ದಸರಾ ನಂತರದ ಅರ್ಜುನನ ಕಾಯಕ

ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಚಿನ್ನದ ಅಂಭಾರಿಯಲ್ಲಿ ಹೊತ್ತು, ಗಾಂಭೀರ್ಯದ ಹೆಜ್ಜೆ ಹಾಕುತ ಸಾಗುವವ ನಮ್ಮ ಅರ್ಜುನ. ದಸರಾ ಮುಗಿದ ಬಳಿಕ ಅರ್ಜುನ ಎಲ್ಲಿ ಹೋಗುತ್ತಾನೆ ಏನು ಮಾಡುತ್ತಾನೆ ಎಂದು ನಿಮಗೆ ಗೊತ್ತ..?

ಹೌದು ದಸರಾ ಮುಗಿದ ಬಳಿಕ ಅರ್ಜುನ ಹೆಚ್.ಡಿ.ಕೋಟೆ ತಾಲ್ಲೂಕಿನ ಬಳ್ಳೆ ಆನೆ ಶಿಬಿರಕ್ಕೆ ಬಂದು ವಿರಮಿಸುತ್ತಾನೆ. ವಿನು ಅರ್ಜುನನ ಮಾವುತ. ಬಳ್ಳೆಗೆ ಬಂದಮೇಲೆ ಅರ್ಜುನ ಪ್ರತಿದಿನವೂ ಮಾವುತ ವಿನು ಜೊತೆ ಅರಣ್ಯಕ್ಕೆ ಹೋಗಿ ಸೋಪ್ಪನ್ನೂ ತರುತ್ತಾನೆ. ಸಂಜೆಯವರೆಗು ಸೋಪ್ಪನ್ನು ತರುವ ಕಾಯಕದಲ್ಲಿದ್ದ ಅರ್ಜುನ ಕತ್ತಲಾಗುವ ಮುಂಚೆ ಬಳ್ಳೆಗೆ ಬಂದು ಸೇರಿಬಿಡುತ್ತಾನೆ. ಅಲ್ಲದೆ ಸಮೀಪದ ನದಿಯಲ್ಲಿ ಸ್ನಾನ ಮಾಡಿಕೊಂಡು ತಾನು ತಂದ ಸೊಪ್ಪನ್ನು ತಿನ್ನುತ ನಿಲುತ್ತಾನೆ.

ಮಾವುತನ ಮಾತು ಮೀರದ ಅರ್ಜುನ ತನ್ನ ಮಾವುತನನ್ನು ಬಿಟ್ಟು ಒಂದು ಘಳಿಗೆಯು ಸಹ ಇರುವುದಿಲ್ಲ. ಆತನ ಧ್ವನಿ ಕೇಳದಿದ್ದರೆ ಬೇರೆ ಯಾರನ್ನು ಹತ್ತಿರ ಸುಳಿಯಲು ಬಿಡುವುದಿಲ್ಲ. ಕಾಡಿನಿಂದ ಬಂದ ಅರ್ಜುನನಿಗೆ ಮಾವುತ ವಿನು ತಿನ್ನಲು ಆಹಾರವಾಗಿ ಅನ್ನ ಮತ್ತು ಹುರುಳಿಕಾಳನ್ನು ಮುದ್ದೆ ಮಾಡಿ ತಿನ್ನಲು ನೀಡುತ್ತಾನೆ. ೫೬ ವರ್ಷ ವಯಸ್ಸಿನ ಅರ್ಜುನ ಇಲ್ಲಿಯ ವರೆವಿಗು ಸೂಮಾರು ೬ ಬಾರಿ ಅಂಬಾರಿ ಹೊತ್ತು ದಸರಾದಲ್ಲಿ ಭಾಗಿಯಾಗಿ, ದಸರಾದ ಕೇಂದ್ರಬಿಂದುವಾಗಿದ್ದಾನೆ.

