ಅಪ್ಪಟ ದೇಶ ಪ್ರೇಮಿ ಟಿಪ್ಪುಸುಲ್ತಾನ್

ಕರ್ನಾಟಕ ರಾಜ್ಯ  ಸರ್ಕಾರವು ಆಯೋಜಿಸುವ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿ ಕುರಿತು ಕಳೆದ ಮೂರು ವರ್ಷಗಳಿಂದ ಎಡ-ಬಲ ಪಂಥಿಯರ ನಡುವೆ ಸೈದ್ಧಾಂತಿಕ ಹೋರಾಟ ನಡೆಯುತ್ತಲೇ ಬಂದಿದೆ. ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದಾಗಲೇ ಬಿಜೆಪಿ ಹಾಗೂ ಬಲಪಂಥಿಯ ಸಂಘಟಕರು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಗಮನಿಸುತ್ತಿರುವ ಇತಿಹಾಸ ಪ್ರಜ್ಞೆಯಿಲ್ಲದ ಮುಗ್ಧ ಜನರು ಮತ್ತೊಂದೆಡೆ ಯಾಕಪ್ಪಾ ಈ ಟಿಪ್ಪು ಜಯಂತಿ ಎಂದು ಸರಾಗವಾಗಿ ಮೂಗುಮುರಿಯುತ್ತಿರುವುದು ಸಹಜವಾಗಿಯೇ ಕಾಣಬಹುದು.

ಪ್ರಜಾಪ್ರಭುತ್ವದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ, ಈ ದೇಶದ ಏಳಿಗೆಗಾಗಿ, ಅಭಿವೃದ್ಧಿಗೆ ಶ್ರಮಿಸಿದ ರಾಜರು, ಹೋರಾಟಗಾರರು ಹಾಗೂ ದಾರ್ಶನಿಕರ ಜಯಂತಿಯನ್ನು ಆಚರಿಸುವ ಮೂಲಕ ಅವರ ಜೀವನ ಮತ್ತು ಸಂದೇಶವನ್ನು ಜನಸಾಮಾನ್ಯರಿಗೆ ಸಾರುವುದು ತಪ್ಪಲ್ಲ. ಆದರೆ ರಾಜ್ಯಸರ್ಕಾರ ಟಿಪ್ಪು ಜಯಂತಿ ಆಚರಿಸುವ ಮೊದಲು ಟಿಪ್ಪುವಿನ ಆದರ್ಶ, ಕೊಡುಗೆ, ಪರಿಶ್ರಮ, ಪರಾಕ್ರಮ, ಸಂದೇಶ ಒಳಗೊಂಡಂತೆ ನೈಜ ಚರಿತ್ರೆಯನ್ನು ಸಮೂಹ ಮಾಧ್ಯಮದ ಮೂಲಕ ಸಮಾಜದ ಮುಂದೆ ಇಡಲು ವಿಫಲವಾಯಿತು ಎಂದರೆ ತಪ್ಪಾಗಲಾರದು. ಇನ್ನು ಬಿಜೆಪಿ ಪಕ್ಷದ ಸಂಸದರಾದ ಅನಂತ್ ಕುಮಾರ್ ಹೆಗಡೆ, ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮುಂತಾದ ಗಟಾನುಘಟಿ ಜನಪ್ರತಿನಿಧಿಗಳೇ ಅಂದು ಯೂರೋಪಿನ ವಸಾಹತುಶಾಹಿಗಳಿಗೆ ರತ್ನಗಂಬಳಿಯನ್ನು ಹಾಸಿ ಭಾರತವನ್ನು ಗುಲಾಮರ ರಾಷ್ಟ್ರವನ್ನಾಗಿ ವೈದಿಕಶಾಹಿಗಳ ಬಗ್ಗೆ ಚಕಾರವೆತ್ತದೆ, ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಟಿಪ್ಪುವನ್ನು ವಿರೋಧಿಸುವ ಬರದಲ್ಲಿ ಸಮಾಜದಲ್ಲಿ ಕೋಮುಗಲಭೆ ಸೃಷ್ಟಿಮಾಡುತ್ತಿರುವುದು ಯಾರ ನೆಮ್ಮದಿಗೆ ಎಂದು ತಿಳಿಯುತ್ತಿಲ್ಲ.

