ಕಲಾವಿದರು ಎದುರಿಸುವ ಅವಮಾನ, ಕಷ್ಟ-ಕಾರ್ಪಾಣ್ಯಗಳ ಬಿತ್ತರಿಸುವ ಬೀದಿ ನಾಟಕವಿದು

ಪ್ರತಿಯೊಬ್ಬ ಕಲಾವಿದ ಗೌರವಯುತವಾಗಿ ದುಡಿದು, ತನ್ನ ಬದುಕನ್ನು ಸಾಗಿಸುತ್ತಿರುತ್ತಾನೆ. ಜಾಗತೀಕರಣದ ಪ್ರಭಾವದಿಂದ ಅವರೆಲ್ಲಾ ವಲಸೆ ಹೋಗುವಂತಾಗಿ, ಕೈ ಯಲ್ಲಿ ಕೆಲಸವಿಲ್ಲದೇ, ಹೊಟ್ಟೆಗೆ ಊಟವಿಲ್ಲದೇ, ದುರ್ಜನರ ಮುಖವಾಡಕ್ಕೆ ಬಲಿಯಾಗುತ್ತಾರೆ. ಈ ನಂತರ ಯಮಲೋಕವು ಈ ಕಲಾವಿದರನ್ನು ಗೌರವದಿಂದ ಕಂಡು ಸನ್ಮಾನಿಸುತ್ತದೆ. ಕಲೆ ದೇವರು, ಕಲಾವಿದರು ದೇವರ ಮಕ್ಕಳು. ಕಲೆಯನ್ನು, ಕಲಾವಿದರನ್ನು ಗೌರವಿಸಿ ಎಂಬ ಘೋಷದೊಂದಿಗೆ ಈ ಬೀದಿನಾಟಕ ಮುಕ್ತಾಯಗೊಂಡಿತು.

ಬಹುರೂಪಿ ನಾಟಕೋತ್ಸವದಲ್ಲಿ ಮೊದಲ ದಿನ ಪ್ರದರ್ಶನಗೊಂಡ ಬೀದಿ ನಾಟಕದವಿದು. ಜನವರಿ 14ರ ರಂಗಾಯಣದಲ್ಲಿ ಆಯೋಜಿಸಿದ್ದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ‘ಗೆಜ್ಜೆ – ಹೆಜ್ಜೆರಂಗ ‘ ತಂಡದವರು, ಕಲೆಗೆ ಬೆಲೆಯಿಲ್ಲದ ಈ ನಾಡಿನಲ್ಲಿ ನಿಜವಾದ ಕಲಾವಿದರು ಎದುರಿಸುವ ಅವಮಾನ, ಕಷ್ಟ ಕಾರ್ಪಾಣ್ಯಗಳನ್ನು ಸವಿವರವಾಗಿ ಬಿತ್ತರಿಸುವ ‘ಮುಖವಾಡ ‘ ಎಂಬ ಬೀದಿ ನಾಟಕವಿದು.

ಮೈಸೂರಿನವರಾದ ಉದಯಕುಮಾರ್ ಅವರು ಈ ನಾಟಕವನ್ನು ನಿರ್ದೇಶಿಸಿದ್ದು, ಪ್ರೇಕ್ಷಕರಿಗೆ ಮನೋರಂಜನೆಯ ಜೊತೆಗೆ ಕಲೆಯ ಬಗ್ಗೆ ಗೌರವವನ್ನು ತಂದುಕೊಟ್ಟಿತು.

Leave a Reply

Your email address will not be published. Required fields are marked *