ಕಾಡಾನೆ ಹಿಡಿದು ಪಳಾಗಿಸುವ ಕಾರ್ಯದಲ್ಲಿ ಅರ್ಜುನನ ಪಾತ್ರ ಅಪಾರ. ಕಾಡಂಚಿನ ಗ್ರಾಮಗಳಲ್ಲಿ ಹುಲಿ, ಚಿರತೆ, ಕರಡಿಯಂತಹ ವನ್ಯ ಮೃಗಗಳು ಕಾಣಿಸಿಕೊಂಡಾಗ ಅವುಗಳ ಸೆರೆ ಹಿಡಿಯುವ ಕಾರ್ಯದಲ್ಲಿ ಅರ್ಜುನ ಅರಣ್ಯ ಸಿಬ್ಬಂದಿಯೊಂಡನೆ ಜೊತೆಯಾಗುತ್ತಾನೆ.

ಇನ್ನು ಅರ್ಜುನ ಸೊಪ್ಪು ತರಲು ಕಾಡಿಗೆ ಹೋದಾಗ ಎಷ್ಟೋ ಬಾರಿ ಕಾಡಾನೆಗಳು ಅರ್ಜುನನ ಮೇಲೆ ದಾಳಿ ಮಾಡುತ್ತಾವೆ. ಅವುಗಳೊಡನೆ ಜಗಳವಾಡಿ ಗಾಯಗೊಂಡಿದ್ದಾನಂತೆ. ಜಗಳ ಮುಗಿದು ಕಾಡಾನೆ ಓಡಿಹೋಗುವವರೆಗು ಅರ್ಜುನನ ಮೇಲೆ ಕುಳಿತಿದ್ದ ಮಾವುತ ವಿನುನ ಜೀವಾ ಬಾಯಿಗೆ ಬರುವಂತಾಗುತ್ತದೆ ಎಂದು ಮಾವುತ ತನ್ನ ಅನುಭವವನ್ನು ಹಂಚಿಕೊಂಡರು.
ಕೇವಲ ಹಗಲಲ್ಲಿ ಮಾತ್ರವಲ್ಲದೆ ರಾತ್ರಿಯ ವೇಳೆಯೂ ಸಹಾ ಅರ್ಜುನನ ಕಾವಲು ವಿನುವಿನದು. ತನ್ನ ಜೀವಿತವನ್ನು ಆನೆ ಜೊತೆ ಕಳೆಯುವ ವಿನು ತನ್ನ ವೃತಿ ಹಾಗೂ ಜೀವನವೆಲ್ಲವೂ ಆನೆಯೆ ಆಗಿದ್ದೆ. ಒಂದು ಉತ್ತಮ ಭಾಂದವ್ಯ ಅರ್ಜುನ ಮತ್ತು ವಿನು ಇಬ್ಬರ ನಡುವೆ ಇದೆ. ಮೂಕ ಪ್ರಾಣಿಯ ಭಾವನೆಗಳಿಗೆ ಮಾವುತ ವಿನುವಿನ ಉತ್ತಮ ಸ್ಪಂದನೆಯಿಂದ ಅರ್ಜುನ ವಿನುವಿನೋಡನೆ ಹೊಂದಿಕೊಂಡಿದ್ದಾನೆ.

ಒಟ್ಟಾರೆ ಅರ್ಜುನ ಮತ್ತು ಮಾವುತ ವಿನುವಿನ ನಡುವೆ ಅವಿನಭಾವ ಸಂಬಂಧವಿದೆ. ಒಬ್ಬರನೊಬ್ಬರು ಬಿಟ್ಟಿರದೆ ಜೊತೆಯಾಗಿದ್ದಾರೆ. ವನ್ಯ ಜೀವಿ ಹಾಗೂ ಮಾನವನ ನಡುವಿನ ಭಾಂದವ್ಯಕ್ಕೆ ಉತ್ತಮ ಊದಾಹರಣೆ.

-ಅನಿಲ್ ಎ.ಎಸ್
ಪತ್ರಿಕೋದ್ಯಮ ವಿದ್ಯಾರ್ಥಿ, ಮಾನಸಗಂಗೋತ್ರಿ

One thought on “ದಸರಾ ನಂತರದ ಅರ್ಜುನನ ಕಾಯಕ

  • December 3, 2017 at 7:33 am
    Permalink

    Good Job. . . Ani do well .. Inna creativity use madko anil

    Reply

Leave a Reply

Your email address will not be published. Required fields are marked *