ನಂವೆಂಬರ್ 10 ರಂದು ಟಿಪ್ಪು ಜಯಂತಿ ಆಚರಿಸುವುದಕ್ಕೆ ಮಧ್ಯಾಂತರ ತಡೆ ನೀಡುವಂತೆ ಕೊಡಗಿನ ಮಂಜುನಾಥ್ ಚಿನ್ನಪ್ಪ ಎಂಬಾತ ಉಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಶಕ್ತಿಧಾವೆ ಅರ್ಜಿಸಲ್ಲಿಸಿದ್ದನ್ನು ಹೈಕೋರ್ಟ್ ವಜಾಗೊಳಿಸಿರುವುದು ಪ್ರಜಾಪ್ರಭುತ್ವವಾದಿಗಳಿಗೆ ಸಂದ ಜಯವೆಂದೆ ಹೇಳಬಹುದು. ಟಿಪ್ಪು ಮತಾಂಧ, ಮೂಢ, ಕೊಲೆಗಡುಕ, ದೇಶದ್ರೋಹಿ ಎಂಬಿತ್ಯಾದಿ ಆಪಾಧನೆಗಳು ನೆನ್ನೆ ಮೊನ್ನೆಯದಲ್ಲ. ಹಾಗೆಯೇ ಆಧಾರ ಸಹಿತ ಟಿಪ್ಪುವನ್ನು ಸಕಾರಾತ್ಮಕವಾಗಿ ಬಿಂಬಿಸಿರುವ ಇತಿಹಾಸಕಾರರ ಗುಂಪಿರುವುದು ಕೂಡ ಇಂದು ನೆನ್ನೆಯದಲ್ಲ. ಟಿಪ್ಪು ಬೇಕು-ಬೇಡ ಎಂಬ ಇವೆರಡರ ಮಧ್ಯೆ ಕನ್ನಡ ದೊರೆ ಟಿಪ್ಪು ಸುಲ್ತಾನ್ ಎಂಬ ಜನಪರವಾದಿ ತನ್ನ ರಾಜ್ಯಕ್ಕೆ ನೀಡಿದ ಕೊಡುಗೆ, ಶ್ರಮಿಕ ಹಾಗೂ ನಿಮ್ನ ವರ್ಗಗಳಿಗೆ ತೋರಿದ ಮಮತೆ, ಕೃಷಿ ಹಾಗೂ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ಕೊಟ್ಟ ಮಹತ್ವ ಯಾವುದೂ ಸಹ ನಶಿಸಿ ಹೋಗಬಾರದು.

