ಬಾಲ್ಯ ಪ್ರತಿಯೊಬ್ಬರ ಜೀವನದಲ್ಲೂ ಅದ್ಭುತ ಕ್ಷಣ: ಮುಗ್ದ ಮನಸಿನ ಮಕ್ಕಳಿಗೆ ಜಾತಿ, ವರ್ಗಗಳ ಭೇದ-ಭಾವವಿಲ್ಲ, ಮೇಲು-ಕೀಳು ಎಂಬ ತರತಮ್ಯವಿಲ್ಲ

ಬಾಲ್ಯವು ಪ್ರತಿಯೊಬ್ಬರ ಜೀವನದಲ್ಲೂ ಅದ್ಬುತ ಕ್ಷಣವಾಗಿರುತ್ತದೆ. ಇಲ್ಲಿ ಕಲಿಯುವ ಒಳ್ಳೆಯ ಗುಣ, ಶಿಕ್ಷಣ ಭವಿಷ್ಯದ ಯಶಸ್ಸಿಗೆ ಮೆಟ್ಟಿಲಾಗುತ್ತದೆ. ಮುಗ್ದ ಮನಸಿನ ಮಕ್ಕಳಿಗೆ ಜಾತಿ, ವರ್ಗಗಳ ಭೇದ-ಭಾವವಿಲ್ಲ, ಮೇಲು-ಕೀಳು ಎಂಬ ತರತಮ್ಯವಿಲ್ಲ.

ನಾವು ಪುಟ್ಟ ಮಕ್ಕಳಾಗಿದ್ದಾಗ ಮಕ್ಕಳ ದಿನಾಚರಣೆ ಬಂತೆಂದರೆ ಎಲ್ಲಿಲ್ಲದ ಸಂಭ್ರಮ, ಸಡಗರ. ಆ ದಿನ ಕ್ಲಾಸ್, ಹೋಂ ವರ್ಕನ ಟೆಕ್ಷನ್‌ಗಳಿಗೆ ಗುಡ್‌ಬಾಯ್ ಹೇಳಿ ಬಣ್ಣ ಬಣ್ಣದ ಬಟ್ಟೆ ಧರಿಸಿ ಚಿಟ್ಟೆಗಳಂತೆ ಖುಷಿಯಾಗಿ ಯಾರ ಒತ್ತಾಯವಿಲ್ಲದೆ ಶಾಲೆಗೆ ಹೋಗುತ್ತಿದ್ದೆವು. ಶಿಕ್ಷಕರೆಲ್ಲರು ಮಕ್ಕಳ ದಿನಾಚರಣೆ ಶುಭಾಶಯ ಹೇಳಿ ಚಾಚ ನೆಹರು ಬಗ್ಗೆ ಒಂದೆರಡು ಮಾತು ತಿಳಿಸುತ್ತಿದ್ದರು. ಚಾಚ ನೆಹರುಗೆ ಮಕ್ಕಳ ಮೇಲೆ ಅಪಾರ ಪ್ರೀತಿ. ಹಾಗಾಗಿ ಅವರ ಜನ್ಮ ದಿನದಂದು ಮಕ್ಕಳ ದಿನಾಚರಣೆ ನಡೆಸಲಾಗುತ್ತದೆ. ಮಕ್ಕಳ ಹಾರೈಕೆ, ಹಕ್ಕು, ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಬಾಲ ದಿವಸ್ ಆಚರಿಸಲಾಗುತ್ತದೆ ಎಂದೆಲ್ಲಾ ಹೇಳುತ್ತಿದ್ದರು.

