ನಾನು ಕಾಡಾಗುವ ಆಸೆ: ಕಾಡಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಪ್ರವಾಸ ಎಂದಾಕ್ಷಣ ಮೊದಲು ನೆನಪಾಗುವುದು ಸುಂದರ ವನ. ಯಾವುದಾದರೂ ಕಾಡಿಗೆ ಹೋಗುವುದು ಎಂದರೆ ನನ್ನಲ್ಲಿ ಮುಗಿಯದ ಉತ್ಸಾಹ. ಇಂದಿನ ದಿನಗಳಲ್ಲಿ ಎಲ್ಲರು ಟಿ.ವಿ ,ಮೊಬೈಲ್, ಕೆಲಸದ ಒತ್ತಡ ಮುಂತಾದವುಗಳಲ್ಲಿ ಮುಳುಗಿಬಿಡುತ್ತಾರೆ. ಇದರಿಂದ ಆಚೆಗೆ ಹೋಗಿ ಹೊಸ ಸ್ಥಳಗಳಿಗೆ ಭೇಟಿ ನೀಡಿದಾಗ ಆಗುವ ಖುಷಿ ಹೇಳಲ್ಲಿಕ್ಕೆ ಆಗದು.

ಬನಸಿರಿಯ ಮಧ್ಯೆ ಅಚ್ಚ ಹಸಿರಿನ ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಆಡುವ ಆಸೆ ನನ್ನದು.  ಬೆಟ್ಟ -ಗುಡ್ಡ, ನದಿಯ  ಝಳು-ಝಳು ನೀನಾದ, ಹಕ್ಕಿಗಳ ಚಿಲಿಪಿಲಿ ಶಬ್ದದಿಂದ ಸಿಗುವ ಮಜವೇ ಬೇರೆ. ಹಸಿರು ಹಾಸಿಗೆಯ ಸುಂದರ ತಾಣ ಕಾಡು. ಹಸಿರು ಸಮೃದ್ದಿಯ ಸಂಕೇತ  ಈ ದೃಶ್ಯ ನೋಡಿದ ಕಣ್ಣುಗಳಿಗೆ ಹಬ್ಬದ ಅನುಭವವಾದರೆ ಮನಸ್ಸು ಆನಂದದ ಅಲೆಯಲ್ಲಿ ತೇಲುವುದು ಮನಸ್ಸಿನ ಎಂತಹುದೇ ಬೇಸರವು ಮಾಯಾವಾಗುವುದು.

ಇಂತಹ ಅದ್ಬುತ ಜರ್ನಿ ಬಿಟ್ಟು ಇತ್ತೀಚಿನ ಯುವ ಜನತೆ ಸಿಟಿಯಲ್ಲಿ ಸೆಲ್ಫಿ ತೆಗೆದುಕೊಂಡು ಸಂತೋಷ ಪಡುತ್ತಾರೆ. ಯಾರ ಅಧೀನವೂ ಅಲ್ಲ ನಮ್ಮದು ಸ್ವತಂತ್ರ ಬದುಕು ಬೇಕಾದಲ್ಲಿ ಸಂಚರಿಸಬಹುದು ಎಂದು ಹಿಗ್ಗುವ ಭಾವನೆ ಮೂಡಿಸುತ್ತದೆ. ಸಂತೋಷ, ನೆಮ್ಮದಿಯ ಆಶ್ರಯ ತಾಣ ಈ ಕಾಡು ಇಂತಹ ಕಾಡಾಗುವ ಆಸೆ ನನ್ನದು. ಯಾರಿಗೂ ತೊಂದರೆ, ನೋವು ಕೊಡದ ಪ್ರಶಾಂತ ವನವಾಗಬೇಕು. ಆಧುನಿಕ ಜನರು ತಮ್ಮ ಸ್ವಾರ್ಥಕ್ಕೆ ಅರಣ್ಯ ನಾಶ ಮಾಡುತ್ತಿದ್ದಾರೆ. ಮನುಷ್ಯನಿಗೆ ಬೇಡವಾದ ವಿಷಾನಿಲ ಕಾರ್ಬನ್ ಡೈಆಕ್ಸೈಡ್ ಸೇವನೆ ಮಾಡುವ ಶಕ್ತಿಯನ್ನು ಭಗವಂತ ಗಿಡ ಮರಗಳಿಗೆ ನೀಡಿದ್ದಾನೆ.

ಅರಣ್ಯ ಸಂರಕ್ಷಣೆ, ಕಾಲ- ಕಾಲಕ್ಕೆ ಮಳೆಯಾಗಿ ಭೂಮಿ ತಾಯಿ ತಂಪಾಗಿರುವಳು ಪ್ರಕೃತಿಯ ಸೊಬಗು ಹೆಚ್ಚಾಗುವುದು. ಯಾವುದೇ ಅಪಾಯಕಾರಿ ಗುಣವಿಲ್ಲದ, ಬಿಸಿಲಿನಲ್ಲಿ ದಣಿದು ಬಂದವರಿಗೆ ನೆರವಾಗುವ ಬನವಾಗಬೇಕು. ಮನುಷ್ಯನ ಬದುಕು ಅಮೂಲ್ಯವಾದದ್ದು ಅದನ್ನು ದುರುಪಯೋಗ ಮಾಡಬಾರದು. ಕಾಡಿನಂತೆ ಒಳ್ಳೆಯ ಕೆಲಸದ ಜೊತೆಗೆ ಯಾವುದೇ ಪ್ರತಿಫಲ ಅಪೇಕ್ಷಿಸದೆ ಇನ್ನೊಬ್ಬರಿಗೆ ನೆರವಾಗುವ ಗುಣ ಬೆಳೆಸಿ ಕೊಳ್ಳಬೇಕು. ಹಸಿರು ನಮ್ಮೆಲ್ಲರ ಉಸಿರು ಹಾಗಾಗೀ ಅವನತಿಯ ಅಂಚಿನಲ್ಲಿರುವ ಕಾಡುಗಳ ರಕ್ಷಣೆಗೆ ಎಲ್ಲರೂ  ಮುಂದಾಗಬೇಕು.

ರಕ್ಷಿತ. ಬಿ.ಎನ್

ಪತ್ರಿಕೋದ್ಯಮ ವಿದ್ಯಾರ್ಥಿ ಮಾನಸಗಂಗೋತ್ರಿ

Leave a Reply

Your email address will not be published. Required fields are marked *