ಟಿಪ್ಪು ಸುಲ್ತಾನ್ ಕರ್ನಾಟಕದ ಕೋಲಾರ ಜಿಲ್ಲೆಯ ದೇವನಹಳ್ಳಿಯಲ್ಲಿ ನವೆಂಬರ್ 10 – 1750ರಂದು ಹೈದರ್ ಅಲಿ ಮತ್ತು ಫಾತಿಮಾ ಬೇಗಂ ಅವರ ಪುತ್ರರಾಗಿ ಜನಿಸಿದರು. ಹೈದರ್ ಅಲಿಯ ಪೂರ್ವಜರು ಚಿಸ್ತಿ/ ಬಂದೆ ನವಾಬ್ ಸೂಫಿಸಂ ಪರಂಪರೆಯವರು ಆದ್ಧರಿಂದಲೇ ದಂಪತಿಗಳು ತಮ್ಮ ಮಗನಿಗೆ ಟಿಪ್ಪು ಎಂಬ ಸೂಫಿಸಂತನ ಹೆಸರನ್ನೇ ನಾಮಕರಣ ಮಾಡಿದರು. ಟಿಪ್ಪು 17 ವರ್ಷದ ಬಾಲ್ಯದಲ್ಲಿಯೇ ಸುಮಾರು 7.000 ಸೈನಿಕರನ್ನೊಳಗೊಂಡ ಪಡೆಯ ನಾಯಕತ್ವವನ್ನು ವಹಿಸಿಕೊಂಡಿದ್ದರು. ಟಿಪ್ಪು, ತನ್ನ ತಂದೆ ಹೈದರ್ ಅಲಿಗಿಂತ ಪರಾಕ್ರಮಿ ಬುದ್ಧಿವಂತ ಹಾಗೂ ಮಾತೃಹೃದಯಿಯಾಗಿದ್ದರು. ಟಿಪ್ಪು ಸುಲ್ತಾನ್ ಈ ದೇಶಕಂಡ ಅಪ್ಪಟ ದೇಶಪ್ರೇಮಿ, ಶ್ರೇಷ್ಠರಾಜ, ಅದ್ಭುತ ಚಿಂತಕ, ಮಹಾನ್ ತಂತ್ರಗಾರ, ಪ್ರಜೆಗಳ ರಕ್ಷಕ ಎಂದೇ ಹೇಳಬಹುದು. ಕರ್ನಾಟಕಕ್ಕೆ ಆತ ಸಾಕಷ್ಟು ಶ್ರಮವಹಿಸಿದ್ದಾರೆ. ಬಹುಶಃ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕಳೆದ 500 ವರ್ಷಗಳಲ್ಲಿ ಕಂಡು ಬಂದ ಅಪ್ಪಟ ಕನ್ನಡಿಗ ಎಂದು ಬ್ರಿಟೀಷ್ ಹಾಗೂ ಭಾರತೀಯ ಇತಿಹಾಸಕಾರರು ದಾಖಲಿಸಿದ್ದಾರೆ.

ಟಿಪ್ಪು ತನ್ನ ಸಾಮ್ರಾಜ್ಯದಲ್ಲಿದ್ದ ಸಾಮಾನ್ಯರ ಉಳಿವಿಗಾಗಿ ಹಾಗೂ ಏಕತೆಯೇ ಇಲ್ಲದಿದ್ದ ತನ್ನ ದೇಶಕ್ಕಾಗಿ ಬ್ರಿಟೀಷರ ವಿರುದ್ಧ ಅನೇಕಬಾರಿ ಯುದ್ಧ ಮಾಡಿರುವುದು ಶ್ಲಾಘನೀಯ. ಟಿಪ್ಪು ಹೊರಗಿನಿಂದ ಬಂದ ಬ್ರಿಟೀಷರ ವಿರುದ್ಧ ಮಾಡಿದ ಯುದ್ಧಗಳ ನಡುವೆಯೂ ಅವರೊಂದಿಗೆ ಶಾಮೀಲಾಗಿದ್ದ ದೇಸಿ ರಾಜರ ಸೇನೆಗಳನ್ನು ಎದುರಿಸಬೇಕಾಯಿತು. ಮುಂದುವರಿದು ಟಿಪ್ಪುವನ್ನು ಸೋಲಿಸಿದ್ದು ಬ್ರಿಟೀಷರ ತಾಕತ್ತು ಮಾತ್ರವಲ್ಲ. ಅವರೊಂದಿಗೆ ಕೈಜೋಡಿಸಿದ ದೇಸಿ ರಾಜರ ದ್ರೋಹವು ಹೌದು. ಆ ಕಾಲದಲ್ಲೇ ದೇಸಿ ರಾಜರೆಲ್ಲರೂ ಸ್ವದೇಶಿ ಹೋರಾಟಕ್ಕೆ ಒಂದಾಗಿ ಬ್ರಿಟೀಷರ ವಿರುದ್ಧ ಯುದ್ಧ ಸಾರಿದ್ದರೆ ಬಹುಶ ಈ ದೇಶದ ಖಜಾನೆ ಬರಿದು ಹಾಗೂ ಗುಲಾಮಗಿರಿಗೆ ಒಳಪಡುತ್ತಿರಲಿಲ್ಲ ಅನಿಸುತ್ತದೆ.