ಇನ್ನು ಮಕ್ಕಳ ದಿನಾಚರಣೆಯ ಅಂಗವಾಗಿ ನಮಗೆಂದೇ ಪ್ರಬಂಧ ಸ್ವರ್ಧೆ, ಬಾಷಣ, ಸಾಂಸ್ಕೃತಿಕ ಮನರಂಜನಾ ಕಾರ್ಯ ಕ್ರಮವನ್ನು ಏರ್ಪಡಿಸಿ ನಮ್ಮಲ್ಲಿರುವ ಪ್ರತಿಭೆಗಳನ್ನು ಗುರ್ತಿಸಿ ಬಹುಮಾನವನ್ನು ವಿತರಿಸಲಾಗುತ್ತಿತ್ತು. ಅಲ್ಲದೆ ಚಾಚ ಭಾವಚಿತ್ರವನ್ನು ಪೂಜಿಸಿ ತಿಂಡಿ ತಿನಿಸುಗಳ ನೀಡಿ, ಕ್ರೀಡಾಕೂಟವನ್ನು ಅಯೋಜಿಸುತ್ತಿದ್ದರು. ಮಕ್ಕಳ ದಿನಾಚರಣೆಯ ಅಂಗವಾಗಿ ಒಂದಷ್ಟು ಹಣವನ್ನು ನೀಡುತ್ತಿದ್ದೆವು. ಕೊಟ್ಟಂತಹ ಹಣವನ್ನು ಅನಾಥ ಮಕ್ಕಳ ಬಾಲ ಶ್ರಮಕ್ಕೆ ನೀಡುವ ಮೂಲಕ ಬಹಳ ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಗುತ್ತಿತ್ತು, ಅಲ್ಲದೆ ಕೆಲವು ಭಾರಿ ಮಕ್ಕಳಿಗೆ ಸಂಬಂಧಿಸಿದ ಹಾಗೂ ಪಠ್ಯಕ್ಕೆ ಸಂಬಂಧಿಸಿದ ಚಲನಚಿತ್ರಗಳನ್ನು ತೋರಿಸಲಾಗುತ್ತಿತ್ತು.

ಜವಾಹರರಿಗೆ ಮೊದಲಿನಿಂದಲೂ ಮಕ್ಕಳೆಂದರೆ ಬಹಳ ಪ್ರೀತಿ. ಮಕ್ಕಳೊಡನೆ ಆಟವಾಡುವುದೆಂದರೆ ಆನಂದ. ಸ್ವತಂತ್ರ ಭಾರತದ ಪ್ರಧಾನಮಂತ್ರಿಯಾಗಿ ದಿನವಿಡೀ ದುಡಿತ ವಿದ್ದಾಗಲೂ ಅವರು ಮಕ್ಕಳೊಡನೆ ಆಡುವ ಪ್ರಸಂಗ ತಪ್ಪಿಸುತ್ತಿರಲಿಲ್ಲ. ಯಾವುದೇ ಸಭೆಗೆ ಹೋಗಿರಲಿ, ಎಷ್ಟೇ ಅವಸರದ ಕಾರ್ಯಕ್ರಮವಿರಲಿ ಅವರು ಮಕ್ಕಳನ್ನು ನೋಡಿದ ಕೂಡಲೆ ಎತ್ತಿ ಮುದ್ದಾಡುತ್ತಿದ್ದರು. “ನಿಜವಾದ ಜವಾಹರರನ್ನು ನೋಡಬೇಕಾದರೆ ಅವರು ಮಕ್ಕಳೊಂದಿಗೆ ಇರುವಾಗ ನೋಡಬೇಕು. ಮಕ್ಕಳಂತೆಯೇ ಮಾತನಾಡಿ, ಅವರ ಹಾಗೆಯೇ ಆಟವಾಡಿ ನಲಿದು ಆನಂದಪಡುತ್ತಾರೆ” ಎಂದು ಅವರ ತಂಗಿ ಶ್ರೀಮತಿ ವಿಜಯಲಕ್ಷ್ಮಿ ಪಂಡಿತರು ಹೇಳಿದ್ದಾರೆ. ನವೆಂಬರ್ ೧೪ ನಮ್ಮ ದೇಶದ ಒಬ್ಬ ಮಹಾಪುರುಷರಾದ ಪಂಡಿತ ಜವಾಹರ್‌ಲಾಲ್ ನೆಹರು ಅವರ ಜನ್ಮದಿನ. ಅಂದು ಭಾರತದಲ್ಲೆಲ್ಲ ‘ಮಕ್ಕಳ ದಿನ’ ಎಂದು ಸಂಭ್ರಮದಿಂದ ಪ್ರತಿವರುಷ ಆಚರಿಸುತ್ತೇವೆ. ಜವಾಹರರನ್ನು ಮಕ್ಕಳು ‘ಚಾಚಾ ನೆಹರೂ’ ಎಂದು ಪ್ರೀತಿ-ಗೌರವಗಳಿಂದ ಕರೆಯುತ್ತಾರೆ. ಚಾಚಾ ಎಂದರೆ ಚಿಕ್ಕಪ್ಪ.

ರಕ್ಷಿತ. ಬಿ.ಎನ್
ಪತ್ರಿಕೋದ್ಯಮ ವಿದ್ಯಾರ್ಥಿ ಮಾನಸಗಂಗೋತ್ರಿ

Leave a Reply

Your email address will not be published. Required fields are marked *