷದಲ್ಲಿ ಯಾವಾಗಾ, ಎಲ್ಲಿ, ಏನು ಮಾಡಬೇಕು ಮತ್ತು ಆಗಬೇಕು ಅಂತ ಪರಿಪೂರ್ಣ ಆಲೋಚನೆ ಇರಬೇಕು.

ಇಂದು ದೇಶದಲ್ಲಿ ವಿದ್ಯಾವಂತ ನಿರುದ್ಯೋಗಿಗಳು ಹೆಚ್ಚಾಗ್ತಿದ್ದಾರೆ ಇದಕ್ಕೆ ಕಾರಣ & ಪರಿಹಾರ ನಿಮ್ಮ ಮಾತುಗಳಲ್ಲಿ ಹೇಳುವುದಾದರೆ?
ವಿದ್ಯಾವಂತ ನಿರುದ್ಯೋಗಿ ಅನ್ನೋದಕ್ಕಿಂತ ಅಕ್ಷರಸ್ತ ನಿರುದ್ಯೋಗಿಗಳ ಸಂಖ್ಯೆ ಜಾಸ್ತಿ ಆಗ್ತಿದೆ. ವಿದ್ಯಾವಂತರಿಗೆ ಎಲ್ಲಾ ಕಡೆ ಕೆಲ್ಸಾ ಸಿಕ್ಕಿದೆ ಆದರೆ ಅಕ್ಷರಸ್ತರಿಗೆ ಸಿಕ್ಕಿಲ್ಲ. ಆದ್ದರಿಂದ ವಿದ್ಯಾವಂತರಲ್ಲ ಅಕ್ಷರಸ್ತ ನಿರುದ್ಯೋಗಿಗಳು ಅಂತ ಹೇಳಬೇಕು. ಜ್ಞಾನ ಇರುವಂತವರು ಎಲ್ಲಾದರು ಒಂದು ರೂಪದಲ್ಲಿ ಯಶಸ್ವಿಯಾಗಿದ್ದಾರೆ.

ಇತ್ತೀಚೆಗೆ ವಿದ್ಯಾರ್ಥಿ ಸಂಘಟನೆಗಳಲ್ಲಿ ಜಾತಿ, ಧರ್ಮ, ರಾಜಕೀಯ ಪ್ರವೇಶ ಜಾಸ್ತಿಯಾಗಿದೆ. ನೀವು ವಿದ್ಯಾರ್ಥಿ ಸಂಘಟನೆಯಿಂದ ಬಂದವರು. ಇದಕ್ಕೆ ನಿಮ್ಮ ಅಭಿಪ್ರಾಯ?
ಭಾರತ ಹೇಳಿ ಕೇಳಿ ವಿವಿಧ ಜಾತಿ ಧರ್ಮಗಳ ಸಮಾಜವಾಗಿರೊದ್ರಿಂದ. ಸಮಾಜದಲ್ಲಿ ವ್ಯತ್ಯಾಸಗಳಿರುವ ಅಂಶಗಳಿರುತ್ತವೆ. ಆದ್ರೆ ನಾವು ಒಳ್ಳೆ ಅಂಶಗಳನ್ನು ಪಡೆದುಕೊಳ್ಳಬೇಕೆ ವಿನಃ. ನೆಗೆಟಿವ್ ಅಂಶಗಳನ್ನ ಅಕ್ಸೆಪ್ಟ್ ಮಾಡಿಕೊಳ್ಳಬೇಕಿಲ್ಲ. ಯಾವುದೆ ಸಂಘಟನೆ ಇರಲಿ, ಧರ್ಮ ಇರಲಿ, ಜಾತಿ ಇರಲಿ ಸಕಾರಾತ್ಮಕ ಅಂಶಗಳನ್ನಷ್ಟೆ ಗಣನೆಗೆ ತೆಗೆದುಕೊಳ್ಳಬೇಕು ನಕರಾತ್ಮಕ ಅಂಶಗಳಿಂದ ದೂರವಿರಬೇಕು.

ನಿಮ್ಮ ಪ್ರಕಾರ ಸಾಧನೆ ಅಂದ್ರೆ ಏನು?
ಸಾಧನೆ ಆಗಲಿಕ್ಕೆ ಮೊದಲು ಕಮಿಟ್‍ಮೆಂಟ್ ಇರಬೇಕು. ಸಮಯ ಕೊಡಬೇಕು ಪಾಸಿಟೀವ್ ಆಗಿ ಯೋಚನೆಮಾಡಬೇಕು ಅವಾಗ ಮಾತ್ರ ಸಾಧನೆ ಮಾಡೋದಕ್ಕೆ ಸಾಧ್ಯ. ಹಾಗೆಯೇ ಉತ್ತೇಜನ ನೀಡುವಂತಹ ಸಾಧಕರನ್ನ ಬೇಟಿಯಾಗಬೇಕು ಆಗ ಮಾತ್ರ ಅವರಿಗೆ ಸ್ಫೂರ್ತಿ ಬರೋದು. ಅಂತವರ ಒಡನಾಟದಲ್ಲಿದ್ದರೆ ಏನಾದರು ಮಾಡಬೇಕು ಅನ್ನಿಸುತ್ತೆ. ಇಲ್ಲಾಂದ್ರೆ ಯಾವುದ್ರಲ್ಲು ಆಸಕ್ತಿ ಬರಲ್ಲ.