ಟಿಪ್ಪು ಬದುಕಿದ್ದ ಕಾಲದಲ್ಲಿ (1750-1799) ಹೊಸ ಚಿಂತನೆ ಮತ್ತು ಸಂಶೋಧನೆಗಳಿಂದಾಗಿ ಇಡೀ ಜಗತ್ತಿನ ಚರಿತ್ರೆ ಮತ್ತು ಭೂಗೋಳ ಎರಡು ಕೂಡ ಬದಲಾಗುತ್ತಿದ್ದವು. ಹದಿನೆಂಟನೇಯ ಶತಮಾನದ ಉತ್ತರಾರ್ಧದ ಈ ಹೊಸ ಬೆಳಕಿಗೆ ತನ್ನ ಕಣ್ಣು ತೆರೆದುಕೊಂಡಿದ್ದರಿಂದಲೇ ಟಿಪ್ಪು ಅಂದು ಸಾಗರದಾಚೆ ಇದ್ದ ನೆಪೋಲಿಯನ್ ಗೆ ಬರೆದ ಪತ್ರದಲ್ಲಿ ತನ್ನನ್ನು ಭಾರತ ಗಣರಾಜ್ಯದ ಒಬ್ಬ ಪ್ರಜೆ ಎಂದು ಕರೆದುಕೊಂಡಿದ್ದಾರೆ. ಅಂದು ಬ್ರಿಟೀಷ್ ಸಾಮ್ರಾಜ್ಯ ಇಡೀ ವಿಶ್ವವನ್ನೆ ಆವರಿಸುತ್ತಿದ್ದ ಸಂದರ್ಭದಲ್ಲಿ ಟಿಪ್ಪು ನಮ್ಮ ದೇಸಿ ರಾಜಮನೆತನಗಳು ಬ್ರಿಟೀಷರ ವಿರುದ್ಧ ಹೋರಾಟ ಮಾಡುವುದು ಅವಶ್ಯಕ ಎಂದು ಭಾವಿಸಿದ್ದರು. ಆದರೆ ನಿಜಾಂರು, ಮರಾಠರು ಮತ್ತು ಇನ್ನಿತರ ಈ ಮಣ್ಣಿನ ಆಡಳಿತಗಾರರೆಲ್ಲಾ ಇಂತಹ ಭಾರತೀಯ ಒಗ್ಗಟ್ಟಿನ ರಾಷ್ಟ್ರೀಯ ಭಾವನೆ ಇಲ್ಲದುದ್ದದ್ದು. ದುರಂತವೇ ಸರಿ. ಭಾರತದ ಗಣರಾಜ್ಯದ ಒಬ್ಬ ಪ್ರಜೆ ಎಂದು ಘೊಷಿಸಿಕೊಂಡ ಟಿಪ್ಪು ಸುಲ್ತಾನ್ ವಿರುದ್ಧ ಸಂಘಟಿತ ಹೋರಾಟ ದೇಶದ ಒಳಗೂ ಹಾಗೂ ಹೊರಗೂ ಗಟ್ಟಿಯಾಗ ತೊಡಗಿತು. ಬ್ರಿಟೀಷರ ಒಡೆದು ಆಳುವ ನೀತಿ ಟಿಪ್ಪುವಿಗೆ ಸೋಲನ್ನುಣಿಸಿತು.

