ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ದೇಶ ವಿದೇಶಗಳ ಚಲನಚಿತ್ರ ಪ್ರದರ್ಶನ

ಈ ವರ್ಷದ 9ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯಲಿದ್ದು, ಸತತ 2ನೇ ಬಾರಿಗೆ ಮೈಸೂರಿನಲ್ಲಿ ಆಯೋಜನೆಗೊಂಡಿದೆ. ಫೆಬ್ರವರಿ 2 ರಿಂದ 9ರ ವರಗೆ ನಡೆಯುವ ಉತ್ಸವದಲ್ಲಿ ಮೊದಲನೆ ದಿನ ಅಂದರೆ ಫೆ. 2ನೇ ತಾರೀಖು ಉದ್ಘಾಟನಾ ಕಾರ್ಯಕ್ರಮವಿದ್ದು ಬೆಂಗಳೂರಿನಲ್ಲಿ ನಡೆಯಲಿದೆ. ಸಮಾರೊಪ ಸಮಾರಂಭ ಮೈಸೂರಿನ ಅರಮನೆ ಮುಂದೆ ಜರುಗಲಿದೆ. ಚಿತ್ರಗಳು ಫೆ. 3 ರಿಂದ ಪ್ರದರ್ಶನಗೊಳ್ಳಲಿವೆ. 18 ವಿಭಾಗಗಳಲ್ಲಿ 55 ದೇಶಗಳ 240 ಚಿತ್ರಗಳು ಉತ್ಸವದಲ್ಲಿ ಪ್ರದರ್ಶಿತಗೊಳ್ಳಲಿವೆ. ಘಾನಾ, ಅಲ್ಜೇರಿಯಾ, ಈಜಿಪ್ಟ್, ವಿಯಟ್ನಾಂ ಮುಂತಾದ ದೇಶಗಳ ಚಿತ್ರಗಳು ಇಲ್ಲಿ ಕಾಣಿಸಿಕೊಳ್ಳುತ್ತಿವೆ. ಜೊತೆಗೆ ಫ್ರೆಂಚ್ ಕ್ಲಾಸಿಕ್ ಹಾಸ್ಯ ಚಿತ್ರಗಳ ಸರಣಿ ಉತ್ಸವದಲ್ಲಿರಲಿದೆ.

ananya-kasaravalli-9

ಒಂಬತ್ತನೆ ಚಿತ್ರೋತ್ಸವದ ಬಹಳ ಮುಖ್ಯವಾದ ಸಂಗತಿ ಎಂದರೆ ‘ವುಮನ್ ಪವರ್’ ಎಂಬ ಶೀರ್ಷಿಕೆಯಡಿ 22 ಮಹಿಳಾ ನಿರ್ದೇಶಕಿಯರ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅದರಲ್ಲಿ ಕನ್ನಡದ ಅನನ್ಯ ಕಾಸರವಳ್ಳಿಯವರ ಹರಿಕಥಾ ಪ್ರಸಂಗ ಹಾಗೂ ಸುಮನಾ ಕಿತ್ತೂರು ನಿರ್ದೇಶನದ ಕಿರಗೂರಿನ ಗಯ್ಯಾಳಿಗಳು ಕೂಡ ಸೇರಿಕೊಂಡಿವೆ. ಒಂದು ಕಡೆ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ಮತ್ತೊಂದೆಡೆ ಎಲ್ಲಾ ರಂಗದಲ್ಲು ತಮ್ಮ ಛಾಪನ್ನು ಮೂಡಿಸುತ್ತಿದ್ದಾg.É ಇದರಿಂದಾಗಿ ಈ ಪ್ರದರ್ಶನಕ್ಕೆ ಹೆಚ್ಚು ಮಹತ್ವವಿದೆ.