ಅಂಧತ್ವದಿಂದಾಗಿ ಸಮಾಜ ನಿಮ್ಮನ್ನ ಹೇಗೆ ನೋಡುತ್ತೆ. ಅನುಕಂಪ ತೋರಿಸ್ತಿದ್ರ, ಇಲ್ಲ ಕೀಳರಿಮೆಯಿಂದ ನೋಡ್ತಿದ್ರ?
ನಾನು ಸಮಾಜದ ಬೇರೆ ಬೇರೆ ವರ್ಗಗಳ ಜೊತೆ ಆತ್ಮೀಯತೆ, ಸ್ನೇಹ ಬೆಳಸಿದ್ದೀನಿ. ಆದ್ರಿಂದ ನನಗೆ ಆ ರೀತಿ ಸಮಸ್ಯೆ ಅಂಥ ಅನ್ನಿಸಲಿಲ್ಲ. ಯಾರಿಗೆ ಜ್ಞಾನ ಇಲ್ಲವೋ ಅವ್ರು ಆ ರೀತಿ ಅಂದುಕೊಳ್ಳಬಹುದು. ಜ್ಞಾನವಂತರು, ಪ್ರಜ್ಞಾವಂತರು, ವಿವೇಕವುಳ್ಳವರು ನನ್ನ ಹಾಗೆ ಪರಿಗಣಿಸಲ್ಲ.

ಕೊನೆಯದಾಗಿ ಮುಂದೆ ನಿಮ್ಮ ಗುರಿ ಅಥವಾ ಸಾಧನೆ ಏನಿರಬಹುದು?
ನನ್ನ ಗುರಿ ಮೈಸೂರಿನಲ್ಲಿ ಅಥವಾ ಮೈಸೂರಿನ ಸುತ್ತಮುತ್ತ ನ್ಯಾಷನಲ್ ಇನ್ಸ್‍ಟ್ಯೂಟ್ ಆಫ್ ಸ್ಕಿಲ್ ಡೆವಲಪ್‍ಮೆಂಟ್ ಅನ್ನುವ ಒಂದು ಇನ್ಸ್‍ಟ್ಯೂಟ್ ಆರಂಭಿಸಬೇಕೆಂದು ಈಗಾಗಲೆ ತಯಾರಿ ನಡೆಸುತ್ತಿದ್ದೇನೆ. ಅದಕ್ಕೆ ಇನ್ನೂ ಸಮಯ ಬೇಕಾಗ್ತದೆ. ಇದಲ್ಲದೆ ಸಂಶೋಧನೆಗೆ ಸಂಬಂಧಿಸಿದಂತೆ ಇನ್ಸ್‍ಟ್ಯೂಟ್ ಮಾಡಬೇಕೆಂದು ತಯಾರಿ ನಡೆಸುತ್ತಿದ್ದೇನೆ. ಇದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಹಾಗೆಯೇ ಪೋಸ್ಟ್ ಬ್ಯಾಕ್‍ವೆಲ್ಗೆ ಅಪ್ಲಿಕೇಷನ್ ಹಾಕಿದ್ದೇನೆ. ನರೇಂದ್ರ ಮೋದಿ ಅವರ ಸರ್ಕಾರದ ಅಭಿವೃದ್ಧಿಯ ವಿಷಯದ ಮೇಲೆ ಮಾಡಬೇಕು ಅನ್ಕೊಂಡಿದ್ದೇನೆ ಯುಜಿಸಿಗೆ ಈಗಾಗಲೆ ತಿಳಿಸಿದ್ದೇನೆ. ಮಾರ್ಗದರ್ಶಕರು ಸಿಕ್ಕಿದ್ದಾರೆ ತುಳಸಿಮಾಲಾ ಎಂಬ ಅರ್ಥಶಾಸ್ತ್ರ ಶಿಕ್ಷರು ಒಪ್ಪಿಕೊಂಡಿದ್ದಾರೆ.

-ಅಕ್ಷಯ್ ಕೆ

Akshay

Leave a Reply

Your email address will not be published. Required fields are marked *