ಟಿಪ್ಪುವಿನ ಧರ್ಮಾಂಧತೆಯ ಕಥೆ ವ್ಯಥೆಗಳನ್ನು ಹಒರತಾಗಿ ನೋಡಿದರೆ, ನಿರಂತರ ಯುದ್ಧಗಳ ನಡುವೆಯೂ ಟಿಪ್ಪು ತನ್ನ ರಾಜ್ಯದ ಬಡರೈತರ, ಶ್ರಮಿಕರ, ಧೀನದಲಿತರ ಬಗ್ಗೆ ಯೋಚಿಸುತ್ತಿದ್ದರು. ರಾಜ್ಯ ವೀಕ್ಷಣೆಗೆ ತೆರಳಿದಾಗಲೆಲ್ಲಾ ಪ್ರಜೆಗಳು ಅನುಭವಿಸುತ್ತಿರುವ ಕಷ್ಟ ಹಾಗೂ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಬರುತ್ತಿದ್ದರು. ಇದರ ಪರಿಣಾಮ ಟಿಪ್ಪು ಸುಲ್ತಾನ್ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಇಡೀ ಪ್ರಪಂಚದಲ್ಲೇ ಪ್ರಪ್ರಥಮ ಬಾರಿಗೆ ಶ್ರಮಿಕರಿಗೆ ಭೂಮಿಯ ಹಕ್ಕು ಕೊಟ್ಟಿದ್ದರೆ ಅದು ಫ್ರೆಂಚ್ ಮಹಾಕ್ರಾಂತಿ. ಜಾಗತೀಕ ಇತಿಹಾಸದಲ್ಲಿ ಎರಡನೇ ಬಾರಿಗೆ ಕಳೆ ಕೀಳುವ, ಉಳುವ ಕೈಗಳಿಗೆ ಭೂಮಿಯ ಓಡೆತನ ಕೊಟ್ಟ ರಾಜನೆಂದರೆ ಅದು ಟಿಪ್ಪು ಸುಲ್ತಾನ್. ಮುಂದುವರಿದು ಸುಮಾರು 35ಕ್ಕು ಹೆಚ್ಚು ಕಾರ್ಖಾನೆಗಳನ್ನು ತನ್ನ ಸಂಸ್ಥಾನದಲ್ಲಿ ಸ್ಥಾಪಿಸಿ ಸಾವಿರಾಋಉ ಜನರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಡುತ್ತಾರೆ. ಟಿಪ್ಪು ಸುಲ್ತಾನ್ ಎಂದಿಗೂ ಹಿಂದೂಧರ್ಮೀರ ವಿರೋಧಿಯಲ್ಲ. ಹಿಂದೂ – ಮುಸಲ್ಮಾನರ ನಡುವೆ ಸ್ನೇಹ ಸೌಹಾರ್ಧವನ್ನು ಟಿಪ್ಪು ಬೆಳೆಸಿದ್ದಕ್ಕೆ ಅನೇಕ ಐತಿಹಾಸಿಕ ನಿದರ್ಶನಗಳಿವೆ.

ದಿನಾಂಕ 08 ನವೆಂಬರ್ 2017 ರಂದು ಮೈಸೂರು – ಕೊಡಗು ಸಂಸದರಾದ ಪ್ರತಾಪ್ ಸಿಂಹ ಮತ್ತು ಮಾಜಿ ಸಚಿವ ಎಸ್.ಎ. ರಾಮದಾಸ್ ಅವರ ನೇತೃತ್ವದಲ್ಲಿ ಬಿಜೆಪಿ ಹಾಗೂ ಬಲಪಚಿಥಿಯರಿಂದ ಟಿಪ್ಪು ಜಯಂತಿಯ ಆಚರಣೆಯನ್ನು ವಿರೋಧಿಸಿ ಓನಕೆ ಹಿಡಿದು  ಹೋರಾಟ ಮಾಡಿರುವುದು ಹಾಸ್ಯಸ್ಪದವೆನಿಸುತ್ತದೆ. ಮಲಬಾರ್ ಪ್ರದೇಶದಲ್ಲಿ ಅಸ್ಪøಶ್ಯ ಮಹಿಳೆಯರು ತಮ್ಮ ಸ್ತನ ತರಿಗೆಯನ್ನು ಕಟ್ಟಲಾಗದೆ ಎದೆಯ ಭಾಗವನ್ನು ಮುಚ್ಚಿಕೊಳ್ಳಲಾಗದಂತಹ ಅಮಾನವೀಯ ಸ್ಥಿತಿಯಲ್ಲಿದ್ದಾಗ ಟಿಪ್ಪು ಸುಲ್ತಾನ್ ಅವರನ್ನು ಇಂತಹ ಕ್ರೂರ ಶೋಷಣೆಯಿಂದ ಹೊರತರುತ್ತಾರೆ. ಇಂತಹ ಮಾನವತಾವಾದಿಯನ್ನು ಇಂದು ಮತಾಂಧ ಎಂದು ಬಿಂಬಿಸುತ್ತಿರುವುದು ನೈಜ ಇತಿಹಾಸಕ್ಕೆ ಮಾಡಿದ ದ್ರೋಹವೇ ಆಗಿದೆ.

