ನೇಕಾರರಿಂದ ನೇರ ನಾರಿಯರಿಗೆ ಕೈಮಗ್ಗದ ಸೀರೆಗಳು

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದಲ್ಲಿ ಕೈಮಗ್ಗದ ಸೀರೆಗಳು ಮಹಿಳೆಯರನ್ನು ಸೆಳೆದವು. ನೇಕಾರರದಿಂದ ನೇರವಾಗಿ ನಾರಿಯರಿಗೆ ಕೈಮಗ್ಗದ ಸೀರೆಗಳು ಎಂಬ ಉದ್ಘೋಷದೊಂದಿಗೆ ಆಕರ್ಷಿಸಿದವು.

ಲಕ್ಷದೀಪೋತ್ಸವದ ಐದನೇ ದಿನದಿಂದ  ಸಿಲ್ಕ್ ಮತ್ತು ಕಾಟನ್ ಸೀರೆಗಳಿಗೆ ಬೇಡಿಕೆ ಹೆಚ್ಚಾಯಿತು. ಆರಂಭದಲ್ಲಿ ಮಾರಾಟ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಮೊದಲ ಮೂರ‍್ನಾಲ್ಕು ದಿನಗಳ ಅವಧಿಯಲ್ಲಿ ಉಳಿದ ಮಳಿಗಗಳಲ್ಲಿದ್ದಂತೆ ಕೈಮಗ್ಗದ ಸೀರೆ ಮಳಿಗೆಯಲ್ಲಿ ಜನಜಂಗುಳಿಯಿರಲಿಲ್ಲ. ಗುರುವಾರದಿಂದ ಹಲವರು ಈ ಸೀರೆಗಳೆಡೆಗೆ ಆಕರ್ಷಿತರಾದರು.

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಎಸ್‌ಜಿಆರ್‌ಎಸ್ ಉತ್ಪನ್ನ ಘಟಕದ ಈ ಸೀರೆಗಳನ್ನು ಈ ಮಳಿಗೆಯಲ್ಲಿ ಮಾರಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಲಕ್ಷದೀಪೋತ್ಸವಕ್ಕೆ ಆಗಮಿಸುತ್ತಿರುವ ಈ ಘಟಕದ ಪ್ರತಿನಿಧಿಗಳು ಈ ಸಲವೂ ಇಲ್ಲಿ ವ್ಯಾಪಾರನಿರತರಾಗಿದ್ದಾರೆ.

ಇಂದಿನ ಕಾಲದಲ್ಲಿ ಸೀರೆಗೆ ಆದ್ಯತೆ ನೀಡುವವರ ಸಂಖ್ಯೆ ಬಹಳ ಕಡಿಮೆ. ಆದರೂ ಸಾಂಪ್ರದಾಯಿಕ ಶೈಲಿಯಲ್ಲಿ ಕೈಮಗ್ಗದಲ್ಲಿ ನೇಯ್ದ ಸೀರೆಗಳಿಗೆ ಬೇಡಿಕೆ ಇದೆ. ರಬ್ಬರ್ ಸಿಲ್ಕ್, ಪಾಲಿಸ್ಟರ್, ಉಣ್ಣೆ ಬಟ್ಟೆಗಳ ನಡುವೆಯೂ, ರೇಷ್ಮೆ ಸೀರೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ಹೇಳಿ ಮಾಡಿಸಿಕೊಂಡು ಹೋಗುತ್ತಾರೆ. ಬಹಳ ದೊಡ್ಡ ಮಟ್ಟದಲ್ಲಿ ಲಾಭದಾಯಕವಲ್ಲದಿದ್ದರೂ ಪಾರಂಪರಿಕವಾಗಿ ನಡೆಸಿಕೊಂಡು ಬಂದ ಈ ಉದ್ಯೋಗ ತೃಪ್ತಿದಾಯಕವಾಗಿದೆ ಎನ್ನುತ್ತಾರೆ ಎಸ್.ಜಿ.ಆರ್.ಎಸ್ ಉತ್ಪನ್ನ ಘಟಕದ ಮಾಲೀಕರಾದ ಗೋಪಿನಾಥ್.ವಿ.

ಗೋಪಿನಾಥ ಅವರ ಅಪ್ಪ, ಅಜ್ಜನ ಕಾಲದಿಂದಲೂ ನಡೆದುಕೊಂಡು ಬಂದ ಈ ಕೈಮಗ್ಗದ ಉದ್ಯಮಕ್ಕೆ ಸುಮಾರು ೫೦ ವರ್ಷಗಳ ಇತಿಹಾಸವೇಇದೆ. ಬದಲಾದ ಕಾಲಮಾನಕ್ಕನುಗುಣವಾಗಿ ಮಾರಾಟದ ಶೈಲಿಯಲ್ಲಿ ಹೊಸತನವನ್ನು ಅಳವಡಿಸಿಕೊಳ್ಳಲಾಗಿದೆ. ಫೇಸ್‌ಬುಕ್, ವಾಟ್ಸಾಪ್. ಆನ್‌ಲೈನ್ ಮೂಲಕವೂ ಸೀರೆಗಳಿಗೆ ಬೇಡಿಕೆಗಳನ್ನು ಸ್ವೀಕರಿಸಲಾಗುತ್ತಿದೆ.

ಗ್ರಾಹಕರ ಅಭಿರುಚಿಗೆ ಅನುಗುಣವಾದ ಸೀರೆಗಳನ್ನೇ ತಯಾರಿಸಿ ಕೊಡಲಾಗುತ್ತಿದೆ. ನಮ್ಮ ಭಾರತೀಯ ಪುರಾತನ ಕೈಮಗ್ಗದ ಪದ್ಧತಿಯಲ್ಲಿ ತಯಾರಾಗುವ ಸೀರೆಗಳಿಗೆ ಕೇವಲ ನಮ್ಮ ರಾಜ್ಯ ನಮ್ಮದೇಶದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯದಲ್ಲೂ ಬಹು ಬೇಡಿಕೆ ಇದೆ. ಅಲ್ಲದೇ ಹೊರದೇಶದಲ್ಲೂ ಸಹ ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ನೇಯ್ಗೆ ಸೀರೆಗಳಿಗೆ ಬೇಡಿಕೆಇರುವುದು ಸಂತೋಷಕರ ವಿಷಯ.

ವರದಿ ಮತ್ತು ಚಿತ್ರಗಳು: ಜಯಲಕ್ಷ್ಮಿ ಭಟ್
ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹಸಂವಹನ ವಿಭಾಗ ಎಸ್‌ಡಿಎಂಕಾಲೇಜು, ಉಜಿರೆ

One thought on “ನೇಕಾರರಿಂದ ನೇರ ನಾರಿಯರಿಗೆ ಕೈಮಗ್ಗದ ಸೀರೆಗಳು

Leave a Reply

Your email address will not be published. Required fields are marked *