ಗೆಳೆಯರೊಡನೆಯ ಫಾರೆಸ್ಟ್ ಪ್ರವಾಸದ ವಿಸ್ಮಯಕಾರಿ ಕ್ಷಣಗಳು

ಬಿಡುವಿಲ್ಲದೆ ಪರೀಕ್ಷೆಗೆ ಓದಿ, ಬರೆದು ಸಾಕಾಗಿಹೋಗಿತ್ತು. ಕಣ್ಣುಗಳು ಅಕ್ಷರಗಳನ್ನು ನೋಡಿ ನೋಡಿ ಕಣ್ಣೀರು ಸುರಿಸುತ್ತಿದ್ದವು. ಆದರೆ ಪರೀಕ್ಷೆ ಮುಗಿಸಿ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋದಾಗ ಅಲ್ಲಿನ ಅಚ್ಚ ಹಸಿರು ಕಣ್ಮನವನ್ನು ತಣಿಸಿತು.

ಮೊದಲ ಬಾರಿಗೆ ಫ್ಯಾಮಿಲಿ ಬಿಟ್ಟು ಸ್ನೇಹಿತರ ಜೊತೆ ಎರಡು ದಿನಗಳ ಪ್ರವಾಸಕ್ಕೆ ಹೋದ ನನಗೆ ಸ್ವಲ್ಪ ಆತಂಕ, ಜೊತೆಗೆ ಹೆಚ್ಚು ಖುಷಿಯಾಗುತ್ತಿತ್ತು. ರೈಲಿನಲ್ಲಿ ಆರಂಭವಾದ ಪಯಣದಲ್ಲಿ ಗಾನಬಜಾನ, ಕಿಟಲೆ, ಹರಟೆ ಹೊಡೆಯುತ್ತಾ ಅದೆಷ್ಟು ಬೇಗ ಸಮಯ ಕಳೆಯಿತೋ ಗೊತ್ತಾಗಲಿಲ್ಲ. ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ನಮ್ಮದು-ತಮ್ಮದು ಎನ್ನದೆ ಎಲ್ಲ ಲೇಗೆಜ್ ಗಳನ್ನು ಎಲ್ಲರೂ ಹೊತ್ತು ಹೊಟೆಲ್ ಕಡೆಗೆ ನಡೆದೆವು.

ಹೋಟೆಲ್‍ನಲ್ಲಿ ಬೆಳಗಿನ ತಿಂಡಿ ಮುಗಿಸಿ ಮತ್ತೆ ಪ್ರಯಾಣ ಆರಂಭಿಸಿದೆವು. ಬಸ್ಸು ಇಳಿದು 2ಕಿ.ಮೀ ದೂರ ನಡೆದು ಗೆಳೆಯನ ಮನೆಗೆ ತಲುಪಿದೆವು. ಬಿಸಿಲಿನಲ್ಲಿ ದಣಿದು ಬಂದ ನಮಗೆ ತಣ್ಣನೆಯ ನೀರು, ಜ್ಯೂಸ್ ಸುಧಾರಿಸಿತು. ಅನಂತರ ಎಲ್ಲರೂ ಪರಸ್ಪರ ಪರಿಚಯ ಮಾಡಿಕೊಂಡು ಊಟ ಮುಗಿಸಿ ವಿಶ್ರಾಂತಿ ಪಡೆದು ಹೊರಡಲು ಸಿದ್ದವಾದೆವು. ಅದು ಚಾಮರಾಜನಗರ ಜಿಲ್ಲೆಯ ಬೇಡಗೂಳಿಯ ದಟ್ಟ ಫಾರೆಸ್ಟ್. ಎಂದೂ ಬಾರದ ಪೊಲೀಸ್  ಅಂದೇ ಬಂದು ನಮ್ಮ ಪ್ರಯಾಣಕ್ಕೆ ತಡೆಯೊಡ್ಡಿದರು.