24-1445670528-directorsumankittur-001

ಇನ್ನು ಅಳಿವಿನ ಅಂಚಿನಲ್ಲಿರುವ ಉಪಭಾಷೆಗಳ ಚಿತ್ರಗಳು ನಿರ್ಮಾಣವಾಗುತ್ತಿರುವುದರಿಂದ ಇವನ್ನು ಪ್ರೋತ್ಸಾಹಿಸಲು ಈ ಬಾರಿ ಆಯ್ಕೆ ಮಾಡಿಕೊಳ್ಳಲಾಗಿದೆ. ತುಳು, ಕೊಡವ, ಬಂಜಾರ, ಖಾಸಿ, ಚೆಕ್ಮಾ, ವಾಂಚೂ, ಸಿಕ್ಕಿಂ ಭಾಷೆಗಳು ಇದರಲ್ಲಿ ಸೇರಿವೆ. ನಮ್ಮನ್ನಗಲಿದ ಗಣ್ಯರಿಗೆ ಶ್ರದ್ದಾಂಜಲಿ ರೂಪದಲ್ಲಿಯೂ ಪ್ರದರ್ಶಿಸಲಾಗುತ್ತಿದ್ದು, ಆ ಪಟ್ಟಿಯಲ್ಲಿ ಜೆ. ಜಯಲಲಿತ, ಡಾ.ಎಂ.ಬಾಲಮುರುಳಿಕೃಷ್ಣ, ಡಾ. ಅಶೋಕ್ ಪೈ, ಶ್ರೀಹರಿ ಖೋಡೆ, ಓಂಪುರಿ, ಅಬ್ಬಾಸ್ ಕಿರೇಸ್ವಾಮಿ (ಇರಾನ್), ಕಾಕ್ಸ್ (ಆಸ್ಟ್ರೇಲಿಯಾ), ಜಾಕಸ್ ಲಾವಿಟಿ ಇವರೆಲ್ಲರಿಗೂ ಗೌರವ ಸಲ್ಲಲಿದೆ.

ಕನ್ನಡದಲ್ಲಿ ಈ ವರ್ಷ ಬಾಕ್ಸ್ ಆಫೀಸ್ ಕೊಳ್ಳೆಹೊಡೆದ ಚಿತ್ರಗಳೆಂದು ಪ್ರತ್ಯೇಕ ವಿಭಾಗವಿದೆ. ಇದರಲ್ಲಿ ಕೋಟಿಗೊಬ್ಬ 2, ಜಗ್ಗುದಾದ, ಶಿವಲಿಂಗ, ದೊಡ್ಮನೆ ಹುಡುಗ ಸೇರಿವೆ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯವರು ಚಿತ್ರರಂಗದತ್ತ ಹೆಚ್ಚು ಆಕರ್ಶಿತರಾಗುತ್ತಿದ್ದಾರೆ. ಇಂತಹ ಉತ್ಸವಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಹೊಸ ತಲೆಮಾರಿನ ನಿರ್ದೇಶಕರಿಗೆ ಒಂದು ಉತ್ತಮ ರೀತಿಯ ಅನುಭವ ದೊರಕಲಿದೆ.

biffes-slider-6

ಈಗಾಗಲೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಇದಕ್ಕಾಗಿ ನೊಂದಣಿ ಆರಂಭಗೊಂಡಿದ್ದು, ಸಿನಿಮಾಸಕ್ತರು ಇತ್ತಕಡೆ ತಲೆ ಹಾಕುತ್ತಿದ್ದಾರೆ. ಬೆಂಗಳೂರಿನಲ್ಲಿ ಓರಿಯನ್ ಮಾಲ್‍ನ 12 ಪರದೆಗಳಲ್ಲಿ ತೆರೆಕಾನುತ್ತಿದ್ದರೆ, ಮೈಸೂರಿನಲ್ಲಿ ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದ 4 ತೆರೆಗಳ ಮೇಲೆ ಚಿತ್ರಗಳು ಪ್ರದರ್ಶನ ಕಾಣಲಿವೆ.