ಟಿಪ್ಪುವಿನ ಬಗ್ಗೆ ವಸಾಹತುಶಾಹಿಪರ ಹಾಗೂ ಬಲಪಂಥಿಯ ಇತಿಹಾಸಕಾರರು ಮಾಡಿರುವ ಸುಳ್ಳು ಆರೋಪಗಳನ್ನು ಗಮನಿಸಿದರೆ ನಿಜಕ್ಕೂ ಹಾಸ್ಯಸ್ಪದವಾಗಿದೆ. ಮಾರ್ಕ್ ವಿಲ್ಕ್ಸ್ ಎಂಬ ಬ್ರಿಟೀಷ್ ಇತಿಹಾಸಕಾರ ತನ್ನ ಕೃತಿಯೊಂದರಲ್ಲಿ “ಟಿಪ್ಪು ಸುಲ್ತಾನ್ ಕೊಡಗಿನಲ್ಲಿ 70.000 ಹಿಂದೂಗಳನ್ನು ಇಸ್ಲಾಂಗೆ ಮತಾಂತರಿಸಿದ್ದಾನೆ” ಎಂದು ಆಪಾದಿಸಿದ್ದಾರೆ. ಹಾಗೆಯೇ ಬಿ.ಎಲ್.ರೈಸ್ ಎಂಬ ಇನ್ನೊಬ್ಬ ಇತಿಹಾಸಕಾರ ಮೈಸೂರು ಗೆಜೆಟಿಯರ್ ಒಂದೊರಲ್ಲಿ “ಟಿಪ್ಪು ಸುಲ್ತಾನ್ 85.000 ಹಿಂದೂಗಳನ್ನು ಬಲಪಂಥವಾಗಿ ಮತಾಂತರಿಸಿದ” ಎಂದು ಘೋರವಾಗಿ ಆರೋಪಿಸಿದ್ದಾರೆ. ಆದರೆ ಇಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಿದರೆ ಇವರೀರ್ವರ ನಡುವೆ ಇರುವ ಇತಿಹಾಸ ಪ್ರಜ್ಞೆ ಹಾಗೂ ನೀಡಿರುವ ಜನಸಂಖ್ಯೆ ಅಂತರ 15.000. ಟಿಪ್ಪು ಹುತಾತ್ಮರಾಗಿದ್ದು, 1799ರಲ್ಲಿ. 1836 ರಲ್ಲಿ ಅಂದರೆ ಟಿಪ್ಪು ಮರಣ ಹೊಂದಿದ 37 ವರ್ಷಗಳ ನಚಿತರ ಬ್ರಿಟೀಷರು ನಡೆಸಿದ ಜನಗಣತಿಯ ಪ್ರಕಾರ ಕೊಡಗಿನ ಜನಸಂಖ್ಯೆ 65.437 ರಷ್ಟಿರುತ್ತದೆ. ಅಂದಮೇಲೆ ಟಿಪ್ಪು ಬದುಕಿದ್ದ ಕಾಲದಲ್ಲಿ ಕೊಡಗಿನ ಜನಸಂಖ್ಯೆ ಎಷ್ಟಿರಬಹುದೆಂದು ನೀವೆ ಊಹಿಸಿಕೊಳ್ಳಿ.!! ಸತ್ಯ ದಾಖಲೆಗಳು ಹೀಗೆಯೇ ಹೇಳುತ್ತಿರುವಾಗ ಒಟ್ಟು ಜನಸಂಖ್ಯೆಗಿಂತ ಹೆಚ್ಚು ಜನರನ್ನು ಟಿಪ್ಪು ಹೇಗೆ ಮತಾಂತರಗೊಳಿಸಲು ಸಾಧ್ಯ? ಇದಕ್ಕೆ ಪ್ರತಾಪ್ ಸಿಂಹರಂತಹ ಪ್ರಖ್ಯಾತ ಲೇಖಕರು ಉತ್ತರಿಸಲು ಸಾಧ್ಯವೇ?