ನಾವೆಲ್ಲ 3-4 ಬಾರೀ ಆಸೆಯಿಂದ ಹೋಗಿ ಬಸ್ಸು ಹತ್ತುವುದು ಇಳಿಯುವುದೇ ಆಯಿತು ಅದರೂ ಭರವಸೆ ಕಳೆದುಕೊಳ್ಳದೆ ಕೊನೆಗೆ ಒಪ್ಪಿಗೆ ಪಡೆದೆವು. ಇದಾದಮೇಲೆ ಹೋಗಲು ವಾಹನ ವಿಲ್ಲದೆ ಕಂಗಾಲಾಗಿದ್ದಾಗ ಅಲ್ಲಿಗೆ ನೀರು ಸರಬರಾಜು ಮಾಡುವ ಟೆಂಪೊ ಬಂತು. ಅವರು ಕೂಡ ಮೊದಲು ತುಂಬಾ ಸತಾಯಿಸಿದರಾದರು ಕರೆದುಕೊಂಡು ಹೋಗಲು ಒಪ್ಪಿದರು. ಅದಾಗಲೆ ಸೂರ್ಯಾಸ್ತವಾಗಿತ್ತು ಸಂಜೆಯ ತಂಗಾಳಿ ಜೊತೆಗೆ ಕತ್ತಲು ಕವಿದಿತ್ತು ಆದರು ಸ್ನೇಹಿತರ ಕಿರುಚಾಟ ಕೂಗು ಕಡಿಮೆ ಇರಲಿಲ್ಲ. ಅವರು ನಮ್ಮನ್ನು ಜೋಪಾನವಾಗಿ ಕಾಡು ತಲುಪಿಸಿದರು.

ಕಾಡಿನಲ್ಲಿ ಬುಡಕಟ್ಟು ಜನರಿರುವ ಜಾಗಕ್ಕೆ ಬಂದೆವೆ. ಅಲ್ಲಿನ ಗಿರಿಜನರು ಪಾನಮತ್ತರಾಗಿ ಕಂಬಳಿ ಹೊದ್ದು ಕೂಗಾಡುತ್ತಾ ನಮ್ಮನ್ನು ವಿಚಿತ್ರವಾಗಿ ನೋಡುತ್ತಿದ್ದರು. ಅದ ನೋಡಿದ ನಮಗೆ ಒಂದು ಕ್ಷಣ ಗಬರಿಯಾಯಿತು. ಆನಂತರ ಮನೆಯೊಂದರಲ್ಲಿ ತಂಗಲು ನಿರ್ಧರಿಸಿ ಫೈಯರ್ ಕ್ಯಾಂಪ್ ಹಾಕಿ ಅಲ್ಲಿಯೇ ಹಾಡು, ನೃತ್ಯ, surprise birthday celebration’s ಕೂಡ ಮಾಡಿದೆವು. ನಾವು ಅಲ್ಲಿಗೆ ಹೋದ ಉದ್ದೇಶ ತಿಳಿಸಿ, ಅಲ್ಲಿನ ಜನರ ಜೊತೆ ಮಾತು ಕತೆ ಆರಂಭಿಸಿದೆವು ಅವರು ನಮ್ಮೊಂದಿಗೆ ಉತ್ತಮವಾಗಿ ಪ್ರತಿಕ್ರಿಯಿಸಿದರು. ಇದರ ಜೊತೆಗೆ ಮತ್ತೊಂದೆಡೆ ಅಡುಗೆ ತಯಾರಿಯೂ ನಡೆಯುತ್ತಿತ್ತು.