ಮುಂದಿನ ವರ್ಷ ಮೈಸೂರಿನಲ್ಲಿ ಈ ಸಿನಿಮೋತ್ಸವ ನಡೆಯುವುದು ಅನುಮಾನ. ಏಕೆಂದರೆ ಜಗತ್ತಿನ ಬಹುತೇಕ ಚಿತ್ರೋತ್ಸವಗಳು ನಗರಗಳ ಹೆಸರಿನಿಂದಲೆ ಗುರುತಿಸಲ್ಪಡುತ್ತವೆ. ಆದರೆ ಕಳೆದ ವರ್ಷದಿಂದ ಬೆಂಗಳೂರು ಮತ್ತು ಮೈಸೂರು ಎರಡು ಕಡೆ ನಡೆಯುತ್ತಿರುವುದರಿಂದ ಜಾಗತೀಕ ಮನ್ನಣೆಗೆ ತೊಡಕುಂಟಾಗುವುದರಿಂದ ಹಾಗೂ ಸಂಘಟಿಸುವುದಕ್ಕೆ ಕಷ್ಟದಾಯಕವಾದ್ದರಿಂದ ಉತ್ಸವ ಒಡೆಯುವುದು ಬೇಡ. ಬೇಕಾದರೆ ಮೈಸೂರಿಗೆ ಪ್ರತ್ಯೇಕ ಚಿತ್ರೋತ್ಸವ ನಡೆಯಲಿ ಎಂಬುದು ಸಿನಿ ತಜ್ಞರ ವಾದ.

mm

Akshay K

ನನ್ನೂರು ಮೈಸೂರು. ಓದುತ್ತಿರುವುದು ಎಂ.ಎ ಪತ್ರಿಕೋದ್ಯಮ. ಓದು ಮತ್ತು ಬರವಣಿಗೆ ಹೊಸ ಅಭ್ಯಾಸ. ಸಿನಿಮಾ ಅಂದರೆ ಹುಚ್ಚು. ಈಗಿನ ಸ್ಯಾಂಡಲ್ ವುಡ್ ಸಿನಿಮಾಗಳ ಮೇಲಂತು ಅಲ್ಲ. ಏನಿದ್ದರು ಹಾಲಿವುಡ್ ಸಿನಿಮಾಗಳ ಮೇಲೆ. ಬರಿ ನೋಡುವುದಲ್ಲ, ಮುಂದೊಂದು ದಿನ ನನ್ನ ಸಿನಿಮಾ ಇನ್ಯಾರೋ ನೋಡಬೇಕು. ಅದು ನನ್ನಾಸೆ.ಇದು ಮುಂದಾಗುವ ಮಾತು. ಈಗ ಬರೆಯುತ್ತಿದ್ದೇನೆ, ಸಾಹಿತ್ಯ ಬರವಣಿಗೆ ಅಲ್ಲ. ಅದು ಬರುವುದಿಲ್ಲ. ಕಲಿಯುತ್ತಿದ್ದೇನೆ, ಚೆನ್ನಾಗಿ ಬರಿಯೋದನ್ನ, ಬರಿ ಬರೆಯುವುದನ್ನಲ್ಲ. ಕಂಡದ್ದು, ಕೇಳಿದ್ದು, ಓದಿದ್ದರ ಬಗ್ಗೆ ನಾ ಬರೆಯೋದು. ಎಡ ಬಲ ಅಥವಾ ಇನ್ಯಾವ ಪಂಥಕ್ಕೂ ಸೇರಿದವನಲ್ಲ. ಅದೆ ಸಂವಿಧಾನದ ನಾಲ್ಕನೆಯ ಅಂಗ ಇದೆಯಲ್ಲ, ಪತ್ರಿಕೋದ್ಯಮ, ಅದಕ್ಕೆ ಸೇರಿದವನು ಅಷ್ಟೆ..

Leave a Reply

Your email address will not be published. Required fields are marked *