ಟಿಪ್ಪು ಮೇಲಿರುವ ಮತ್ತೊಂದು ಆರೋಪವೆಚಿದರೆ, 7.900 ಹಿಂದೂ ದೇವಾಲಯಗಳನ್ನು ಧ್ವಂಸಗೊಳಿದ್ದಾರೆ ಎಂದು ಮಹಾನ್ ವಿದ್ವಾನ್ ಸಂಶೋಧಕರಾದ ಚಿದಾನಂದಮೂರ್ತಿ ಅವರು ವಾದಿಸುತ್ತಾರೆ. ಸಹಜವಾಗಿ ಒಂದು ಸರಳ ತರ್ಕಮಾಡಿ ನೋಡಿದರೆ ಟಿಪ್ಪುವಿನ ಒಟ್ಟು ಆಡಳಿತ ಅವಧಿ ಸುಮಾರು 17ವರ್ಷವಷ್ಟೇ. ಒಂದು ವರ್ಷಕ್ಕೆ 365 ದಿನಗಳೆಂದರೆ 17 ವರ್ಷಕ್ಕೆ 6205 ದಿನಗಳಾಗುತ್ತವೆ, ಟಿಪ್ಪು ದಿನಕ್ಕೊಂದು ದೇವಾಲಯಗಳನ್ನು ನಾಶಪಡಿಸಿದರು 17 ವರ್ಷಕ್ಕೆ 6205 ದೇವಾಲಯಗಳಾಗುತ್ತವೆ. ಇನ್ನುಳಿದ 700ಕ್ಕೂ ಹೆಚ್ಚು ದೇವಾಲಯಗಳನ್ನು ಟಿಪ್ಪು ಯಾವಾಗ ಧ್ವಂಸಗೊಳಿಸಿದರು ಎಂದು ಬಲಪಂಥಿಯ ಇತಿಹಾಸಕಾರರ ಬಳಿ ದಾಖಲೆಗಳಿವೆಯೆ? ಹೀಗೆ ಬಿಜೆಪಿ ಹಾಗೂ ಬಲಪಂಥಿಯರು ನಂಬಿರುವ ಇತಿಹಾಸಕ್ಕೆ ಪ್ರತಿ ಸಾಲಿಗೂ ಸ್ಪಷ್ಟೀಕರಣ ನೀಡಬಹುದು.

ಭಾರತದಲ್ಲಿ ರಾಜಮನೆತನಗಳ ಇತಿಹಾಸವನ್ನು ಅವಲೋಕಿಸಿದರೆ ಬಹುತೇಕ ಸಂಸ್ಥಾನಗಳ ರಾಜರು ಬ್ರಿಟೀಷರ ಜೊತೆ ಸ್ನೇಹ ಮಾಡಲು, ಅವರ ಜೀವನ ಶೈಲಿಯನ್ನು ಅನುಸರಿಸಲು, ಅವರ ಭಾಷೆ ಕಲಿಯಲು, ಅವರಂತೆಯೇ ಶೋಕಿಲಾಲ್ ಗಳಾಗಲು ಸಾಕಷ್ಟು ಜೀತ ಮಾಡಿದ್ದಾರೆ. ತಮ್ಮ ಅಸ್ತಿತ್ವದ ಉಳಿವಿಗಾಗಿ ಬ್ರಿಟೀಷ್ ಅಧಿಕಾರಿಗಳಿಗೆ ತಮ್ಮ ಮಡದಿ, ಮಗಳು ಸಖಿಯರನ್ನು ಸೇರಿ ಎಲ್ಲವನ್ನೂ ಮುಫತ್ತಾಗಿ ಅರ್ಪಿಸಿದವರ ಕಥೆಗಳು ಬೇಕಾದಷ್ಟಿವೆ. ಆದರೆ ಅವರಾಋಇಗೂ ಇಲ್ಲದ ‘ರಾಷ್ಟ್ರದ್ರೋಹಿ, ಮತಾಂಧ’ ಕಿರೀಟ ಟಿಪ್ಪುವಿಗೆ ಮಾತ್ರ ಏಕೆ? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಡಾ. ದಿಲೀಪ್ ನರಸಯ್ಯ.ಎಂ
ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ 
ಮೈಸೂರು ವಿಶ್ವವಿದ್ಯಾನಿಲಯ

Leave a Reply

Your email address will not be published. Required fields are marked *