ಅಂತಿಮವಾಗಿ ಎಲ್ಲರೂ ಒಟ್ಟಿಗೆ ಊಟ ಮಾಡಿ Truth and Dare ಗೇಮ್ ಆಟ ಮುಗಿಸಿ ಮಲಗುವಷ್ಟರಲ್ಲಿ ಬೆಳಗಿನ ಜಾವ 2 ಗಂಟೆ. ಮುಂಜಾನೆ ಬೇಗನೆ ಎದ್ದು ಎಲ್ಲರು ಪ್ರೇಶ್ ಆಗಿ ತಿಂಡಿ ತಿಂದು ಹಾಡಿ ಜನರ ಆಚಾರ-ವಿಚಾರ ತಿಳಿದು ಅವರ ಸಂಗೀತ ಕೇಳಿ, ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವಾಗ ಬಾಲ್ಯದ ನೆನಪಾಯಿತು. ನಂತರ ಎಮರಾಲ್ಡ್ ಎಸ್ಟೇಟ್ ನೋಡಲು ಪೊಲೀಸ್ ಸಿಬ್ಬಂದಿ ಜೊತೆಗೆ ನೆಡೆದೆವು ಎಸ್ಟೇಟ್ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಕೆಳಭಾಗ ಹರಿಯುತ್ತಿದ್ದ ನೀರಿನ ಝಳು-ಝಳು ಸಂಗೀತದ ಜೊತೆ ಹಕ್ಕಿಗಳ ಮಧುರ ಗಾನ ರೋಮಾಂಚನವಾಗಿತ್ತು. ಎಲ್ಲರು ಪೋಟೋಗೆ ಪೋಸ್ ನೀಡುತ್ತ ಪ್ರಕೃತಿಯ ಸೌಂದರ್ಯ ಸವಿಯುತ್ತ ಮೈಮರೆತರು. ಅಲ್ಲದೆ ನಿಸರ್ಗದ ಸೊಬಗನ್ನು ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿಯಲಾಯಿತು.

ಇನ್ನು ಕಾಡಿನ ದಾರಿಯಲ್ಲಿ ಯಾವುದೇ ಭಯಾನಕ ಪ್ರಾಣಿಯು ಕಾಣಲಿಲ್ಲ ಒಂದೆರಡು ಕಾಡು ಕುರಿ, ಹಂದಿಯನ್ನು ನೋಡಿದೆವು. ಕಾಡಿನಿಂದ ಹೊರ ನಡೆದಾಗ ಜಿಂಕೆ, ನವಿಲುಗಳು ಕಾಣಿಸಿಕೊಂಡವು. ಅಗಾಗ ಎದುರಾದ ಸಣ್ಣ-ಪುಟ್ಟ ಅಡೆತಡೆಗಳು ನಮ್ಮ ಪ್ರವಾಸವನ್ನು ಮತ್ತಷ್ಟು ವಿಸ್ಮಯಕಾರಿಯಾಗಿ ಮಾಡಿದೆವು. ಸ್ನೇಹಿತರೆಲ್ಲರೂ ತುಂಬಾ ಮೌನಿಯಾದ ನನ್ನನ್ನು ಮಾತಿನ ಮಧ್ಯೆ ಸೇರಿಸಿಕೊಂಡು ಚೂರು ಬೇಜಾರ್ ಆಗದಂತೆ ನೋಡಿಕೊಂಡರು. ಮತ್ತೆ ಮತ್ತೆ ಅವರೊಡನೆ ಹೋಗುವ ಆಸೆ ಉಂಟು ಮಾಡಿದರು.

ರಕ್ಷಿತ. ಬಿ.ಎನ್
ಪತ್ರಿಕೋದ್ಯಮ ವಿದ್ಯಾರ್ಥಿ, ಮಾನಸಗಂಗೋತ್ರಿ

One thought on “ಗೆಳೆಯರೊಡನೆಯ ಫಾರೆಸ್ಟ್ ಪ್ರವಾಸದ ವಿಸ್ಮಯಕಾರಿ ಕ್ಷಣಗಳು

  • January 8, 2018 at 6:51 pm
    Permalink

    Superb one rakshitha keep it up dr.

    Reply

Leave a Reply

Your email address will not be published. Required fields are marked *